ದೈವದ ಅಂಗಳದಲ್ಲೂ ಸಾವಯವ ತರಕಾರಿ ಬೆಳೆ


Team Udayavani, Sep 30, 2018, 10:38 AM IST

30-sepctember-4.gif

ಆಲಂಕಾರು: ಇಂದಿನ ರಾಸಾಯನಿಕ ಸಮಾಜದಲ್ಲಿ ತರಕಾರಿಗಳು ರಾಸಾಯನಿಕಯುಕ್ತವಾಗಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ನಡುವೆ ಅಲ್ಲಲ್ಲಿ ಆರೋಗ್ಯಕರ ಸಾವಯವ ಕೃಷಿಕರು ಕಂಡುಬರುತ್ತಾರೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊನೆಮಜಲು ನಿವಾಸಿ ಸಂಜೀವ ಗೌಡ ಅವರು ತನ್ನ ಮನೆಯ ತೋಟ ಮಾತ್ರವಲ್ಲದೆ ದೈವದ ಅಂಗಳದಲ್ಲಿ ಸಾವಯವ ತರಕಾರಿ ಬೆಳೆಗಳನ್ನು ಬೆಳೆಸಿ ಯಶಸ್ಸು ಸಾಧಿಸಿದ್ದಾರೆ.

ವಿವಿಧ ರಾಸಾಯನಿಕ ಗೊಬ್ಬರ ಬಳಸಿ ನಾವು ತಿನ್ನುವ ಎಲ್ಲ ಆಹಾರ ಪದಾರ್ಥಗಳನ್ನು ವಿಷಯುಕ್ತ ಮಾಡುವ ಇತರ ಕೃಷಿಕರಿಗೆ ಇವರು ಮಾದರಿಯಾಗಿದ್ದಾರೆ. ಸಾವಯವ ಗೊಬ್ಬರ ಬಳಸಿ ವಿಷಮುಕ್ತ ತರಕಾರಿ ಬೆಳೆಯುವುದರೊಂದಿಗೆ ಮನೆಯ ಪಕ್ಕದಲ್ಲಿರುವ ದೈವದ ಅಂಗಳದಲ್ಲಿ ತಾಜಾ ತರಕಾರಿ ಬೆಳೆದು ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.

ಅದ್ಭುತ ಫ‌ಸಲು
ಕಳೆದ ಹತ್ತು ವರ್ಷಗಳಿಂದ ಸಾವಯವ ಗೊಬ್ಬರ ಬಳಸಿ ತರಕಾರಿ ಕೃಷಿ ಮಾಡುತ್ತಾ ಪರಿಸರದ ಜನತೆಗೆ ಉತ್ತಮ ತರಕಾರಿ ನೀಡುತ್ತಿರುವ ಸಂಜೀವ ಗೌಡ ಅವರು ತಮ್ಮ ಮನೆಯ ಪಕ್ಕ ಇರುವ ಗ್ರಾಮದೈವ ಶ್ರೀದೇವಿ ಉಳ್ಳಾಲ್ತಿ ಉಳ್ಳಾಕ್ಲು ದೈವದ ಅಂಗಳದಲ್ಲಿ ತರಕಾರಿ ಬೆಳೆದಿದ್ದಾರೆ. ದೈವದ ಅಂಗಳದಲ್ಲಿ ಸುಮಾರು 200 ಬುಡ ಬೆಂಡೆಕಾಯಿ ಗಿಡಗಳು ನಳನಳಿಸುತ್ತಿವೆ. ಇದರೊಂದಿಗೆ ಹೀರೆ, ಸೌತೆಕಾಯಿ, ಅಲಸಂಡೆ, ಕುಂಬಳಕಾಯಿ, ಪಡವಲಕಾಯಿ, ಚೀನಿಕಾಯಿ ಮೊದಲಾದ ತರಕಾರಿ ಬೆಳೆಗಳನ್ನು ಬೆಳೆದು ಅದ್ಭುತ ಫ‌ಸಲು ಪಡೆಯುತ್ತಿದ್ದಾರೆ.

ಆದಾಯ ದೈವದ ತಂಬಿಲ ಸೇವೆಗೆ
ಮನೆಯ ಸುತ್ತಮುತ್ತ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಳೆಗಾಲದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಸುತ್ತಾರೆ ಸಂಜೀವ ಗೌಡರು. ಈ ಬಾರಿ ಮಾತ್ರ ದೈವದ ಅಂಗಳದಲ್ಲಿ ತರಕಾರಿ ಬೆಳೆದಿದ್ದಾರೆ. ಇಲ್ಲಿ ಬೆಳೆದ ತರಕಾರಿಯಿಂದ ಬರುವ ಆದಾಯವನ್ನು ದೈವದ ತಂಬಿಲ ಸೇವೆಗಳಿಗೆ ಬಳಸುವುದು ಇವರ ಉದ್ದೇಶವಾಗಿದೆ. ದೈವದ ದೀಪಾವಳಿ ಹಾಗೂ ವಾರ್ಷಿಕ ತಂಬಿಲಕ್ಕೆ ತರಕಾರಿ ಆದಾಯವನ್ನೇ ಮೂಲವನ್ನಾಗಿರಿಸಿಕೊಂಡು ಬೆಳೆ ಬೆಳೆದಿದ್ದಾರೆ.

30 ಬಗೆಯ ತರಕಾರಿ
ಮೂರು ಎಕರೆ ಜಾಗವನ್ನೆಲ್ಲ ತೋಟವನ್ನಾಗಿ ಮಾರ್ಪಟು ಮಾಡಿದ್ದಾರೆ. ಎರಡು ಎಕರೆ ಜಾಗದಲ್ಲಿ ಅಡಿಕೆ, ತೆಂಗು, ಗೇರು, ಮಾವು, ಸಾಗುವಾನಿ, ಬಾಳೆ, ಅನಾನಸು, ಕೊಕೊ ಮೊದಲಾದ ಮಿಶ್ರ ಬೆಳೆಗಳನ್ನು ಬೆಳೆಸಿದ್ದಾರೆ. ಉಳಿದ ಒಂದು ಎಕರೆಯಲ್ಲಿ ತರಕಾರಿಗಳ ಬಳ್ಳಿಗಳು ನಳನಳಿಸುತ್ತಲಿದೆ. ಈ ತರಕಾರಿ ತೋಟದಲ್ಲಿ ಸುಮಾರು 30ಕ್ಕೂ ಹೆಚ್ಚು ಬಗೆಯ ತರಕಾರಿಗಳು ಇವೆ. ಬೆಂಡೆಕಾಯಿ (ಬಿಳಿ, ಹಸಿರು, ಬೂದು), ಅಲಸಂಡೆ (ಉದ್ದ, ಗಿಡ್ಡ, ಗಿಡ, ಬಳ್ಳಿ), ಬದನೆ (ಬಿಳಿ, ನೇರಲೆ, ಮುಳ್ಳು ಬದನೆ), ಸೌತೆಕಾಯಿ (ಮುಳ್ಳು ಸೌತೆ, ಗಿಡ್ಡ ಮುಳ್ಳು ಸೌತೆ, ಹಸಿರು, ಬಿಳಿ), ಹಾಗಲಕಾಯಿ (ಉದ್ದ, ಗಿಡ್ಡ, ದಪ್ಪ), ಅರಿವೆ (ಕೆಂಪು, ಬಿಳಿ), ಕುಂಬಳಕಾಯಿ (ಬೂದು, ಹಸಿರು), ಪಡುವಲಕಾಯಿ (ಬಿಳಿ, ಸಣ್ಣ), ಸೋರೆಕಾಯಿ (ಉದ್ದ, ಗಿಡ್ಡ, ಮಹಾರಾಷ್ಟ್ರ ಸೋರೆಕಾಯಿ), ಚೀನಿಕಾಯಿ (ದೊಡ್ಡದು, ಸಣ್ಣದು), ಹೀರೆ (ಉದ್ದ, ಗಿಡ್ಡ, ದಪ್ಪ ಹಾಗೂ ಅತಿ ಸಣ್ಣದು), ಕಾಡು ಹೀರೆ ಹೀಗೆ ತರಹೇವಾರಿ ತರಕಾರಿಗಳು ಕಣ್ಮನ ಸೆಳೆಯುತ್ತವೆ.

ಅಚ್ಚುಕಟ್ಟು ನಾಟಿ ವಿಧಾನ
ತರಕಾರಿಗಳನ್ನು ನಾಟಿ ಮಾಡುವ ವಿಧಾನ ಬಹಳ ಸೂಕ್ಷ್ಮ ಹಾಗೂ ಅಚ್ಚುಕಟ್ಟು. ಆರಂಭದಲ್ಲಿ ಮಣ್ಣನ್ನು ಹದಮಾಡಿ ಅದರಲ್ಲಿನ ಹಾನಿಕಾರಕ ಅಂಶ ಹಾಗೂ ಗೆದ್ದಲುಗಳನ್ನು ಹೋಗಲಾಡಿಸಲು ಸುಣ್ಣ ಹಾಕಿ ಒಂದು ವಾರ ಬಳಿಕ ಮೊದಲೇ ತಯಾರಿಸಿದ ಗಿಡಗಳನ್ನು ನಾಟಿ ಮಾಡಲಾಗುತ್ತದೆ.

ಗಿಡಕ್ಕೆ ಜೀವ ಬರುತ್ತಿದ್ದಂತೆ ಮೊದಲ ವಾರದಲ್ಲಿ ಮೇಲ್‌ಗೊಬ್ಬರ ನೀಡುತ್ತಾರೆ. ಎರಡನೇ ವಾರದಲ್ಲಿ ಸಾವಯವ ಗೊಬ್ಬರ ನೀಡುತ್ತಾರೆ. ಕೀಟಗಳ ನಾಶಕ್ಕೆ ಸೀಮ್‌ ಎನ್ನುವ ಆರ್ಯವೇದಿಕ್‌ ಎಣ್ಣೆ ಹಾಗೂ ಕಹಿಬೇವಿನ ಎಣ್ಣೆ ಸಿಂಪಡಿಸುತ್ತಾರೆ. ಕೀಟಗಳ ಸಂಹಾರಕ್ಕೆ ಅಲ್ಲಲ್ಲಿ ಮೋಹಕ ಬಲೆಗಳನ್ನು ಇಡುತ್ತಾರೆ.

ತರಕಾರಿ ಬೀಜವೂ ಮಾರಾಟ
ಸಾವಯವ ತರಕಾರಿಯಿಂದ ಹೆಸರು ಮಾಡಿರುವ ಗೌಡರು ತರಕಾರಿಗಳ ಬೀಜ ಕೂಡಾ ಮಾರಾಟ ಮಾಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಬೀಜಗಳನ್ನು ಮಾರಾಟ ಮಾಡುತ್ತಾರೆ. ಹಲವು ಕೃಷಿ ಮೇಳಗಳಲ್ಲಿ ತರಕಾರಿ ಬೀಜ ಪ್ರದರ್ಶನ ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ ಮೊದಲಾದೆಡೆ ಕೃಷಿ ಸಮಾವೇಶಗಳಲ್ಲಿ ಭಾಗವಹಿಸಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಸಾಯನಿಕದ ಬದಲು ಜೀವಾಮೃತ
ಜೀವಾಮೃತ ಸಾವಯವ ಗೊಬ್ಬರ ತಯಾರಿಯನ್ನು ಸಂಜೀವ ಗೌಡರೇ ಮಾಡುತ್ತಾರೆ. ಎರಡು ಕೆ.ಜಿ. ಬೆಲ್ಲ, ಎರಡು ಧಾನ್ಯದ (ಉರ್ದು ಅಥವಾ ಹುರುಳಿ) ಹುಡಿ, 10 ಕೆ.ಜಿ. ಸೆಗಣಿ, 10 ಲೀ. ಗಂಜಳ, 2 ಕೆ.ಜಿ. ಮಣ್ಣಿನ ಹುಡಿ ಇವುಗಳನ್ನೆಲ್ಲ 200 ಲೀ. ನೀರಿನಲ್ಲಿ ಮಿಶ್ರಣ ಮಾಡಿದಾಗ ದ್ರವ ರೂಪದ ಸಾವಯವ ಗೊಬ್ಬರ ತಯಾರಾಗುತ್ತದೆ. ಸಾವಯವ ಗೊಬ್ಬರವನ್ನು ಐದು ದಿನಗಳಿಗೊಮ್ಮೆ ಪ್ರತಿ ಗಿಡಕ್ಕೆ ಅರ್ಧ ಲೀ.ನಷ್ಟು ಹಾಕಿದರೆ ಗಿಡ ಸಮೃದ್ಧವಾಗಿ ಬೆಳೆದು ಉತ್ತಮ ಬೆಳೆ ಬರುತ್ತದೆ.

ವಿಶೇಷ ವರದಿ

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.