ತಾಯಿಗೆ ಪರೀಕ್ಷೆ; ಶಿಶುವಿಗೆ ಖಾಕಿ ರಕ್ಷೆ
Team Udayavani, Oct 1, 2018, 8:10 AM IST
ಹೈದರಾಬಾದ್: ಸಾಮಾನ್ಯವಾಗಿ ಪೊಲೀಸರು ಕಠಿಣ ಹೃದಯಿಗಳಾಗಿರುತ್ತಾರೆ ಎನ್ನುವ ಅಭಿಪ್ರಾಯ ಕೆಲವರಲ್ಲಿದೆ. ಆದರೆ ತೆಲಂಗಾಣದ ಮೆಹಬೂಬ್‌ನಗರದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರ ಕೆಲಸ ಆ ಅಭಿಪ್ರಾಯವನ್ನು ಬದಲಾಯಿಸಿದೆ. ಇತ್ತೀಚೆಗೆ ತೆಲಂಗಾಣ ಸರಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕಾಗಿ ತಾಯಿಯೊಬ್ಬರು ತನ್ನ ಶಿಶುವಿನೊಂದಿಗೆ ಮೆಹಬೂಬ್‌ನಗರಕ್ಕೆ ಬಂದಿದ್ದರು.
ಪರೀಕ್ಷಾ ಕೇಂದ್ರದೊಳಕ್ಕೆ ಶಿಶುವನ್ನು ಕರೆದೊಯ್ಯಲು ಅವಕಾಶ ಇಲ್ಲದ ಕಾರಣ, ಮೂಸಾಪೇಟೆ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮುಜೀಬುರ್ ರೆಹಮಾನ್ ಅವರು, ಆ ಮಗುವನ್ನು ತಾವೇ ಎತ್ತಿಕೊಂಡು, ತಾಯಿಯನ್ನು ಪರೀಕ್ಷಾ ಕೇಂದ್ರದೊಳಕ್ಕೆ ಕಳುಹಿಸಿದರು. ಮಹಿಳೆಯು ನಿಶ್ಚಿಂತೆಯಿಂದ ಪರೀಕ್ಷೆ ಬರೆದು ಮುಗಿಸಿ ಬರುವವರೆಗೂ, ರೆಹಮಾನ್ ಅವರು ಮಗುವನ್ನು ಎತ್ತಿಕೊಂಡು, ಅದರ ಆರೈಕೆ ಮಾಡಿದ್ದಾರೆ.
ಅವರ ಫೋಟೋವನ್ನು ಕಾಲೇಜು ವಿದ್ಯಾರ್ಥಿಗಳು ಕ್ಲಿಕ್ಕಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಮ ರಾಜೇಶ್ವರಿ ಈ ಫೋಟೋವನ್ನು ‘ಪರೀಕ್ಷೆ ಬರೆಯುವ ತಾಯಿ ಬರುವವರೆಗೆ ಅಳುವ ಮಗುವನ್ನು ಸಂತೈಸುತ್ತಿರುವುದು’ ಎಂಬ ಶಿರೋನಾಮೆ ಹಾಕಿ ಟ್ವೀಟ್ ಮಾಡಿದ್ದರು. ಅದು ಈಗ ವೈರಲ್ ಆಗಿದ್ದು, ರೆಹಮಾನ್‌ರ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.