ಸಂವಿಧಾನ ತಿದ್ದುಪಡಿ ಹೇಳಿಕೆ ಸರಿಯಲ್ಲ: ಹನುಮಂತಪ್ಪ
Team Udayavani, Sep 28, 2018, 2:48 PM IST
ಚಿತ್ರದುರ್ಗ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ಸಂವಿಧಾನ ವಿರೋಧಿ ಉಲ್ಲಂಘಿಸುವ ಹೇಳಿಕೆ ನೀಡಿರುವುದು ಭಾರತದ ಸಂವಿಧಾನಕ್ಕೆ ಅಪಚಾರ ಎಸಗಿದಂತೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಗೌರವ ಕಾರ್ಯದರ್ಶಿ ಎಚ್. ಹನುಮಂತಪ್ಪ ಹೇಳಿದರು.
ನಗರದ ಹೊರವಲಯದ ಸೀಬಾರ ಸಮೀಪದ ನಿಜಲಿಂಗಪ್ಪ ಸ್ಮಾರಕದ ಸಭಾಂಗಣದಲ್ಲಿ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಅಖೀಲ ಕರ್ನಾಟಕ ವಿಚಾರ ವೇದಿಕೆಗಳ ಸಂಘ ಮತ್ತು ತಾರಾ ಮಂಡಲ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಪದವಿ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಭಾರತ ಸಂವಿಧಾನ ಅರ್ಥ, ಅರಿವು, ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ತಿರುಚುವ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ. ರಾಜಕೀಯಕ್ಕೆ ಅಸ್ತಿತ್ವ ಸಿಗುವುದು ಸಂವಿಧಾನದಿಂದ. ಹಾಗಾಗಿ ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ತಿಳಿಸಕೊಡಬೇಕಾಗಿದೆ. ಸಂವಿಧಾನದ ಕರಡು ಸಮಿತಿ ಸದಸ್ಯರಾಗಿದ್ದ ಎಸ್. ನಿಜಲಿಂಗಪ್ಪನವರು 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಸಂವಿಧಾನದ ಆಶಯದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದರು ಎಂದು ಸ್ಮರಿಸಿದರು.
ಬ್ರಿಟಿಷರ ಗುಲಾಮಗಿರಿ, ದಬ್ಟಾಳಿಕೆ ವಿರುದ್ಧ ಲಕ್ಷಾಂತರ ಜನರು ತ್ಯಾಗ-ಬಲಿದಾನ ಮಾಡಿದ್ದಾರೆ. ಅನೇಕರು ಜೈಲುವಾಸ ಅನುಭವಿಸಿದ್ದಾರೆ. 2 ವರ್ಷ, 11 ತಿಂಗಳು, 18 ದಿನಗಳ ಕಾಲ ಶ್ರಮಿಸಿ ಸಂವಿಧಾನ ರಚಿಸಿ ರಾಜ್ಯಾಂಗ ರಚನೆ ಮಾಡಲಾಗಿದೆ. ಸಂವಿಧಾನ ರಚನೆ ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದರು. ರಾಜೇಂದ್ರಪ್ರಸಾದ್ ಸಮಿತಿಯ ಅಧ್ಯಕ್ಷರಾಗಿದ್ದರು. ಅದರಲ್ಲಿ ಒಬ್ಬರು ಮೃತಪಟ್ಟರು. ಮತ್ತೂಬ್ಬರು ರಾಜೀನಾಮೆ ಕೊಟ್ಟರು.
ಇನ್ನೊಬ್ಬರು ಅಮೆರಿಕಾದಲ್ಲಿದ್ದರು. ಮತ್ತೂಬ್ಬರಿಗೆ ಅನಾರೋಗ್ಯವಾಗಿತ್ತು. ಹೀಗೆ ಒಂದೊಂದು ಕಾರಣಗಳಿಂದ ಎಲ್ಲರೂ ಸಮಿತಿಯಿಂದ ಹಿಂದೆ ಸರಿದಾಗ ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದರು.
ಭಾರತ ದೊಡ್ಡ ದೇಶವಾಗಿದ್ದು ತಾಂತ್ರಿಕವಾಗಿ ಬೆಳೆಯುತ್ತಿದೆ. ಆದರೆ ಎಲ್ಲೆಡೆ ಭ್ರಷ್ಟಾಚಾರ ತುಂಬಿದೆ. ಶಾಸನಸಭೆ, ಪಾರ್ಲಿಮೆಂಟ್, ನ್ಯಾಯಾಂಗ ಎಲ್ಲಿಯೂ ನೈತಿಕತೆ ಉಳಿದಿಲ್ಲ. ಆಡಳಿತ ನಡೆಸುವವರು ತಪ್ಪು ಮಾಡುತ್ತಿದ್ದಾರೆ. ಜಾತಿ-ಜಾತಿ ನಡುವೆ ದ್ವೇಷ, ಅಸಮಾನತೆ, ಸ್ವಾರ್ಥ ತಾಂಡವವಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಸಂವಹನಕಾರ ಪ್ರೊ| ಅಬ್ದುಲ್ ರೆಹಮಾನ್ ಪಾಷ, ಸಂವಿಧಾನ, ಭಾರತದ ಮೇಲೆ ಬ್ರಿಟಿಷರ ನೇರ ಆಳ್ವಿಕೆ, ಬ್ರಿಟಿಷರ ನಿಯಂತ್ರಣದಲ್ಲಿದ್ದ ಸ್ಥಳೀಯ ರಾಜರ ಆಳ್ವಿಕೆಯ 565 ಪ್ರಾಂತ್ಯಗಳು, ಸಂವಿಧಾನದ ರಚನೆ ಸಂಬಂ ಧಿಸಿದಂತೆ ಗಾಂಧಿ , ನೆಹರೂ, ಅಂಬೇಡ್ಕರ್, ನಿಜಲಿಂಗಪ್ಪ ಮತ್ತಿತರರು ನಡೆಸಿದ ಸಭೆಗಳು ಮತ್ತಿತರ ವಿಚಾರ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಶಿವಮೊಗ್ಗ ರಮೇಶ್, ನಾಗೇಶ್, ತಾರಾಮಂಡಲದ ಚಳ್ಳಕೆರೆ ಯರ್ರಿಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.