ವಾರ್ಡ್‌ ಕಾಮಗಾರಿಗಳಿಗೆ ಅನುದಾನ ಬಳಕೆಯಾಗಲಿ

Team Udayavani, Sep 30, 2018, 12:13 PM IST

30-sepctember-8.gif

ವಿಟ್ಲ: ಕ್ಯಾಬಿನ್‌ ನಿರ್ಮಾಣ, ಇಂಟರ್‌ ಲಾಕ್‌, ನಾಮಫಲಕ ಅಳವಡಿಕೆ ಇತ್ಯಾದಿ ಕಾಮಗಾರಿಗಳ ಮೂಲಕ ಪ.ಪಂ. ಕಚೇರಿಯನ್ನು ಅಂದಗೊಳಿಸಲಾಗಿದೆ. ರೂ. 50 ಲಕ್ಷದಷ್ಟು ಅನುದಾನ ಪ.ಪಂ. ಕಟ್ಟಡದ ದುರಸ್ತಿಗೆ ಮೀಸಲಿಟ್ಟರೆ ವಾರ್ಡ್‌ ಅಭಿವೃದ್ಧಿಗೆ ಅನುದಾನ ಬಳಸಲು ಅಸಾಧ್ಯ.ಕಚೇರಿಯನ್ನು ಅಂದ ಮಾಡಿದ್ದು ಸಾಕು. ವಾರ್ಡ್‌ ಕಾಮಗಾರಿಗಳಿಗೆ ಅನುದಾನ ಬಳಸಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬೇಕು ಎಂದು ಆಡಳಿತ ಪಕ್ಷದ ಸದಸ್ಯ ರವಿಪ್ರಕಾಶ್‌ ಹೇಳಿದರು. ಅವರು ಶನಿವಾರ ಅಧ್ಯಕ್ಷ ಅರುಣ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಪ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ವಿಟ್ಲ ಗ್ರಾಮದ ಸರ್ವೇ
ಸದಸ್ಯ ರಾಮದಾಸ್‌ ಶೆಣೈ ಮಾತನಾಡಿ, ಪ್ರಾಧಿಕಾರದ ಮೂಲಕ ವಿಟ್ಲ ಗ್ರಾಮದ ಸರ್ವೇ ನಡೆಸಬೇಕು. ಅಭಿವೃದ್ಧಿಗೆ ಪೂರಕವಾಗುವ ಮತ್ತು ಈ ಗ್ರಾಮದ ಜನತೆಗೆ ಅಡ್ಡಿ-ಆತಂಕಗಳು ಎದುರಾಗದಂತೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕು. ಶಾಸಕರ ಸಮಯವನ್ನು ಹೊಂದಿಸಿ, ನಿಯೋಗ ತೆರಳಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು ಎಂದರು.

ಅಕ್ರಮ ಅಂಗಡಿ ತೆರವು
ಸದಸ್ಯ ಅಬ್ದುಲ್‌ ರಹಮಾನ್‌ ನೆಲ್ಲಿಗುಡ್ಡೆ ಮಾತನಾಡಿ, ಕೇವಲ ಶಾಲಾ ರಸ್ತೆ ಮಾತ್ರವಲ್ಲ, ಎಲ್ಲ ನಾಲ್ಕು ರಸ್ತೆಯಲ್ಲಿ ದಾಖಲೆ ಇಲ್ಲದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು. ಸದಸ್ಯ ಶ್ರೀಕೃಷ್ಣ ಮಾತನಾಡಿ, ಬಸ್‌ ನಿಲ್ದಾಣಕ್ಕೆ ಇಟ್ಟ ಅನುದಾನದಲ್ಲಿ ಕಚೇರಿಯ ಮುಂಭಾಗದಲ್ಲಿ ಛಾವಣಿ ನಿರ್ಮಾಣ ಮಾಡುವುದಾರೆ ಸಮಸ್ಯೆ ಇಲ್ಲ. ಅದು ಬಿಟ್ಟು ಬೇರೆ ಅನುದಾನದಲ್ಲಿ ಛಾವಣಿ ನಿರ್ಮಾಣ ಮಾಡಿ ಹಣ ಪೋಲು ಮಾಡುವುದು ಬೇಡ ಎಂದರು. ವಿಪಕ್ಷ ನಾಯಕ ಅಶೋಕ್‌ ಕುಮಾರ್‌ ಶೆಟ್ಟಿ ಮಾತನಾಡಿ, ರಿಕ್ಷಾ ಪಾರ್ಕಿಂಗ್‌ ಸ್ಥಳದಲ್ಲಿ ಛಾವಣಿ ಮಾಡಬೇಕು. ಪಳಿಕೆ ತ್ಯಾಜ್ಯ ಘಟಕದಲ್ಲಿರುವ ಕುಟುಂಬಗಳಿಗೆ  ಚಾಲಯವಿಲ್ಲ. ಅದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಮರಳು ಸಮಸ್ಯೆ
ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ಒದಗಿಸುವ ಬಗ್ಗೆ, ಪ್ರತಿ ಮನೆಗೆ ರಸ್ತೆ ಸಂಪರ್ಕ ಮಾಡುವ ಬಗ್ಗೆ, ಬಡವರು ಮನೆ ನಿರ್ಮಾಣ ಮಾಡಲು ಬೇಕಾದ ಮರಳು ಸಿಗದ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗಳನ್ನು ನಿವಾರಿಸಲು ಎಲ್ಲ ಸದಸ್ಯರು ಮತ್ತು ಶಾಸಕರು ಜಿಲ್ಲಾ ಧಿಕಾರಿಯನ್ನು ಭೇಟಿ ಮಾಡಿ, ಕ್ರಮ ಕೈಗೊಳ್ಳುವುದಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ಸದಸ್ಯರಾದ ಉಷಾ ಕೃಷ್ಣಪ್ಪ, ಇಂದಿರಾ ಅಡ್ಡಾಳಿ, ಗೀತಾ ಪುರಂದರ್‌, ಸಂಧ್ಯಾ ಮೋಹನ್‌, ಮಂಜುನಾಥ ಕಲ್ಲಕಟ್ಟ, ಅಬ್ಬೊàಕರೆ, ಲತಾ, ದಮಯಂತಿ, ಸುನಿತಾ ಕೋಟ್ಯಾನ್‌, ಪ್ರಭಾಕರ ಭಟ್‌ ಮಾವೆ, ಭವಾನಿ ರೈಕೊಲ್ಯ, ವಿ.ಎಚ್‌. ಸಮೀರ್‌ ಪಳಿಕೆ, ಮುಖ್ಯಾ ಧಿಕಾರಿ ಮಾಲಿನಿ, ಎಂಜಿನಿಯರ್‌ ಶ್ರೀಧರ್‌, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ರತ್ನಾ ಮತ್ತಿತರರಿದ್ದರು.

ಅಕ್ರಮ ಕೋರೆ ವಿರುದ್ಧ ಕ್ರಮ
ಆಡಳಿತ ಪಕ್ಷದ ಸದಸ್ಯ ಲೋಕನಾಥ ಶೆಟ್ಟಿ ಮಾತನಾಡಿ, ಕಲ್ಲು ಕೋರೆ ನಿಲ್ಲಿಸುವ ಬಗ್ಗೆ ಪ್ರತಿ ಸಭೆಯಲ್ಲಿ ಹೇಳಿದರೂ ಒಮ್ಮೆ ನಿಲ್ಲಿಸಿ, ಮತ್ತೆ ಆರಂಭಿಸಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಗಳಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾದಾಗ ಅವರ ಜತೆಗೆ ನಾವು ಸೇರಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಬಗ್ಗೆ ವಿಟ್ಲ ಪ.ಪಂ. ವ್ಯಾಪ್ತಿಯ ಎಲ್ಲ ಲೈಸನ್ಸ್‌ ಪಡೆಯದ ಕೋರೆ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನುಮತಿ ರದ್ದುಪಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಟಾಪ್ ನ್ಯೂಸ್

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.