ಪ್ಲ್ಯಾಟ್ ಫಾರಂ ವಿಸ್ತರಣೆ, ಲಿಫ್ಟ್ ಸೌಲಭ್ಯ ಕಾಮಗಾರಿಗೆ ಚಾಲನೆ
Team Udayavani, Sep 30, 2018, 9:56 AM IST
ಮಹಾನಗರ: ಸ್ವಚ್ಛ ರೈಲು ನಿಲ್ದಾಣ ಎಂದು ಹೆಸರು ಪಡೆದುಕೊಂಡಿರುವ ನಗರದ ಜಂಕ್ಷನ್ ರೈಲು ನಿಲ್ದಾಣದಕ್ಕೆ ಹೈಟೆಕ್ ಸ್ಪರ್ಶ ದೊರೆಯಲಿದೆ. ಫ್ಲ್ಯಾಟ್ ಫಾರಂ ವಿಸ್ತರಣೆ, ಲಿಫ್ಟ್ ಸೌಲಭ್ಯ, ರೈಲ್ವೇ ಮೇಲ್ಸೆತುವೆ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದೆ.
ರೈಲು ನಿಲ್ದಾಣ ಸ್ವಚ್ಛವಾಗಿದ್ದರೂ ಇತರ ಆವಶ್ಯಕತೆಗಳನ್ನು ಈಡೇರಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುವ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಹಾಗಾಗಿ ಮೂಲ ಸೌಲಭ್ಯಗಳೊಂದಿಗೆ ನಿಲ್ದಾಣಕ್ಕೆ ಮಾಡರ್ನ್ ಟಚ್ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ರೈಲು ನಿಲ್ದಾಣದಲ್ಲಿ ಕಾಮಗಾರಿ ಆರಂಭಗೊಂಡಿದೆ.
ಲಿಫ್ಟ್ ಸೌಲಭ್ಯ
ದೇಶದ ಬಹುತೇಕ ರೈಲು ನಿಲ್ದಾಣಗಳಲ್ಲಿ ಒಂದು ಫ್ಲ್ಯಾಟ್‌ಫಾರಂ ನಿಂದ ಇನ್ನೊಂದು ಫ್ಲ್ಯಾಟ್‌ಫಾರಂಗಳಿಗೆ ತೆರಳಲು ಎಕ್ಸಲಾವೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ನಗರದ ಜಂಕ್ಷನ್ ರೈಲು ನಿಲ್ದಾಣದಲ್ಲಿ ಈ ವ್ಯವಸ್ಥೆ ಇಲ್ಲ. ಹಾಗಾಗಿ ವಯಸ್ಕರು, ಅನಾರೋಗ್ಯ ಪೀಡಿತರು ನಿಲ್ದಾಣದಲ್ಲಿ ಅತ್ತಿತ್ತ ತೆರಳಲು ಮೆಟ್ಟಿಲುಗಳನ್ನೇ ಆಶ್ರಯಿಸಬೇಕಾಗಿತ್ತು.
ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ, ಸಂಸದರಿಗೆ ಪ್ರಯಾಣಿಕರು ಹಾಗೂ ರೈಲ್ವೇ ಸ್ಟೇಶನ್ ಸಿಬಂದಿ ಮನವಿ ಮಾಡಿ ಅನೇಕ ವರ್ಷಗಳೇ ಕಳೆದಿದ್ದವು. ಆ ಬೇಡಿಕೆಗೆ ಈಗ ಮನ್ನಣೆ ದೊರೆತ್ತಿದ್ದು, ಫ್ಲ್ಯಾಟ್‌ಫಾರಂ ಎರಡು ಹಾಗೂ ಮೂರರಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕಾಮಗಾರಿ ಆರಂಭಗೊಂಡಿದೆ.
45 ಮೀ. ಫ್ಲಾಟ್ ಫಾರಂ ವಿಸ್ತರಣೆ
ಫ್ಲ್ಯಾಟ್ ಫಾರಂ ವಿಸ್ತರಣೆ ಮಾಡಬೇಕು ಎನ್ನುವುದು ಕೂಡ ಪ್ರಯಾಣಿಕರ ಬಹುಮುಖ್ಯ ಬೇಡಿಕೆಗಳಲ್ಲಿ ಒಂದಾಗಿತ್ತು. ಅದಕ್ಕೂ ಮನ್ನಣೆ ಲಭಿಸಿದ್ದು, ಮೂರು ಫ್ಲ್ಯಾಟ್‌ಫಾರಂಗಳಲ್ಲಿ ಮಂಗಳೂರು ಸೆಂಟ್ರಲ್ ಭಾಗಕ್ಕೆ ಚಲಿಸುವ ಕಡೆಗೆ ಒಟ್ಟಾರೆ 45 ಕಿ.ಮೀ. ಫ್ಲ್ಯಾಟ್‌ಫಾರಂ ವಿಸ್ತರಣೆ ಮಾಡುವ ಕಾಮಗಾರಿಗೆ ಚಾಲನೆ ದೊರೆತಿದೆ. ಈಗ ಫ್ಲ್ಯಾಟ್‌ಫಾರಂ 540 ಮೀ. ಉದ್ದ ಇದ್ದು, ಇನ್ನಷ್ಟು ವಿಸ್ತರಣೆಗೊಳ್ಳಲಿದೆ.
ಇನ್ನಷ್ಟು ಅಭಿವೃದ್ಧಿಗೆ ಬೇಡಿಕೆ
ಈಗ 15 ಕೋಟಿ ರೂ. ವೆಚ್ಚದಲ್ಲಿ ಫ್ಲ್ಯಾಟ್‌ಫಾರಂ ವಿಸ್ತರಣೆ, ಲಿಫ್ಟ್ ಸೌಲಭ್ಯ ಹಾಗೂ ನಿಲ್ದಾಣದ ಫುಟ್‌ಓವರ್ ಬ್ರಿಡ್ಜ್ ಕಾಮಗಾರಿಗಳು ನಡೆಯಲಿದೆ. ಆದರೆ ನಿಲ್ದಾಣದ ಒಳಭಾಗದಲ್ಲಿ ಇರುವ ಅನೇಕ ಸಮಸ್ಯೆಗಳಿಗೆ ಈ ಬಾರಿಯೂ ಮುಕ್ತಿ ದೊರೆಯುವುದು ಸಂಶಯ. ನಿಲ್ದಾಣದ ಮೂರು ಫ್ಲ್ಯಾಟ್‌ಫಾರಂಗಳಲ್ಲಿ ಪೂರ್ಣವಾದ ಮೇಲ್ಛಾವಣಿ ವ್ಯವಸ್ಥೆ, ಪ್ರಮುಖ ರೈಲುಗಳ ನಿಲುಗಡೆ ಸಮಸ್ಯೆ, ರೈಲ್ವೇ ಜಂಕ್ಷನ್ ನಗರದಿಂದ ತುಸು ದೂರವಿರುವ ಕಾರಣ ನಿಲ್ದಾಣಕ್ಕೆ ನೇರ ಬಸ್ ಸಂಪರ್ಕ, ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಆಸನದ ವ್ಯವಸ್ಥೆ, ರೈಲು ನಿಲ್ದಾಣದಲ್ಲಿ ಪಾರ್ಸೆಲ್ ಆಫೀಸ್ ಇಲ್ಲ. ನಿಲ್ದಾಣದ ಬಳಿ ಎಟಿಎಂ ಇಲ್ಲದಿರುವುದು ಹೀಗೆ ಹಲವು ಸಮಸ್ಯೆಗಳಿವೆ. ರೈಲ್ವೇ ಇಲಾಖೆ ಈ ಸಮಸ್ಯೆಗಳ ಕಡೆಗೂ ಗಮನ ಹರಿಸಬೇಕು ಎಂಬುದು ಪ್ರಯಾಣಿಕರ ಮನವಿ.
ಕನ್ನಡಕ್ಕಿಲ್ಲ ಮನ್ನಣೆ
ರೈಲು ನಿಲ್ದಾಣಗಳಲ್ಲಿ ಯಾವುದೇ ಮಾಹಿತಿ ಬೇಕಾದರೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವ ಸಿಬಂದಿಯೇ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಗಮನ ಹರಿಸಬೇಕಾಗಿದೆ.
ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣ
15 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಫ್ಲ್ಯಾಟ್ ಫಾರಂ ವಿಸ್ತರಣೆ, ಲಿಫ್ಟ್ ಸೌಲಭ್ಯ ನಡೆಯಲಿದೆ. ಇದಾದ ಬಳಿಕ ನಿಲ್ದಾಣದ ಫುಟ್ ಓವರ್ ಬ್ರಿಡ್ಜ್ ಕಾಮಗಾರಿ ಬಗ್ಗೆ ಚಿಂತಿಸಲಾಗಿದೆ. ಈ ನಡುವೆ ನಿಲ್ದಾಣದ ಒಳಗಿನ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.
– ಸುಶೀಲ್,
ಸ್ಟೇಷನ್ ಮಾಸ್ಟರ್
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.