ಕೆವಿಜಿ ಪ್ರತಿಮೆ ಕಾಮಗಾರಿ ಅಂತಿಮ: ಶೀಘ್ರ ಉದ್ಘಾಟನೆ
Team Udayavani, Sep 28, 2018, 11:27 AM IST
ಸುಳ್ಯ : ಹಲವು ವಿದ್ಯಾಸಂಸ್ಥೆಗಳ ನಿರ್ಮಾತೃ, ನವ ಸುಳ್ಯದ ರೂವಾರಿ ಕುರುಂಜಿ ವೆಂಕಟರಮಣ ಗೌಡ ಅವರ ಕಂಚಿನ ಪ್ರತಿಮೆ ಸ್ಮಾರಕ ಲೋರ್ಕಾಪಣೆ ಸನಿಹದಲ್ಲಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ.
ಡಾ| ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ಸಮಿತಿ ನೇತೃತ್ವ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ 8.5 ಲಕ್ಷ ರೂ.ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪ್ರತಿಮೆ ಜೋಡಣೆ ಕಾರ್ಯಮಾತ್ರ ಉಳಿದಿದೆ. ನಗರದ ಮಧ್ಯೆ ಹಾದು ಹೋಗುವ ರಸ್ತೆ ಭಾಗಕ್ಕೆ ಅಭಿಮುಖವಾಗಿ ನಿಂತಿರುವಂತೆ 11.3 ಅಡಿ ಎತ್ತರದ ಈ ಪ್ರತಿಮೆ ಶೀಘ್ರ ಎದ್ದು ನಿಲ್ಲಲಿದೆ.
ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುರುಂಜಿ ವೆಂಕಟರಮಣ ಗೌಡ ಅವರ ಎರಡನೆ ಪ್ರತಿಮೆಯಿದು. ಕೆವಿಜಿ ವಿದ್ಯಾಸಂಸ್ಥೆಯ ನೌಕರ ವೃಂದ ಕುರುಂಜಿ ಸರ್ಕಲ್‌ನಲ್ಲಿ ಕಂಚಿನ ಪ್ರತಿಮೆ ನಿರ್ಮಿಸಿತ್ತು. ಈಗ ಎರಡನೇ ಪ್ರತಿಮೆ ಮುಖ್ಯ ರಸ್ತೆ ಸಮೀಪದಲ್ಲಿ ನಿರ್ಮಾಣ ಆಗುತ್ತಿದೆ.
ಹೀಗಿದೆ ಸ್ಮಾರಕ
ಕುರುಂಜಿ ವೆಂಕಟರಮಣ ಗೌಡ ಅವರ ಪ್ರತಿಮೆ ಎರಡು ಅಡಿ 10 ಇಂಚು ಎತ್ತರ ಇದೆ. ಅಡಿಪಾಯದಿಂದ ಪ್ರತಿಮೆಯ ತಲೆ ಭಾಗದ ತನಕ 7.4 ಅಡಿ ಇದೆ. ಪೌಂಡೇಶನ್ ಎತ್ತರ ಪ್ರತಿಮೆ ಪ್ರತಿಷ್ಠಾಪಿಸುವ ಭಾಗದಲ್ಲಿ 3.9 ಫೀಟ್‌ನಷ್ಟು ಇದೆ. ಮೆಟ್ಟಿಲಿನ ಎರಡು ಭಾಗದಲ್ಲಿ ಹಸಿರು ಆಲಂಕಾರಿಕ ಪುಷ್ಪಗಳು, ಸುರಕ್ಷತೆಗಾಗಿ ಸಂಕೋಲೆ ಇರಲಿದೆ. ಬೆಳಕಿನ ವ್ಯವಸ್ಥೆಗೆ ಎಲ್‌ಇಡಿ ಲೈಟ್ ಇರಲಿದೆ. ಆಕರ್ಷಕ ಬಣ್ಣದ ಗ್ರಾನೈಟ್ ಬಳಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡಿದೆ. ಸ್ಮಾರಕದ ಬಳಿ ಫಿಲ್ಟರ್ ಆಧಾರಿತ ಕುಡಿಯುವ ನೀರಿನ ಪರಿಕರ ಜೋಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.