ಭಾರತ್ ಕೋ ಆಪ್.ಬ್ಯಾಂಕ್‌ಗೆ “ಸರ್ವೋತ್ಕೃಷ್ಟ ಬ್ಯಾಂಕ್’ ಪುರಸ್ಕಾರ
Team Udayavani, Sep 28, 2018, 4:36 PM IST
ಮುಂಬಯಿ: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿ ಟೆಡ್ ಸಂಸ್ಥೆ ಸಹಕಾರಿ ಕ್ಷೇತ್ರದ ಸೇವೆಗಾಗಿ ವಾರ್ಷಿಕವಾಗಿ ಪ್ರದಾನಿ ಸುವ “ಸಹಕಾರಿ ಬ್ಯಾಂಕ್ ಪುರಸ್ಕಾರ’ ಪ್ರದಾನ ಸಮಾರಂಭವು ಸೆ. 26 ರಂದು ಸಂಜೆ ದಾದರ್ ಪಶ್ಚಿಮದ ಪ್ರಭಾದೇವಿಯ ವೊವ್‌ಜ್ ಬಾಂಕ್ವೆಟ್ ಸಭಾಗೃಹದಲ್ಲಿ ನಡೆಯಿತು.
ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ. ಸಂಸ್ಥೆಯ 2017-2018 ನೇ ಸಾಲಿನ 2,000 ಕೋ. ರೂ. ಗಳ ಅಧಿಕ ಠೇವಣಿ ವ್ಯವಹಾರ ವಿಭಾಗದ ವಾರ್ಷಿಕ ಪ್ರತಿಷ್ಠಿತ “ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರ’ವನ್ನು ಈ ಬಾರಿಯೂ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಸಂಸ್ಥೆಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.
ಗ್ರಾಹಕರೊಂದಿಗೆ ನಿಕಟ ಸಂಬಂಧ ವನ್ನು ಹೊಂದಿ ಗುಣಮಟ್ಟದ ಕಾರ್ಯ ವೈಖರಿಯೊಂದಿಗೆ ಅಸಾಧರಣಾ ಸೇವೆಗೈದು ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಪಥಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ಭಾರತ್ ಬ್ಯಾಂಕಿನ ಅನುಪಮ ಸೇವೆಯನ್ನು ಪರಿಗಣಿಸಿ ಅಸೋಯೇಶನ್‌ನ 40 ನೇ ವಾರ್ಷಿಕ ಮಹಾಸಭೆ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಭಾರತ್ ಬ್ಯಾಂಕಿಗೆ ಹಸ್ತಾಂತರಿಸಲಾಯಿತು.
ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ. ಅಧ್ಯಕ್ಷ ಕಾಶಿನಾಥ್ ಮೋರೆ, ಉಪಾ ಧ್ಯಕ್ಷ ವಿಠಲ ಚಿವಿಲ್ಕರ್, ಸಂಚಾಲಕ ಸಿ. ಬಿ. ಅಡೂÕಲ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸೋನಾಲಿ ಕದಂ ಇತರ ಪದಾಧಿ ಕಾರಿಗಳು ಭಾರತ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ನಿರ್ದೇಶಕ ಯು. ಎಸ್. ಪೂಜಾರಿ, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ಮತ್ತು ಪ್ರಧಾನ ಪ್ರಬಂಧಕ ದಿನೇಶ್ ಬಿ. ಸಾಲ್ಯಾನ್ ಅವರಿಗೆ “ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಫಲಕ, ಗೌರವಪತ್ರ ಪ್ರದಾನಿಸಿ ಅಭಿನಂ ದಿಸಿದರು. ಕಾರ್ಯಕ್ರಮದಲ್ಲಿ ಬೃಹನ್ಮುಂ ಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ. ಕಾರ್ಯಾಧ್ಯಕ್ಷ ದತ್ತರಾಮ್ ಚಾಳ್‌ಕೆ, ಉಪಕಾರ್ಯಾಧ್ಯಕ್ಷ ದಿನಕರ್ ಖಾಂಡಾÕಳೆ, ಸಂಚಾಲಕ ರುಗಳಾದ ಕಿಶೋರ್ ರಂಗೆ¡àಕರ್, ಪುರುಷೋ ತ್ತಮ ಮಾನೆ, ನಾಗೇಶ್ ಫೂವಾRರ್ ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.