ಅಡ್ಡದಬೀದಿ ಮನೆಗಳಿಗೆ ನೀರು ನುಗ್ಗಿ ಹಾನಿ
Team Udayavani, Sep 28, 2018, 12:54 PM IST
ವಿಟ್ಲ: ವಿಟ್ಲ ಪ.ಪಂ. ಬಿಡುಗಡೆಗೊಳಿಸಿದ 19 ಲಕ್ಷ ರೂ. ಅನುದಾನದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಭಾರೀ ಮಳೆಗೆ ಅಡ್ಡದಬೀದಿಯಲ್ಲಿರುವ ಕೆಲವು ಮನೆಗಳಿಗೆ ಹಾನಿಯಾಗಿದೆ. ವಿಟ್ಲ- ಪುತ್ತೂರು ರಸ್ತೆಯಿಂದ ನೇರವಾಗಿ ವಿಟ್ಲ – ಕಾಸರಗೋಡು ರಸ್ತೆಗೆ ತೆರಳುವುದಕ್ಕೆ ಅರಮನೆ ಗದ್ದೆ ಬದಿಯಲ್ಲಿರುವ ಚರಂಡಿ ಸಮೀಪದಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಪ.ಪಂ. ಕಾಮಗಾರಿ ಕೈಗೆತ್ತಿಕೊಂಡಿತ್ತು.
ಹಿಟಾಚಿ ಸಂಚರಿಸುವ ಉದ್ದೇಶದಿಂದ ಚರಂಡಿಗೆ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಗೆ ಚರಂಡಿಯಲ್ಲಿ ನೀರು ಹರಿಯದೆ ಮನೆಗಳಿಗೆ ನುಗ್ಗಿದೆ. ಅಡ್ಡದಬೀದಿ ನಿವಾಸಿಗಳಾದ ಅಬ್ದುಲ್ಲ, ವೇದಾವತಿ ಅಮ್ಮ, ರವಿ ಜೋಶಿ ಅವರ ಮನೆಗೆ ನೀರು ನುಗ್ಗಿದೆ. ಅಬ್ದುಲ್ಲ ಹಾಗೂ ವೇದಾವತಿ ಅವರ ಬಾವಿಯಲ್ಲಿ ಚರಂಡಿಯ ನೀರು ತುಂಬಿಕೊಂಡಿದೆ. ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿಟ್ಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ನಗರ ಅಧ್ಯಕ್ಷ ಕಾಂಗ್ರೆಸ್ನ ವಿ.ಕೆ.ಎಂ. ಅಶ್ರಫ್ ಆಗ್ರಹಿಸಿದ್ದಾರೆ.
ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯ ವಿ. ರಾಮದಾಸ ಶೆಣೈ, ಮುಖ್ಯಾಧಿಕಾರಿ ಮಾಲಿನಿ ಸ್ಥಳ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಳಿಕ ಚರಂಡಿಯಿಂದ ಮಣ್ಣು ಎತ್ತಲಾಯಿತು.
ಸ್ಥಳೀಯರ ಆಗ್ರಹ
ಪೇಟೆಯ ತ್ಯಾಜ್ಯ ಸಹಿತ ನೀರು ಮನೆಗೆ ಹಾಗೂ ಕುಡಿಯುವ ನೀರಿನ ಮೂಲಗಳಿಗೆ ನುಗ್ಗಿ ಆಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.