ಅಕ್ರಮ ಸಂಬಂಧ ಅಪರಾಧವಲ್ಲ
Team Udayavani, Sep 28, 2018, 6:55 AM IST
ಹೊಸದಿಲ್ಲಿ: ವಿವಾಹೇತರ ಸಂಬಂಧಗಳು ವ್ಯಭಿಚಾರವಲ್ಲ ಹಾಗೂ ಅದನ್ನು ಅಪರಾಧ ಎಂದು ಪರಿಗಣಿಸಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಕೇರಳ ಮೂಲದ ಜೋಸೆಫ್ ಶೈನ್ ಹಾಗೂ ಭಾರತ ಸರಕಾರ ನಡುವಿನ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ಪ್ರಕಟಿಸಿರುವ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ವಿವಾಹೇತರ ಸಂಬಂಧಗಳನ್ನು ಅಪರಾಧ ಎಂದು ಪರಿಗಣಿಸುವ 158 ವರ್ಷಗಳ ಹಿಂದಿನ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 497ನೇ ವಿಧಿಯನ್ನು ರದ್ದುಗೊಳಿಸಿದೆ.
ಜತೆಗೆ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವ್ಯಕ್ತಿಯ ವಿರುದ್ಧ ಪತಿಯು ದೂರು ದಾಖಲಿಸಲು ಅವಕಾಶ ನೀಡುವ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 198(1) ಹಾಗೂ 198(2) ವಿಧಿ ಗಳನ್ನೂ ನ್ಯಾಯಾಲಯ ರದ್ದು ಮಾಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ| ಆರ್.ಎಫ್. ನಾರಿಮನ್, ನ್ಯಾ| ಎ.ಎಂ. ಖಾನ್ವೀಲ್ಕರ್, ನ್ಯಾ| ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ| ಇಂದೂ ಮಲ್ಹೋತ್ರಾ ಅವರು ನ್ಯಾಯಪೀಠದಲ್ಲಿದ್ದರು.
ಐಪಿಸಿ 497ನೇ ವಿಧಿಯು ಪತ್ನಿಯನ್ನು ಪತಿಯ ಸ್ವತ್ತು ಎಂದು ಪರಿಗಣಿಸುತ್ತದೆ. ಆದರೆ ಪತ್ನಿಯು ಪತಿಯ ಆಸ್ತಿಯೂ ಅಲ್ಲ, ಪತಿ ಆಕೆಯ ಯಜಮಾನನೂ ಅಲ್ಲ ಎಂದ ನ್ಯಾಯಪೀಠ ಹೇಳಿತು. ಈ ವಿಧಿಯು ಲಿಂಗ ಸಮಾನತೆ ಪರಿಕಲ್ಪನೆಗೆ ವಿರುದ್ಧವಾಗಿದ್ದು, ಅಸಾಂವಿಧಾನಿಕವಾಗಿರುವುದರಿಂದ ಈ ಇಡೀ ವಿಧಿಯನ್ನು ರದ್ದುಗೊಳಿಸುತ್ತಿರುವುದಾಗಿ ಘೋಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.