ಸಂವಿಧಾನ ಸುಟ್ಟವರಿಗೆ ಕಠಿಣ ಶಿಕ್ಷೆಯಾಗಲಿ
Team Udayavani, Sep 28, 2018, 10:48 AM IST
ಬೀದರ: ಸಂವಿಧಾನ ಸುಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು. ಅಲ್ಲದೆ, ಬರುವ ಲೋಕಸಭೆ ಚುನಾವಣೆಯಲ್ಲಿ ದಲಿತರು ಏಕತೆಯಿಂದ ಮತದಾನದ ಹಕ್ಕು ಚಲಾಯಿಸಿ ಶಕ್ತಿ ತೋರಿಸಬೇಕು ಎಂದು ಬೈಲೂರು ನಿಷ್ಕಲಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಕರೆ ನೀಡಿದರು.
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಥಾಪಿಸಿದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಯಾರು ಸುಟ್ಟರು, ಅವರು ಯಾವ ಧರ್ಮದವರು ಎಂದು ತಿಳಿದುಕೊಂಡು ಅವರ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು.
ಸಂವಿಧಾನಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಹಾಗೆಂದು ಬೆಂಗಳೂರು, ದೆಹಲಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಿದರೆ ಸಾಲದು, ಲೋಕಸಭೆ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ಅನೇಕ ಮಠಾಧಿಶರು ಭಾಗವಹಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿ, ಇಂದಿನ ದಿನಗಳಲ್ಲಿ ಕಾವಿಗಳು ಒಂದೊಂದು ರಾಜಕೀಯ ಪಕ್ಷಕ್ಕೆ ಜೋತುಬಿದ್ದಿದ್ದಾರೆ. ಒಬ್ಬೊಬ್ಬರು ಒಂದೊಂದು ಪಕ್ಷಕ್ಕೆ ವಾಲಿದ್ದಾರೆ. ಕಾವಿ ಅಪಾಯವಲ್ಲ, ಬದಲಿಗೆ ಕಾವಿ ಒಳಗಿನ ಖಾವಿ ಅಪಾಯಕಾರಿಯಾಗಿದೆ. ಮಠಾಧೀಶರಾದವರು ಸಮಾಜ ಏಳ್ಗೆಗೆ ಶ್ರಮಿಸಬೇಕು.
ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ನಾನು ದಲಿತ ಇದ್ದೇನೆ, ಕೆಳವರ್ಗದ ಜನರ ಬಗ್ಗೆ ಅಪಾರ ಪ್ರೀತಿ ಇದೆ. ಗುಡಿ-ಗುಂಡಾರಗಳನ್ನು ಕಟ್ಟಲು ದಲಿತರು ಬೇಕು. ಆದರೆ, ದೇವಸ್ಥಾನದಲ್ಲಿ ಮೂರ್ತಿ ಸ್ಥಾಪನೆ ಆದರೆ ಅದೇ ದಲಿತರಿಗೆ ಪ್ರವೇಶಕ್ಕೆ ಪರವಾನಗಿ ಇಲ್ಲ. ಅಂಬೇಡ್ಕರ್ ಅವರು ಯಾವತ್ತೂ ಗಣೇಶ ಹಬ್ಬವನ್ನು ಒಪ್ಪಿಕೊಂಡಿಲ್ಲ. ಆದರೆ, ಇಂದಿನ ದಿನಗಳಲ್ಲಿ ದಲಿತ ಬಡಾವಣೆಗಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಕುಡಿದು ಹಾಳಾಗುವಂತೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ನಾವು ಮರೆಯುತ್ತಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲಬುರಗಿಯ ರಾಬರ್ಟ್ ಮೈಕಲ್ ಮಿರಿಂಡಾ, ಭಂತೆ ಧಮ್ಮನಾಗ, ಶ್ರೀಮಂತ ಕೋಕಾಟೆ ಮಾತನಾಡಿ, ಸಂವಿಧಾನಕ್ಕೆ ಧಕ್ಕೆ ತರುವ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಸಂವಿಧಾನದ ಮಹತ್ವ ಕುರಿತು ಜನ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಸಂವಿಧಾನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಗಳು ಶುರುಆಗಬೇಕು ಎಂದರು. ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ದಲಿತರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಪರಿಷತ್ ಸದಸ್ಯ ವಿಜಯಸಿಂಗ್, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಕಾಗಿನೆಲೆ ಪೀಠದ ಸಿದ್ಧರಾಮನಂದ ಪುರಿ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಚನ್ನಬಸವಾನಂದ ಸ್ವಾಮೀಜಿ, ಸಿಸ್ಟರ್ ಕ್ರಿಸ್ಟಿನಾ, ಜ್ಞಾನಿ ದರಬಾರ್ ಸಿಂಗ್, ಅಬ್ದುಲ್ ಗನಿ, ಮಹ್ಮದ್ ಗಫಾರ್, ಸೈಯದ್ ಸಿರಾಜೊದ್ದೀನ್, ಮೌಲಾನ್ ಅಬು ತಾಲೀಬ್ ರೆಹಮಾನಿ, ಅಬ್ದುಲ್ ಮನ್ನಾನ್ ಸೇಠ್ಠ…, ಅನಿಲಕುಮಾರ ಬೆಲ್ದಾರ್, ರಾಜು ಕಡ್ಯಾಳ, ಅಮೃತರಾವ್ ಚಿಮಕೋಡೆ, ಬಸವರಾಜ ಮಾಳಗೆ, ಮಾರುತಿ ಬೌದ್ಧೆ, ವಹೀದ್ ಲಖನ್, ಆನಂದ ದೇವಪ್ಪ, ಶ್ರೀಕಾಂತ ಸ್ವಾಮಿ, ಸಿದ್ದು ಪಾಟೀಲ ಹುಮನಾಬಾದ್, ಮಾಳಪ್ಪ ಅಡಸಾರೆ, ರಮೇಶ ಡಾಕುಳಗಿ, ಕಲ್ಯಾಣರಾವ್ ಭೋಸ್ಲೆ, ಅಶೋಕಕುಮಾರ ಮಾಳಗೆ, ನಾರಾಯಣ ಗಣೇಶ, ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಕೌಡ್ಯಾಳ ಇದ್ದರು.
ಹೆಂಡಕ್ಕೆ ಮತ ಮಾರಿಕೊಳ್ಳಬೇಡಿ. ಸಂವಿಧಾನಕ್ಕೆ ಗೌರವ ನೀಡುವ ನಾವು ನಮ್ಮ ಹಕ್ಕು ಚಲಾಯಿಸುವಂತೆ ಆಗಬೇಕು. ಸಂವಿಧಾನಕ್ಕೆ ಧಕ್ಕೆ ತರುವ ಸಂಘ, ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು.
ರಾಜರತನ್ ಅಂಬೇಡ್ಕರ್, ಅಂಬೇಡ್ಕರ್ ಮರಿಮೊಮ್ಮಗ
ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಂಥವರು ಹತ್ತು
ಜನರು ಹುಟ್ಟಿದರೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಭಾರತ ದೇಶಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನದ ಪಾವಿತ್ರವನ್ನು ಪ್ರತಿಯೊಬ್ಬರು ಕಾಪಾಡಬೇಕು.
ಬಂಡೆಪ್ಪ ಖಾಶೆಂಪೂರ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.