ಕನ್ನಡ ಗಟ್ಟಿಯಾಗಿರಲು ಮಹಾರಾಜರೂ ಕಾರಣ…


Team Udayavani, Oct 1, 2018, 6:00 AM IST

sudha-murthi-1.jpg

ದಸರೆಗೆ ಇಡೀ ನಾಡಿಗೆ ನಾಡೇ ಸಜ್ಜುಗೊಳ್ಳುತ್ತಿದೆ. ಈ ಸಲದ ಹಬ್ಬದ ಸಂಭ್ರಮ ಮತ್ತಷ್ಟು ಮೆರುಗು ಕಟ್ಟಿರುವುದು ದಸರೆ ಉದ್ಘಾಟಿಸಲು ನಿಂತಿರುವ ಇನ್‌ಫೋಸಿಸ್‌ ಪೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಅವರಿಂದ. ನಮ್ಮ ಸಂಸ್ಕೃತಿ, ಅದನ್ನು ಉಳಿಸುವ ಬಗೆ, ಯುವ ಜನಾಂಗಕ್ಕೆ ತಲುಪಿಸುವ ಹಾದಿಗಳ ಬಗ್ಗೆ ಉದಯವಾಣಿ ಪ್ರತಿನಿಧಿ ಕಟ್ಟೆ ಗುರುರಾಜ್‌ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ ಸಾಹಿತಿಯಾಗಿಯೂ ಮೇರು ಸಾಧನೆ ಮಾಡಿರುವ ಸುಧಾಮೂರ್ತಿ.

ನಮ್ಮ ರಾಜ್ಯದಲ್ಲಿ ಈ ದಸರಾ, ಮೈಸೂರು ಎಷ್ಟು ಪ್ರಾಮುಖ್ಯತೆ ಪಡೆದಿದೆ ಅನಿಸುತ್ತೆ?
             ಇವತ್ತು ಕರ್ನಾಟಕದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿದೆ ಅಂದರೆ ಅದಕ್ಕೆ ಕಾರಣ-ಮೈಸೂರು ಮತ್ತು ಅಲ್ಲಿನ ಮಹಾರಾಜರು. ನಾನು ಹುಟ್ಟಿದ್ದು ಉತ್ತರಕರ್ನಾಟಕದಲ್ಲಿ. ನಮ್ಮ ಕಡೆ ನವಾಬರು, ಪೇಶ್ವೆಗಳು ಹೀಗೆ ಬೇರೆ ಬೇರೆಯವರೆಲ್ಲಾ ಆಳಿ ಹೋದರು. ಆದರೆ ಮೈಸೂರಲ್ಲಿ ಹಾಗಾಗಲಿಲ್ಲ. ಇಲ್ಲಿ ಮಹಾರಾಜರ ಆಳ್ವಿಕೆ ಇದ್ದುದರಿಂದ ಕನ್ನಡದ ಬಳಕೆ ಹೆಚ್ಚಾಗಿತ್ತು. ಹೀಗಾಗಿ ಕರ್ನಾಟಕದಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಲು ಮೈಸೂರು ಪ್ರಾಂತ್ಯದ ಕೊಡುಗೆ ಬಹಳ ದೊಡ್ಡದು. ಇವತ್ತು ನಾವೆಲ್ಲ ಕನ್ನಡ ಮಾತನಾಡುತ್ತಿರುವುದರಲ್ಲೂ ಮೈಸೂರಿನ ಕಾಣಿಕೆ ಅಗಣಿತ.

ಐತಿಹಾಸಿಕ ದಸರವನ್ನು ನೀವು ಉದ್ಘಾಟಿಸುತ್ತಿದ್ದೀರಿ, ಏನನಿಸುತ್ತಿದೆ?
             ಖುಷಿಯಾಗುತ್ತೆ. ನನ್ನ ನೆಲ ಇದು. ನಮ್ಮೂರಲ್ಲಿ ನನ್ನ ಕರೆದು ಸನ್ಮಾನ ಮಾಡಿದರೆ ಆಗುವ ರೋಮಾಂಚನ ಈಗ ಆಗುತ್ತಿದೆ. ಇದಕ್ಕಿಂತ ದೊಡ್ಡ ಸನ್ಮಾನ, ಪ್ರಶಸ್ತಿ ಬೇರೆ ಇಲ್ಲ. ಇದೇ ಹೈಯಸ್ಟ್‌ ರಿವಾರ್ಡ್‌. ಇದಕ್ಕಿಂತ ಇನ್ನೇನು ಬೇಕು?

ಈ  ಹಿಂದೆ ನೀವು ದಸರಾ ನೋಡಿದ್ರಾ?
            ನಾನು 8 ವರ್ಷದ ಹುಡುಗಿ ಇದ್ದಾಗ ಊರಿಂದ ಬಂದು ನೋಡಿದ್ದೆ. ಕೆಂಪು ರಿಬ್ಬನ್‌ಗಳು, ಅಂಬಾರಿ ಮೇಲೆ ಜಯಚಾಮರಾಜೇಂದ್ರ ಒಡೆಯರ್‌ ಇದ್ದದ್ದು, ದೊಡ್ಡ ಪ್ರದರ್ಶನ ಮೈದಾನ, ಊರಿಗೆ ಊರೇ ಸಿಂಗಾರವಾಗಿದ್ದ ರೀತಿ- ಒಟ್ಟಾರೆ ಕೃಷ್ಣದೇವರಾಯನ ಕಾಲದ ದಸರಾವನ್ನೇ ನೋಡಿದಂತಿತು. ಮೈಸೂರು ಅಂತಲೇ ಇಂಥ ನೆನಪುಗಳು ಚಿಟ್ಟೆಯಂತೆ ಹಾರಿಬಿಡುತ್ತವೆ.

ನಿಮ್ಮ ಕಡೆ ದಸರಾವನ್ನು ಇದೇ ರೀತಿ ಆಚರಿಸುತ್ತಾ ಇದ್ರಾ?
              ನಮ್ಮಲ್ಲೂ ನವರಾತ್ರಿಯ 9 ದಿನವನ್ನೂ ಆಚರಣೆ ಮಾಡ್ತಿದ್ವಿ. ಬನ್ನಿ ಪತ್ರೆ ಕೊಟ್ಟು-ಬನ್ನಿ ತಗೊಂಡು ಬಂಗಾರದಂಗೆ ಇರೀ ಅಂತಿದ್ದೆವು. ಹಿರಿಯರಿಗೆ ಹೋಗಿ ನಮಸ್ಕರಿಸಿ, ಬನ್ನಿ ಕೊಡ್ತಾ ಇದ್ವಿ. ದೇವಿ ಪೂಜೆ, ವೆಂಕಟೇಶ್ವರ ದೇವಸ್ಥಾನದಲ್ಲಿ ಘಟ್ಟ ಅಂತ ಎಣ್ಣೆ ಹಾಕ್ತಿದ್ವಿ. ಹೀಗೆ ಶಾಸ್ತ್ರೀಯವಾಗಿ ಏನು ಬೇಕೋ ಅದನ್ನೆಲ್ಲಾ ಮಾಡ್ತಿದ್ವಿ. ಮಹಾರಾಜರಿಲ್ಲದ್ದಕ್ಕೆ ಜಂಬೂ ಸವಾರಿ, ಮಹಾರಾಜರು ಆನೆ ಮೇಲೆ ಬರೋದು, ಬೆಂಕಿ ಆಟವಾಡೋದು ಈ ವೈಭವವೆಲ್ಲಾ ನಮ್ಮಲ್ಲಿ ಇರಲಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಪ್ರತಿನಿಧಿ ಅಂದರೆ ಅದು ದಸರಾ ಮಾತ್ರನಾ?
             ದಸರಾಕ್ಕೆ ಆ ಶಕ್ತಿ ಇದೆ ರೀ. ಸುಮ್ಮನೆ ಬರೋದಲ್ಲ ಇದು. ಕರ್ನಾಟಕದ ಇತಿಹಾಸದಲ್ಲಿ ದಸರಾ ತನ್ನದೇ ಆದ ಮಹತ್ವ ಸ್ಥಾನ ಪಡೆದುಕೊಂಡಿದೆ. ಮರೆತುಹೋದ ಸಾಮ್ರಾಜ್ಯ ಪುಸ್ತಕದಲ್ಲಿ ನಿಕೋಲಾಸ್‌ ಅನ್ನೋ ವ್ಯಕ್ತಿ ವಿಜಯನಗರದಲ್ಲಿ ನಡೆಯುತ್ತಿದ್ದ ದಸರಾದಲ್ಲಿ-ಅಣುಕು ಕಾಳಗ ನಡೆಯುತ್ತಿತ್ತು, ಸಂಗೀತಗಾರರು ಹಾಡುತ್ತಿದ್ದರು. ರಾಜ ಮಹಾನವಮಿ ದಿಬ್ಬದ ಮೇಲೆ ಕುಳಿತುಕೊಂಡು ಆಸ್ಥಾನ ಪಂಡಿತರಿಗೆ ಸನ್ಮಾನ ಮಾಡುತ್ತಿದ್ದದ್ದು-ಹೀಗೆ ಎಲ್ಲಾ ವಿವರಿಸಿದ್ದಾನೆ. 1565 ವರ್ಷಕ್ಕೂ ಮುಂಚೆಯೇ ಈ ದಸರಾ ವೈಭವ ಇತಿಹಾಸದಲ್ಲಿ ಬೆರೆತು ಹೋಗಿದೆ. ವಿಜಯನಗರ ಪತನದ ನಂತರ ಮೈಸೂರು ಮಹಾರಾಜರು ಈ ಸಂಪ್ರದಾಯವನ್ನು ಮುಂದುವರಿಸಿದರು. ಹೀಗಾಗಿ ದಸರಾ ಜಗತ್ಪ್ರಸಿದ್ಧಿ.

ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಬಂದ ನಂತರ ಜನರ ಯೋಚನಾ ಶೈಲಿ ಬದಲಾಗಿದೆ. ಹೀಗಿರುವಾಗ ಯುವಜನರನ್ನು ಸೆಳೆಯೋದು ಹೇಗೆ ಅಂತೀರಾ?
                ಮನೆ ಮತ್ತು ಶಾಲೆಯಲ್ಲಿ ಹಬ್ಬ ಮಾಡೋ ಸಂಪ್ರದಾಯ ಮುಂದವರಿಯಬೇಕು. ಹೀಗೆ ಮಾಡದೆ ಮಕ್ಕಳ ಮನಸ್ಸಲ್ಲಿ ನಮ್ಮ ಸಂಸ್ಕೃತಿ ನೆಲೆ ನಿಲ್ಲುವುದು ಹೇಗೆ? ನಾವೆಲ್ಲ ಏನು ಮಾಡುತ್ತಿದ್ದೇವೆ ಎಂದರೆ, ದಸರಾ ಎಂದಾಕ್ಷಣ- ಎರಡು ದಿನ ರಜೆಗೆ ಇನ್ನೊಂದು ಮೂರು ದಿನ ರಜೆ ಕೂಡಿಸಿಕೊಂಡು ಗೋವಾ, ಸಿಂಗಪುರ, ಮಲೇಷ್ಯಾ ಅಂತೆಲ್ಲಾ ಟೂರ್‌ ಹೊಡೆಯುತ್ತೇವೆ. ರಜೆಯಲ್ಲಿ ಈ ರೀತಿ ಟೂರು ಹೊಡೆದರೆ ಹಬ್ಬ ಏನು ಬಂತು, ಅದರ ಮಹತ್ವ ಏನು? ಇವೆಲ್ಲ ಮಕ್ಕಳಿಗೆ ತಿಳಿಯೋದಾದರೂ ಹೇಗೆ? ಸಂಸ್ಕೃತಿಯ ಮೊದಲ ಪಾಠ ಶುರುವಾಗಬೇಕಾಗಿರೋದು ಮನೆಯಿಂದಲೇ. ಮಕ್ಕಳು ಅದನ್ನು ಎಷ್ಟರ ಮಟ್ಟಿಗೆ ಅರಗಿಸಿಕೊಂಡು, ಮುಂದುವರಿಸುತ್ತಾರೆ ಅನ್ನೋದು ಹೇಳಲಿಕ್ಕೆ ಬರೋದಿಲ್ಲ. ಆದರೆ ಪ್ರಯತ್ನ ಮಾಡದೆ ಪ್ರಯೋಜನ ಸಿಗುವುದಾದರೂ ಹೇಗೆ?

ನಿಮ್ಮ ಕಾಲದಲ್ಲೂ ದಸರಾ ಹೀಗೆ ಇತ್ತಾ?
              ನಮ್ಮ ಕಾಲದಲ್ಲಿ ದಸರಾ ನೆಪದಲ್ಲಿ ಶಾಲೆಗೆ ರಜೆ ಕೊಡೋರು. ಆದರೆ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆ ತನಕ ಸಾಂಸ್ಕೃತಿಕ ಕಾರ್ಯಕ್ರಮ, ಚರ್ಚಾಕೂಟ ನಡೆಸೋರು. ಆ ನಂತರ ಮನೆಗೆ. ಸರಸ್ವತಿ ಪೂಜೆ ಬಹಳ ಸಂಭ್ರಮದಿಂದ ಮಾಡುತ್ತಿದ್ದೆವು. ಮರುದಿವಸ ಬುಕ್‌ ತೆಗೆಯೋಹಾಗಿಲ್ಲ ಅಂತ ಎಲ್ಲ ಬುಕ್‌ ಅದರಲ್ಲೇ ಇಟ್ಟು ಬಿಡುತ್ತಿದ್ದೆವು. ಇವತ್ತಿಗೂ ಆಯುಧ ಪೂಜೆ ದಿವಸ ನಮ್ಮ ಆಫೀಸಿನ ಕಂಪ್ಯೂಟರ್‌ಗಳಿಗೆ ಪೂಜೆ ಮಾಡುತ್ತೇವೆ. ಅದರಿಂದ ತಾನೇ ನಮಗೆ ಹೊಟ್ಟೆ ತುಂಬೋದು. ಹೀಗೆ ನಮ್ಮ ಹಿರಿಯರು ಮಾಡಿದ ಸಂಪ್ರದಾಯಗಳಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ.

ಸಮಯದ ಜೊತೆ ಚೌಕಾಸಿ ಮಾಡಿ ಬದುಕೋ ಈ ಕಾಲದಲ್ಲಿ ಇವೆಲ್ಲಾ ಸಾಧ್ಯನಾ?
               ಎಲ್ಲಾ ಮಾಡಬೇಡಿ. ಸ್ವಲ್ಪ ಮಾಡಿ. ನಮ್ಮ ತಾಯಿ ಮುಂಜಾನೆಯಿಂದ ಮಧ್ಯಾಹ್ನ‌ದ ತನಕ ಪೂಜೆ ಮಾಡುತ್ತಿದ್ದರು. ಈಗ ಅಷ್ಟು ಮಾಡಲಿಕ್ಕಾಗಲ್ಲ. ಸ್ವಲ್ಪ ಮಾಡಬಹುದಲ್ವಾ? ನನಗೆ 9 ದಿನ ರಜೆ ಹಾಕಲು ಆಗೋಲ್ಲ. ಬದಲಿಗೆ ಬೆಳಗ್ಗೆ ಬೇಗ ಎದ್ದು ಪೂಜೆ ಮಾಡುತ್ತೇನೆ. ನಾಲ್ಕೈದು ಗಂಟೆ ಮಾಡಕ್ಕಾಗಲ್ಲ. ಅರ್ಧ, ಮುಕ್ಕಾಲು ಗಂಟೆ ಮಾಡುತ್ತೇನೆ. ಗೊತ್ತಿರುವ ಮಂತ್ರ ಹೇಳುತ್ತೇನೆ. ಸಾಯಂಕಾಲ ಸಮಯ ಸಿಗುತ್ತೆ. ಆಗ ವಿಸ್ತಾರವಾಗಿ ಪೂಜೆ ಮಾಡುತ್ತೇನೆ. ಇದಕ್ಕೆಲ್ಲ ಕಷ್ಟ ಪಡಬೇಕಾಗುತ್ತೆ. ಮಕ್ಕಳನ್ನು ಕರೆಸಿ ನಮಸ್ಕಾರಮಾಡಿಸೋದು ಅದರ ಬಗ್ಗೆ ತಿಳಿ ಹೇಳ್ಳೋದು ಮಾಡದೇ ಇದ್ದರೆ ಅವರಿಗೆ ತಿಳಿಯೋದಾದರು ಹೇಗೆ?

ಹೆಣ್ಣು ಮಕ್ಕಳು ಗಂಡು ಮಕ್ಕಳ ಸಮ ಸಮವಾಗಿ ದುಡಿಯುತ್ತಾರೆ. ಆದರೆ, ಉನ್ನತ ಸ್ಥಾನದಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿದ್ದಾರಲ್ವಾ? ಏಕೆ ಹೀಗೆ?
                ಮದುವೆ ನಂತರ ಮಹಿಳೆಯರು ತಮ್ಮ ಮಕ್ಕಳಿಗೆ ಮೊದಲು ಪ್ರಾಶಸ್ತ್ಯ ಕೊಡುತ್ತಾರೆ. ಆಗ ಕೆಲಸ ಸೆಕೆಂಡ್‌ ಪ್ರಿಯಾರಿಟಿ. ಪುರುಷರಿಗೆ ಎಲ್ಲಾ ಕಾಲದಲ್ಲೂ ಕೆಲಸವೇ ಮೊದಲ ಪ್ರಿಯಾರಿಟಿ. ನಾನು ಕೂಡ ಮಕ್ಕಳಾದ ಮೇಲೆ ಎಷ್ಟೋ ವರ್ಷ ಫೌಂಡೇಷನ್‌ ಕಡೆ ತಲೆ ಹಾಕಿರಲಿಲ್ಲ. ಮಕ್ಕಳು ಒಂದು ಘಟ್ಟಕ್ಕೆ ಬಂದ ಮೇಲೆ ಕೆಲಸಕ್ಕೆ ಬಂದೆ. ಹೀಗೆ ಮಕ್ಕಳಿಗಾಗಿ ತಮ್ಮ ಕೆಲಸವನ್ನು ಸ್ಥಗಿತ ಗೊಳಿಸುತ್ತಾರೆ. ಮನೇಲೀ ಸಪೋರ್ಟ್‌ ಇದ್ದರೆ ಸಮಸ್ಯೆ ಇಲ್ಲ. ನಮ್ಮ ತಂದೆ-ತಾಯಿ ಸಂಪೂರ್ಣ ನೆರವು ಇದ್ದುದರಿಂದ ಇವತ್ತು ನಾನು ಹೀಗಿದ್ದೀನಿ.

ಶಾಲೆಗಳು ಬಿಸ್‌ನೆಸ್‌ ಸೆಂಟರ್‌ಗಳಾಗ್ತಿವೆ.  ಹೀಗಿರುವಾಗ ಸಂಸ್ಕೃತಿ- ಸಂಪ್ರದಾಯಗಳ ಅರಿವು ಮೂಡಿಸಲು ಸಾಧ್ಯವೇ?
              ಸಂಸ್ಕೃತಿಯ ಬುಡ ಇರೋದು ನಮ್ಮ ನಮ್ಮ ಮನೆ ಮತ್ತು ಶಾಲೆಗಳಲ್ಲಿ. ಅದನ್ನು ಉಳಿಸೋದು ಬರೀ ಬಾಯಿಮಾತಿನ ಕೆಲಸವಲ್ಲ. ಮನೆಯಲ್ಲಿ ತಾಯಿ, ಶಾಲೆಯಲ್ಲಿ ಮಾಸ್ತರ್‌ ಕಷ್ಟ ಪಡಬೇಕು. ಹೀಗೆ ಅರಿವಿನ ಬೀಜ ಬಿತ್ತಲಿಕ್ಕೆ ಎರಡೂಕಡೆ ಪ್ರಯತ್ನ ಮಾಡಿದರೇನು ಮುಂದಿನ ಜನರೇಷನ್‌ಗೆ ಅರ್ಥವಾಗುವುದು. ಇವತ್ತು ಪ್ರಯತ್ನ ಪಡಲಿಲ್ಲ ಅಂದರೆ ನಾಳೆ ನಮ್ಮ ಸಂಸ್ಕೃತಿಯ ಮೂಲಾನೇ ಇರೋಲ್ಲ.

ಹಣ, ಆಸ್ತಿ, ಹೆಸರು ಎಲ್ಲಾ ಇಧ್ದೋರಿಗೆ ಸೇವೆ ಮಾಡಬೇಕು ಅನಿಸೋದು ಕಷ್ಟ. ಎಲ್ಲಾ ಗಳಿಸಿರೋ ನೀವು ಕಷ್ಟದಲ್ಲಿ ಇರೋರಿಗೆ ಮನೆ ದೇವ್ರು ಥರ ಇದ್ದೀರಲ್ಲ. ಈ ರೀತಿ ಮನಸ್ಸು, ಸಂಸ್ಕಾರ ಹೇಗೆ ಬಂತು?
            ಅದಕ್ಕೊಂದು ಘಟನೆ ಇದೆ ಹೇಳ್ತೀನಿ. ನಾನು ಬೆಳೆದದ್ದು ನಮ್ಮ ತಾತನ ಮನೇಲಿ. ತಾತ ಏನು ಮಾಡೋರು ಅಂದ್ರೆ. ಫ‌ಸ್ಟ್‌ ಕ್ವಾಲಿಟಿ ಅಕ್ಕಿಯನ್ನು ಬಂದೋರು, ಹೋದರಿಗೆ ದಾನ ಮಾಡೋರು. ಕೆಂಪು ಅಕ್ಕಿನ ಮನೆ ಊಟಕ್ಕೆ ಬಳಸೋರು. ನಾನು ಒಂದು ದಿನ ಹೀಗೇಕೆ ಅಂತ ಕೇಳಿದೆ. ನಮ್ಮಜ್ಜಿ ಓದಿದವಳೇನಲ್ಲ. ಆಕೆ-ನಮ್ಮನೆಗೆ ದೇವರು ಬಂದ್ರೆ ಏನು ಮಾಡ್ತೀಯಾ? ಅಂತ ಕೇಳಿದಳು. ಅವರಿಗೆ ಒಳ್ಳೇದು ಕೊಡುತ್ತೇನೆ ಅಂದೆ. ಮನೆಗೆ ಬರುವ ಅತಿಥಿಗಳು, ಭಿಕ್ಷುಕರು ಪ್ರತಿಯೊಬ್ಬರೂ ದೇವರುಗಳೇ. ಹಾಗಾಗಿ, ಅವರಿಗೆ ಒಳ್ಳೆಯದು ಕೊಡಬೇಕು. ದೇವರಿಗೆ ಒಳ್ಳೇದು ಕೊಟ್ಟರೆ. ನಮಗೆ ಅವನು ಒಳ್ಳೇದು ಮಾಡ್ತಾನೆ ಅಂತ ಹೇಳಿದಳು. ಎಷ್ಟು ಚೆನ್ನಾಗಿದೆ ಅಲ್ವಾ ತತ್ವ? ಅದನ್ನೇ ಪಾಲಿಸುತ್ತಿದ್ದೇನೆ.

ಬದುಕಿನಲ್ಲಿ ದಾನ ಎಷ್ಟು ಮುಖ್ಯ ಅಂತೀರಿ?
           ಗಾಳಿ, ನೀರು, ಊಟದಷ್ಟೇ ಮುಖ್ಯ. ಹಣ ಹೆಚ್ಚು ಬಂದಾಗ ದಾನ ಮಾಡದೇ ಇದ್ದರೆ ಅದು ಜೀವನ ಹಾಳು ಮಾಡುತ್ತೆ. ಹಣಬೇಕು. ಬೇಡ ಅಂತಲ್ಲ. ಅವಶ್ಯಕತೆ ಮೀರಬಾರದು. ವ್ಯಾಯಮ ದೇಹಕ್ಕೆ, ಮನಸ್ಸಿಗೆ ದಾನವೇ ವ್ಯಾಯಮ. ವಿಶ್ಲೇಷಣೆ ಮಾಡಿ. 

ನಿಮ್ಮ ಸರಳತೆ ರಹಸ್ಯ ಹೇಳಿ?
          ಇದೊಂಥರ ಆರಾಮ್‌ ಅಲ್ವಾ? ಚಿನ್ನ ಇದ್ದರೆ. ಚಿನ್ನ ಹಾಕಿಕೊಳ್ಳಬೇಕು, ಚಿನ್ನ ತೆಗೆದಿಡಬೇಕು. ಕಳವು ಮಾಡ್ತಾರೆ ಅನ್ನೋ ಭಯ. ಈ ವಯಸ್ಸಲ್ಲಿ ನಾವು ಎಂಥ ಬಟ್ಟೆ, ಆಭರಣ ಹಾಕ್ಕೊಂಡ್ರು ಕಾಣೋದು ಹಿಂಗೇ. ವಿಶ್ಲೇಷಣೆ ಮಾಡಿದಾಗ ಅನಿಸಿತು. ಇವೆಲ್ಲ ಏಕೆಬೇಕು, ಯಾರಿಗೋಸ್ಕರ. ನಮ್ಮ ಸಂತೋಷಕ್ಕೆ ಅನ್ನೋದಾದರೆ, ನಮಗೆ ಬೇರೆಯದರಿಂದ ಸಂತೋಷ ಸಿಗುತ್ತಲ್ಲ. ಇಟ್‌ ಈಸ್‌ ನೈಸ್‌ ಟುಬಿ ಸಿಂಪಲ್‌, ಬಟ್‌ ಇಟ್‌ ಈಸ್‌ ಡಿಫಿಕಲ್ಟ್ ಟುಬಿ ಸಿಂಪಲ್‌.

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.