ಕುಂದಾಪುರ: ಲಾಡ್ಜ್ನಲ್ಲಿ ಜೋಡಿ ಆತ್ಮಹತ್ಯೆ


Team Udayavani, Oct 1, 2018, 10:30 AM IST

kundapura.jpg

ಕುಂದಾಪುರ: ಶಾಸ್ತ್ರೀ ಸರ್ಕಲ್‌ ಸಮೀಪದ ಖಾಸಗಿ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದ ಶೃಂಗೇರಿ ಮೂಲದ 43 ವರ್ಷದ ವ್ಯಕ್ತಿ ಹಾಗೂ 30ರ ಹರೆಯದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ಸುಮಾರು 11.30ರ ಸುಮಾರಿಗೆ ಬೆಳಕಿಗೆ ಬಂದಿದೆ.

ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದ ಸಿಂಧುವಳ್ಳಿಯ ಗುರುಮೂರ್ತಿ (43) ಹಾಗೂ ಅದೇ ಗ್ರಾಮದ ನೇತ್ರಳ್ಳಿ ನಿವಾಸಿ ರಮೇಶ್‌ ಮೊಗವೀರ ಅವರ ಪತ್ನಿ ಶಾರದಾ (30) ಆತ್ಮಹತ್ಯೆ ಮಾಡಿಕೊಂಡವರು.

ಬೆಳಗ್ಗೆ 11 ಗಂಟೆಯಾದರೂ ಬಾಗಿಲು ತೆರೆಯದ ಕಾರಣ ಲಾಡ್ಜ್ ಸಿಬಂದಿ ಬಾಗಿಲು ಬಡಿದರು. ಆದರೂ ಪ್ರತಿಕ್ರಿಯೆ ಬಾರದ್ದರಿಂದ ಸಂಶಯಗೊಂಡು ಕಿಟಕಿ ಮೂಲಕ ಇಣುಕಿ ನೋಡಿದಾಗ ಗುರುಮೂರ್ತಿ ಹಾಸಿಗೆಯ ಮೇಲೆ ಹಾಗೂ ಶಾರದಾ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಇಬ್ಬರ ಮನೆಯವರೂ ಶೃಂಗೇರಿಯಿಂದ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯ ಬಾಗಿಲು ಒಡೆಯಲಾಯಿತು.

ಗುರುಮೂರ್ತಿ ಮನೆಗೆ ಶಾರದಾ ಹಾಗೂ ಅವರ ಪತಿ ರಮೇಶ್‌ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಈ ವೇಳೆ ಶಾರದಾ ಹಾಗೂ ಗುರುಮೂರ್ತಿ ಮಧ್ಯೆ ಆತ್ಮೀಯತೆ ಬೆಳೆಯಿತು ಎನ್ನಲಾಗಿದೆ. ಅವರಿಬ್ಬರ ಸಂಬಂಧ ಊರಿನವರಿಗೆ ಗೊತ್ತಾಗುತ್ತದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಗುರುಮೂರ್ತಿ ಬೆಂಗಳೂರಿನಲ್ಲಿರುವುದಾಗಿ ಸಂಬಂಧಿಕರಿಗೆ ಫೋನ್‌ ಮೂಲಕ ತಿಳಿಸಿದ್ದಾರೆ. ಶಾರದಾ ಅವರು ಸೆ. 23ರಂದು ಪುತ್ರಿಯೊಂದಿಗೆ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದು, ಸೆ. 24ರಂದು ಪುತ್ರಿಯ ಟಿಸಿ ತರಲು ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ, ಅಲ್ಲಿಂದ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಇಬ್ಬರೂ ಕೂಡ ಸೆ. 24ರಂದು ಊರಿಂದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಶಾಸ್ತ್ರೀ ಸರ್ಕಲ್‌ ಸಮೀಪದ ಹೊಟೇಲ್‌ಸೆ. 26ರಂದು ಬಂದ ಅವರು ದಂಪತಿಯೆಂದು ಮಾಹಿತಿ ನೀಡಿ ಕೊಠಡಿ ಪಡೆದಿದ್ದರು. ಸೆ. 29ರಂದು ರಾತ್ರಿ 10 ಗಂಟೆಯ ಬಳಿಕ ರವಿವಾರ ಬೆಳಗ್ಗಿನ ನಡುವೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಎಡಿಶನಲ್‌ ಎಸ್ಪಿ ಕುಮಾರ ಚಂದ್ರ ಭೇಟಿ ನೀಡಿದರು. ಎಸ್‌ಐ ಹರೀಶ್‌ ಆರ್‌. ನಾಯ್ಕ, ಪೊಲೀಸ್‌ ಸಿಬಂದಿ ಚೇತನ್‌ ಮತ್ತಿತರರು ಭೇಟಿ ನೀಡಿ, ಮೃತದೇಹವನ್ನು ಹೊರತೆಗೆಯಲು ಸಹಕರಿಸಿದರು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಎರಡೂ ಕಡೆಯವರಿಗೂ ಮೃತದೇಹ ವನ್ನು ಹಸ್ತಾಂತರಿಸಲಾಯಿತು.

ಇಬ್ಬರೂ ವಿವಾಹಿತರು
ಇಬ್ಬರೂ ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಗುರುಮೂರ್ತಿ ಕೃಷಿಕರಾಗಿದ್ದು 8 ವರ್ಷದ ಹೆಣ್ಣು ಮಗುವಿದ್ದರೆ, ಗೃಹಿಣಿಯಾಗಿರುವ ಶಾರದಾ ಅವರಿಗೆ ರಮೇಶ್‌ ಅವರೊಂದಿಗೆ 10 ವರ್ಷದ ಹಿಂದೆ ವಿವಾಹವಾಗಿದ್ದು, 8 ವರ್ಷದ ಹೆಣ್ಣು ಮಗುವಿದೆ.

ಪತಿ ವಿರುದ್ಧ ದೂರು
ಕೊಠಡಿಯಲ್ಲಿ ಶಾರದಾ ಬರೆದಿಟ್ಟಿದ್ದ ಡೆತ್‌ನೋಟ್‌ ಲಭಿಸಿದ್ದು, “ನನ್ನ ಸಾವಿಗೆ ಗಂಡನ ಕಿರುಕುಳವೇ ಕಾರಣ’ ಎಂಬ ಉಲ್ಲೇಖವಿದೆ. ಅದರಂತೆ ಆಕೆಯ ಸಹೋದರ ರಮೇಶ್‌ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಪತಿ ರಮೇಶ್‌ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Sullia: ಅಸ್ವಸ್ಥ ಮಹಿಳೆ ಸಾವು

Sullia: ಅಸ್ವಸ್ಥ ಮಹಿಳೆ ಸಾವು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.