ಕುಟುಂಬದ ಐವರಿಗೆ ಕಾಯಿಲೆ: ಬಾಲಕನೂ ಬಿಟ್ಟ ಶಾಲೆ!


Team Udayavani, Sep 28, 2018, 12:41 PM IST

28-sepctember-8.gif

ನಿಡ್ಪಳ್ಳಿ : ಕುಟುಂಬದ ಐವರು ಸದಸ್ಯರೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಂತ್ವನ ಹೇಳುವ ಮನಸ್ಸುಗಳೂ ಇಲ್ಲ. ಸಹಾಯ ಮಾಡುವ ಕೈಗಳೂ ಇಲ್ಲದೆ ಮನೆಯ ಬಾಲಕ ಶಾಲೆ ಬಿಟ್ಟು ದುಡಿಯಲು ಹೋಗುವ ಸ್ಥಿತಿ. ಒಳಮೊಗ್ರು ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿ ಕುಟುಂಬವೊಂದು ನಿತ್ಯ ನರಕಯಾತನೆ ಅನುಭವಿಸುತ್ತಿದೆ.

ಅಜ್ಜಿಬೆಟ್ಟು ಸಮೀಪದ ಬೆಟ್ಟದ ಬದಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಸೌಲಭ್ಯಗಳೂ ಸಿಕ್ಕಿಲ್ಲ. ಕುಟುಂಬದ ಯಜಮಾನ ಬಟ್ಯಪ್ಪ ಅವರು ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರ ಪತ್ನಿ ಚೋಮು, ಮಕ್ಕಳಾದ ರಾಮು, ಲಕ್ಷ್ಮೀ, ನಾರಾಯಣ ಪಾಟಾಳಿ ಮತ್ತು ನವೀನ ಈ ಪುಟ್ಟ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ. ಮಕ್ಕಳ ಪೈಕಿ ಲಕ್ಷ್ಮೀ ಹಾಗೂ ರಾಮ ಅಂಗವಿಕಲರು. ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಪುತ್ರ ನಾರಾಯಣ ಪಾಟಾಳಿ ಕೆಲವು ತಿಂಗಳಿಂದ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಮನೆಯ ಸ್ಥಿತಿ ಕಂಡು ಚೋಮು ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ನಾರಾ ಯಣ ಪಾಟಾಳಿ ಅವರ ಮಗ ನವೀನ ಅನಿವಾರ್ಯವಾಗಿ 9ನೇ ತರಗತಿಯಲ್ಲಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾನೆ.

ಬೀಳಲು ಸಿದ್ಧವಾದ ಮನೆ
ಎಷ್ಟೋ ವರ್ಷಗಳ ಹಿಂದೆ ಕಟ್ಟಿದ ಮಣ್ಣಿನ ಇಟ್ಟಿಗೆಯ ಮನೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಪುಟ್ಟದಾದ ಇಕ್ಕಟ್ಟಾದ ಮನೆಯಲ್ಲಿ ಐವರು ವಾಸ್ತವ್ಯವಿದ್ದಾರೆ. ಕುಡಿಯುವ ನೀರಿನ ಸಂಪರ್ಕವೂ ಇಲ್ಲ. ನೆರೆಹೊರೆಯವರ ಬಾವಿಯೇ ಗತಿ. ಸರಕಾರದಿಂದ ಈ ಕುಟುಂಬಕ್ಕೆ ಮನೆಯೂ ಮಂಜೂರಾಗಿಲ್ಲ. ಕಾರಣವೇನೆಂಬುದೂ ಗೊತ್ತಿಲ್ಲ. ಸರಕಾರದಿಂದ ಉಚಿತ ಮನೆ ಸಿಗುತ್ತದೆ ಎಂಬ ಮಾಹಿತಿಯೂ ಸರಿಯಾಗಿ ಇದ್ದಂತಿಲ್ಲ.

ಇಬ್ಬರು ಆಸ್ಪತ್ರೆಗೆ ದಾಖಲು
ಮನೆಯ ಆಧಾರ ಸ್ತಂಭವಾಗಿದ್ದ ನಾರಾಯಣ ಪಾಟಾಳಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಡಿಯಲು ಹೋಗುತ್ತಿದ್ದ ನವೀನನೂ ಚಿಂತೆಯಿಂದಲೇ ಆಸ್ಪತ್ರೆ ಸೇರಿದ್ದಾನೆ. ಅಂಗವಿಕಲ ಸಹೋದರ, ಸಹೋದರು ಹಾಗೂ ವೃದ್ಧೆ ಚೋಮು ಮಾತ್ರ ಇದ್ದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

‌ಸಹಾಯ ಬೇಕಿದೆ
ಕುಟುಂಬ ಬಹಳ ನೊಂದಿದೆ. ಸಾರ್ವಜನಿಕರ ಸಹಕಾರ ಕುಟುಂಬಕ್ಕೆ ಅತೀ ಅಗತ್ಯವಾಗಿದೆ. ಎಲ್ಲರೂ ಸೇರಿ ಈ ಕುಟುಂಬ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಮುತುವರ್ಜಿ ವಹಿಸಬೇಕಾಗಿದೆ. ಅನಾರೋಗ್ಯಪೀಡಿತರಾದ ಇಬ್ಬರು ಮಕ್ಕಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದೇವೆ. ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ.
– ಕೃಷ್ಣಪ್ರಸಾದ್‌ ಆಳ್ವ,
 ಸ್ಥಳೀಯ ನಿವಾಸಿ

ಮನೆ ಕೊಡಿಸಲು ಪ್ರಯತ್ನ
ಒಳಮೊಗ್ರು ಗ್ರಾಮದಲ್ಲಿ ಕುಟುಂಬವೊಂದು ಈ ರೀತಿಯಾಗಿ ಸಂಕಷ್ಟದಲಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕುಟುಂಬದ ಮನೆಗೆ ಭೇಟಿ ನೀಡಿ ಪರಿಶಿಲನೆ ನಡೆಸುತ್ತೇನೆ. ಭೂಮಿಯ ದಾಖಲೆ ಪತ್ರ ಸಮರ್ಪಕವಾಗಿದ್ದಲ್ಲಿ ಸರಕಾರದ ವತಿಯಿಂದ ಅವರಿಗೊಂದು ಮನೆ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇನೆ. ಉಳಿದಂತೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಕೊಡಿಸಲು ಮುತುವರ್ಜಿ ವಹಿಸುತ್ತೇನೆ.
 - ಯತಿರಾಜ್‌ ರೈ ನೀರ್ಪಾಡಿ,
ಒಳಮೊಗ್ರು ಗ್ರಾ.ಪಂ. ಅಧ್ಯಕ್ಷರು

ಟಾಪ್ ನ್ಯೂಸ್

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.