ವಿಂಡೀಸ್ ವಿರುದ್ಧ ಮಿಂಚಿದ ಭವ್ನೆ , ಅಗರ್ವಾಲ್
Team Udayavani, Sep 30, 2018, 6:00 AM IST
ವಡೋದರ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ್ಗೊಂಡ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ 6 ವಿಕೆಟಿಗೆ 360 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಆತಿಥೇಯ ತಂಡದ ಪರ ಅಂಕಿತ್ ಭವ್ನೆ ಆಕರ್ಷಕ ಶತಕ ಹೊಡೆದರೆ (ಅಜೇಯ 116), ಆರಂಭಕಾರ ಮಾಯಾಂಕ್ ಅಗರ್ವಾಲ್ 90 ರನ್ ಬಾರಿಸಿ ಮಿಂಚಿದರು. ಪೃಥ್ವಿ ಶಾ (8) ಮತ್ತು ಹನುಮ ವಿಹಾರಿ (3) ಅವರನ್ನು ಬೇಗನೇ ಕಳೆದುಕೊಂಡ ಮಂಡಳಿ ಬಳಗಕ್ಕೆ ಅಗರ್ವಾಲ್, ನಾಯಕ ಕರುಣ್ ನಾಯರ್ (29), ಶ್ರೇಯಸ್ ಅಯ್ಯರ್ (61) ಆಧಾರವಾದರು. ಕರ್ನಾಟಕದ ಜೋಡಿ ಅಗರ್ವಾಲ್-ನಾಯರ್ 3ನೇ ವಿಕೆಟಿಗೆ 92 ರನ್ ಪೇರಿಸಿತು. 111 ಎಸೆತ ನಿಭಾಯಿಸಿದ ಅಗರ್ವಾಲ್ 14 ಬೌಂಡರಿ, 2 ಸಿಕ್ಸರ್ ಎತ್ತಿದರು. ಅವರ ಶತಕದ ಕನಸಿಗೆ ದೇವೇಂದ್ರ ಬಿಶೂ ಅಡ್ಡಿಯಾದರು.
6ನೇ ಕ್ರಮಾಂಕದಲ್ಲಿ ಆಡಲಿಳಿದ ಅಂಕಿತ್ ಭವ್ನೆ ವಿಂಡೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 191 ಎಸೆತಗಳಿಂದ 116 ರನ್ ಪೇರಿಸಿದರು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಅಯ್ಯರ್ ಅವರದು ಬಿರುಸಿನ ಆಟವಾಗಿತ್ತು. ಅವರ 61 ರನ್ ಕೇವಲ 64 ಎಸೆತಗಳಿಂದ ಬಂತು. ಸಿಡಿಸಿದ್ದು 5 ಸಿಕ್ಸರ್ ಹಾಗೂ 3 ಫೋರ್.
ವೆಸ್ಟ್ ಇಂಡೀಸ್ ಪರ ದೇವೇಂದ್ರ ಬಿಶೂ 3, ಶಾನನ್ ಗ್ಯಾಬ್ರಿಯಲ್ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವೆನ್ಲಾಕ್ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.