ಸಮರ್ಥ ಭಾರತೀಯ ಸೇನೆ, ರಾಜತಾಂತ್ರಿಕತೆ


Team Udayavani, Sep 30, 2018, 3:22 PM IST

30-sepctember-16.gif

ಪುತ್ತೂರು: ಭಯೋತ್ಪಾದನಾ ನೆಲೆಗಳ ಮೇಲಿನ ಭಾರತದ ಸರ್ಜಿಕಲ್‌ ಸ್ಟ್ರೈಕ್‌ ಪ್ರಪಂಚದ ಸೇನಾ ಇತಿಹಾಸದಲ್ಲೇ ಅತ್ಯದ್ಭುತ ಸಂಗತಿ. ತದನಂತರ ಪ್ರಪಂಚದ ಸಮ್ಮುಖದಲ್ಲಿ ನಾವು ಇಂತಹ ದಾಳಿ ನಡೆಸಿದ್ದೇವೆ ಎಂದು ಘೋಷಿಸಿದ್ದು, ಭಾರತದ ಧೈರ್ಯಕ್ಕೆ ಹಿಡಿದ ಕೈಗನ್ನಡಿ. ಹಾಗಾಗಿ ಸರ್ಜಿಕಲ್‌ ದಾಳಿಯ ಮುಖೇನ ಭಾರತ ತಾನು ಸೇನಾ ನೆಲೆಯಿಂದಲೂ, ರಾಜತಾಂತ್ರಿಕವಾಗಿಯೂ ಅತ್ಯಂತ ಸಮರ್ಥ ರಾಷ್ಟ್ರ ಎನ್ನುವುದನ್ನು ವಿಶ್ವದ ಮುಂದೆ ಸಾಕ್ಷೀಕರಿಸಿ ತೋರಿದೆ ಎಂದು ನಿವೃತ್ತ ಸೇನಾಧಿಕಾರಿ ಕ್ಯಾ| ಬೃಜೇಶ್‌ ಚೌಟ ಹೇಳಿದರು. ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಸರ್ಜಿಕಲ್‌ ಸ್ಟ್ರೈಕ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸರ್ಜಿಕಲ್‌ ಸ್ಟ್ರೈಕ್‌ ಅವಶ್ಯವಾಗಿತ್ತು
ಸರ್ಜಿಕಲ್‌ ದಾಳಿಯ ಪೂರ್ವದಲ್ಲಿ ಅಂತಹದ್ದೊಂದು ಸಾಹಸವನ್ನು ಭಾರತ ಮೆರೆಯಬೇಕಾದ ಸನ್ನಿವೇಶಗಳು ಸೃಷ್ಟಿ ಯಾಗಿದ್ದವು. ಉರಿ ಎಂಬ ಪ್ರದೇಶದಲ್ಲಿ ಹತ್ತೂಂಬತ್ತು ಸೈನಿಕರನ್ನು ಹತ್ಯೆ ಮಾಡಲಾಗಿದ್ದರೆ, ಅಲ್ಲಲ್ಲಿ ದಾಳಿಗಳು ನಡೆದು ಸೈನಿಕರ ಆತ್ಮಸ್ಥೈರ್ಯವೇ ಕುಸಿಯುವಂತಹ ಸಂದರ್ಭ ಬರಲಾರಂಭಿಸಿತ್ತು. ಭಾರತೀಯ ಸೈನ್ಯ ತಾನು ಸಮರ್ಥ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಡುವ ಅಗತ್ಯವೂ ಇತ್ತಲ್ಲದೆ ಭಯೋತ್ಪಾದಕರಿಗೆ, ಪಾಕಿಸ್ತಾನಕ್ಕೆ ಪ್ರಖರ ಸಂದೇಶವನ್ನು ನೀಡುವ ಅಗತ್ಯವೂ ಇತ್ತು. ಈ ಎಲ್ಲ ಕಾರಣಗಳೂ ಒಂದಾಗಿ ಸರ್ಜಿಕಲ್‌ ಸ್ಟ್ರೈಕ್‌ ಯೋಜನೆ ಕಾರ್ಯಗತವಾಯಿತು ಎಂದರು.

ಗೌಪ್ಯತೆ ಮುಖ್ಯ
ಅನ್ಯ ರಾಷ್ಟ್ರದ ಭೂಭಾಗದೊಳಗೆ ಹೋಗಿ ನಿರ್ದಿಷ್ಟ ಸ್ಥಳದಲ್ಲಿ ದಾಳಿ ಮಾಡಿ ಬರುವುದಕ್ಕೆ ಸಾಕಷ್ಟು ತಯಾರಿ ಹಾಗೂ ಗೌಪ್ಯತೆ ಎರಡೂ ಬೇಕು. ಅದರಲ್ಲೂ ಯಾವುದೇ ಪ್ರಾಣ ಹಾನಿಯಿಲ್ಲದೆ ಮರಳಿ ಬರುವುದೆಂದರೆ ಸುಲಭದ ಮಾತಲ್ಲ. ಸುಮಾರು ಐದು ಭಯೋತ್ಪಾದಕ ನೆಲೆಗಳನ್ನು ಗುರುತಿಸಿ, ಅವುಗಳ ಮೇಲೆ ದಾಳಿ ನಡೆಸಿ, ಅರವತ್ತರಿಂದ ಎಪ್ಪತ್ತು ಭಯೋತ್ಪಾದಕರನ್ನು ವಧಿ ಸಿ ನಮ್ಮ ಸೈನಿಕರು ಮರಳಿ ಬಂದಿರುವುದು ದೇಶದ ತಾಕತ್ತನ್ನು ಇಡಿಯ ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು.

ಸದೃಢ ಭಾರತ
ಪೋಖ್ರಾನ್‌ ಅಣು ಬಾಂಬ್‌ ಪರೀಕ್ಷೆಯ ಸಂದರ್ಭದಲ್ಲಿ ಅಮೆರಿಕದಂತಹ ರಾಷ್ಟ್ರಗಳು ನಮ್ಮ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಎಚ್ಚರಿಕೆ ನೀಡಿದ್ದವು. ಆದರೆ ಪೋಖ್ರಾನ್‌ ಘಟನೆಯ ಇಪ್ಪತ್ತು ವರ್ಷಗಳ ಅನಂತರ ಸರ್ಜಿಕಲ್‌ ದಾಳಿ ನಡೆಸಿದ್ದೇವೆ ಎಂದು ಭಾರತ ಘಂಟಾಘೋಷವಾಗಿ ಹೇಳಿಕೊಂಡಾಗ ಪಾಕಿಸ್ತಾನದ ಆಪ್ತರಾಷ್ಟ್ರವಾದ ಚೀನಾವೂ ಸೊಲ್ಲೆತ್ತಿಲ್ಲ. ಅಮೆರಿಕದಂತಹ ಬಲಾಡ್ಯ ದೇಶಗಳು ಮೌನ ವಹಿಸಿವೆ. ಇದು ಭಾರತ ಪ್ರಾಪಂಚಿಕವಾಗಿ ಸದೃಢವಾಗಿ ಬೆಳೆದಿರುವುದನ್ನು ತೋರಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮ್ಮಾನ, ಸಾಕ್ಷ್ಯಚಿತ್ರ ಪ್ರದರ್ಶನ
ಕ್ಯಾ| ಬೃಜೇಶ್‌ ಚೌಟ ಅವರನ್ನು ಸಮ್ಮಾನಿಸಲಾಯಿತು. ಸರ್ಜಿಕಲ್‌ ದಾಳಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ| ಕೆ. ಕೃಷ್ಣ ಕಾರಂತ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲಕ ಡಾ| ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಖೀತ್‌ ಕುಮಾರ್‌ ವಂದಿಸಿದರು. ವಿದ್ಯಾರ್ಥಿನಿ ಸಾಯಿಶ್ರೀ ಪದ್ಮ ಕಾರ್ಯಕ್ರಮ ನಿರೂಪಿಸಿದರು.

ಸರ್ಜಿಕಲ್‌ ದಾಳಿ ಭಾರತದ ಹೆಮ್ಮೆ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮಾತನಾಡಿ, ದೇಶ ವಿಭಜನೆಯ ಕಾಲದಿಂದ ಈಗಿನ ಕಾಲದವರೆಗೂ ಪಾಕಿಸ್ತಾನ ತನ್ನ ಧೂರ್ತ ಬುದ್ಧಿಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಕಾರ್ಗಿಲ್‌ ಯುದ್ಧದಲ್ಲಿ ಸರಿಯಾದ ಪಾಠ ಕಲಿಸಿದ್ದರೂ ಮತ್ತೆ ಮತ್ತೆ ದಾಳಿ ಮಾಡುವ ಹುಂಬತನ ತೋರಿಸಿದೆ. ಭಯೋತ್ಪಾದನೆಯ ಮೂಲಕ್ಕೇ ಸರ್ಜಿಕಲ್‌ ದಾಳಿಯ ಮುಖಾಂತರ ಹೊಡೆದಿರುವುದು ಭಾರತದ ಯೋಗ್ಯತೆಯನ್ನು ಬಿಂಬಿಸಿದೆ ಮತ್ತು ಅಂತಹ ಅಗತ್ಯವೂ ಇತ್ತು ಎಂದರು.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.