ಸಾವಿರಾರು ಜನರ ಜೀವ ತೆಗೆಯಲು ಸಂಚು ರೂಪಿಸಿದ್ದ ಉಗ್ರ ಕೌಸರ್‌

Team Udayavani, Sep 30, 2018, 12:29 PM IST

saviraru.jpg

ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಜಮಾತ್‌-ಉಲ್‌-ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಯ ಉಗ್ರ ಜಹೀಲುªಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌, ಬೌದ್ಧಗುರು ದಲೈಲಾಮ ಹಾಗೂ ಬಿಹಾರ ರಾಜ್ಯಪಾಲರ ಉಪಸ್ಥಿತಿಯಲ್ಲೇ ಸಾವಿರಾರು ಜನರ ಪ್ರಾಣ ತೆಗೆಯಲು ಸಂಚು ರೂಪಿಸಿದ್ದ ಎಂಬುದು ಎನ್‌ಐಎ ತನಿಖೆ ವೇಳೆ ದೃಢಪಟ್ಟಿದೆ.

ಜತೆಗೆ, ಜ.19ರಂದು ಬೋಧ್‌ಗಯಾದ ಕಾಲಚಕ್ರದಲ್ಲಿ ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಇಟ್ಟಿದ್ದು ಬೆಂಗಳೂರಿನಲ್ಲಿ ಸೆರೆಸಿಕ್ಕ ಮತ್ತೂಬ್ಬ ಆರೋಪಿ ಆದಿಲ್‌ ಶೇಖ್‌ ಎಂಬುದು ಬಹಿರಂಗಗೊಂಡಿದೆ. ಪ್ರಕರಣದ ಇತರೆ ಆರೋಪಿಗಳಾದ ಪೈಗಂಬರ್‌ ಶೇಖ್‌, ಅಹಮದ್‌ ಅಲಿ, ನೂರ್‌ ಅಸ್ಲಾಂ ವಿರುದ್ಧ  ಪಾಟ್ನಾ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖೀಸಿದ್ದಾರೆ.

ಮಯನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದ ಕೌಸರ್‌, ಪಶ್ಚಿಮ ಬಂಗಾಳದ ಇತರೆ ಆರೋಪಿಗಳ ಜತೆ ಸೇರಿ ಬೌದ್ಧರನ್ನೇ ಟಾರ್ಗೆಟ್‌ ಮಾಡಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ. ಇದರ ಭಾಗವಾಗಿಯೇ ಬೌದ್ಧದರ್ಮ ಗುರು ದಲೈಲಾಮ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತೀರ್ಮಾನಿಸಿದ್ದ ಎಂದು ತಿಳಿದು ಬಂದಿದೆ.

ಸಂಚು ಸಿದ್ಧವಾಗಿದ್ದು ಬೆಂಗಳೂರಲ್ಲಿ!: ಬುಧ್ವಾನ್‌ ಬಾಂಬ್‌ ಸ್ಫೋಟದ ಬಳಿಕ 2014ರಲ್ಲಿಯೇ ರಾಜ್ಯವನ್ನು ಆಶ್ರಯತಾಣ ಮಾಡಿಕೊಂಡ ಕೌಸರ್‌ ಬೆಂಗಳೂರು ಹಾಗೂ ಇತರ ಭಾಗಗಳಲ್ಲಿ ತಳವೂರಿದ್ದ ಬಳಿಕ ರಾಮನಗರಕ್ಕೆ ಸ್ಥಳಾಂತರ ಗೊಂಡಿದ್ದ. ಇಲ್ಲಿಂದಲೇ ಬೋದ್‌ಗಯಾ ಸ್ಫೋಟದ ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದ ಇತರೆ ಆರೋಪಿಗಳು ಆತನ ಸೂಚನೆ ಮೇರೆಗೆ ಜನವರಿ 19ರಂದು ಕಾಲಚಕ್ರ ಮೈದಾನದಲ್ಲಿ ಮೂರು ಐಇಡಿಗಳನ್ನು ಇರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಬಳಿಕ ಉಗ್ರ ಆದಿಲ್‌ ಶೇಖ್‌ ಬೆಂಗಳೂರಿಗೆ ಆಗಮಿಸಿದ್ದು, ಹಲವು ಬಾರಿ ಕೌಸರ್‌ನನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾನೆ. ಕೆಲವು ದಿನಗಳ ಕಾಲ ಸುಮ್ಮನಿದ್ದು ಮತ್ತೂಂದು ಸ್ಫೋಟಕ್ಕೆ ಸಂಚು  ರೂಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಸಂಚು ರೂಪಿಸುವ ಮೊದಲೇ ಸಿಕ್ಕಿಬಿದ್ದಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ರಾಜ್ಯದ ಉಗ್ರ ಸೆಲ್‌ಗ‌ಳ ಬಗ್ಗೆ ಶೋಧ ಮುಂದುವರಿಕೆ: ಆಗಸ್ಟ್‌ 7ರಂದು ರಾಮನಗರದಲ್ಲಿ ಉಗ್ರ ಕೌಸರ್‌ ಹಾಗೂ ದಂಡು ರೈಲು ನಿಲ್ದಾಣದಲ್ಲಿ ಆದಿಲ್‌ ಶೇಖ್‌ ಸೆರೆಸಿಕ್ಕಿದ್ದು ರಾಜ್ಯ ಉಗ್ರರ ಅಡಗುತಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜತೆಗೆ ತಲೆಮರೆಸಿಕೊಂಡಿರುವ ಜೆಎಂಬಿ ಉಗ್ರ ಆರಿಫ್ ಹುಸೇನ್‌ ಕೂಡ ರಾಜ್ಯದಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾನೆಯೇ ಎಂಬ ಶಂಕೆ ರಾಜ್ಯ ಗುಪ್ತಚರದಳ ಹಾಗೂ ಪೊಲೀಸ್‌ ಇಲಾಖೆಯನ್ನು ಕಾಡುತ್ತಿದೆ.

ಈ ನಿಟ್ಟಿನಲ್ಲಿ ಕಳೆದ ಆಗಸ್ಟ್‌ ತಿಂಗಳಿಂದ ಗುಪ್ತಚರ ದಳ ಮತ್ತಷ್ಟು ಚುರುಕುಗೊಂಡಿದ್ದು, ರಾಮನಗರ, ತುಮಕೂರು, ಮಂಗಳೂರು ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಮಾಹಿತಿ ಕಲೆ ಹಾಕುತ್ತಿದೆ. ಮತ್ತೂಂದೆಡೆ ರಾಜ್ಯ ಉಗ್ರರ ಅಡುಗುತಾಣ ವಿಚಾರ ಸೆ.28ರಂದು ನಡೆದ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳ ಸಭೆಯಲ್ಲೂ ಪ್ರಸ್ತಾಪವಾಗಿದೆ. 

ವಿಶೇಷ ಎಂದರೆ ಡಿಜಿಪಿ ನೀಲಮಣಿ ರಾಜು, ಜೆಎಂಬಿ ಉಗ್ರರಾದ ಕೌಸರ್‌ ಹಾಗೂ ಆದಿಲ್‌ಶೇಖ್‌ ಬಂಧನ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ಉಗ್ರರು ಇನ್ನೂ ಅಡಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೆರೆರಾಜ್ಯಗಳು ಪರಸ್ಪರ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Kabaka: ಮನೆಯಿಂದ ಮಾದಕ ವಸ್ತು ವಶ?

Kabaka: ಮನೆಯಿಂದ ಮಾದಕ ವಸ್ತು ವಶ?

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿMulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.