ಮತ್ತೆ ಹೊಸಬರ ಜೊತೆ ಮಹೇಶ್ ಬಾಬು
Team Udayavani, Oct 1, 2018, 11:50 AM IST
ನಿರ್ದೇಶಕ ಮಹೇಶ್ ಬಾಬು ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮಾತಿದೆ. ಅದೇನೆಂದರೆ ಮಹೇಶ್ ಬಾಬು ಪರಿಚಯಿಸಿದ ಹೊಸಬರು ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂದು. ಅದರಲ್ಲೂ ನಾಯಕಿಯರ ವಿಷಯದಲ್ಲಿ ಮಹೇಶ್ ಬಾಬು ಲಕ್ಕಿ ಹ್ಯಾಂಡ್ ಎಂದು. ಅದಕ್ಕೆ ಸಾಕ್ಷಿ ಎಂಬಂತೆ ಮಹೇಶ್ ಬಾಬು ಚಿತ್ರದ ಮೂಲಕ ಲಾಂಚ್ ಆದ ಅನೇಕ ನಟಿಯರು ಇವತ್ತು ಬಿಝಿಯಾಗಿದ್ದಾರೆ. ಈಗ ಯಾಕೆ ಈ ವಿಷಯ ಎಂದರೆ ಮಹೇಶ್ ಬಾಬು ಮತ್ತೆ ಹೊಸಬರತ್ತ ಮುಖ ಮಾಡಿದ್ದಾರೆ.
ಸದ್ಯದಲ್ಲೇ ಹೊಸಬರೇ ತುಂಬಿಕೊಂಡಿರುವ ಅವರ ಚಿತ್ರ ಸೆಟ್ಟೇರಲಿದೆ. ಈ ಬಾರಿ ಅವರು ಪರಿಚಯಿಸುವ ನಾಯಕ-ನಾಯಕಿಗೆ ಯಾವ ರೀತಿ ಅದೃಷ್ಟ ಕೈ ಹಿಡಿಯುತ್ತೋ ನೋಡಬೇಕು. “ಕ್ರೇಜಿಬಾಯ್’ ಚಿತ್ರದ ಮೂಲಕ ದಿಲೀಪ್ ಹಾಗೂ ಆಶಿಕಾ ಅವರನ್ನು ಮಹೇಶ್ ಬಾಬು ಪರಿಚಯಿಸಿದ್ದರು. ಆ ನಂತರ ಚೇತನ್ ಜೊತೆಗೆ “ಅತಿರಥ’ ಚಿತ್ರದ ಮಾಡಿದ ಮಹೇಶ್ ಬಾಬು ಈಗ ಮತ್ತೂಂದು ಹೊಸಬರ ಸಿನಿಮಾಕ್ಕೆ ಅಣಿಯಾಗಿದ್ದಾರೆ.
ಸುಘೋಷ್ ಎಂಬ ಹೊಸ ಪ್ರತಿಭೆ ಮಹೇಶ್ ಬಾಬು ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಸುಘೋಷ್ ಈಗಾಗಲೇ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಈ ಬಾರಿಯೂ ಮಹೇಶ್ ಬಾಬು ಒಂದು ಔಟ್ ಅಂಡ್ ಔಟ್ ಲವ್‌ಸ್ಟೋರಿ ಹೇಳಲು ಮುಂದಾಗಿದ್ದಾರೆ. ಅವರದೇ ಮಾತಲ್ಲಿ ಹೇಳುವುದಾದರೆ, ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಲವ್‌ಸ್ಟೋರಿ. ಇನ್ನು, ಕಥೆ, ಪಾತ್ರಕ್ಕೆ ಹೊಂದಿಕೆಯಾಗುವ ನಾಯಕಿಯ ಹುಡುಕಾಟದಲ್ಲಿ ಮಹೇಶ್ ಬಾಬು ಬಿಝಿ.
ಈಗಾಗಲೇ ಒಂದಷ್ಟು ನಟಿಯರ ಜೊತೆ ಮಾತುಕತೆಯಾಗಿದ್ದು, ಸದ್ಯದಲ್ಲೇ ಅಂತಿಮವಾಗಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಶೀರ್ಷಿಕೆ, ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಈ ನಡುವೆಯೇ ಮಹೇಶ್ ಬಾಬುಗೆ “ಅತಿರಥ’ ಚಿತ್ರ ಖುಷಿಕೊಟ್ಟಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಆ ಚಿತ್ರ ಸದ್ದು ಮಾಡದೇ ಹೋದರೂ ಹಿಂದಿ ಡಬ್ಬಿಂಗ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆಯಂತೆ. ಟ್ರೆಂಡಿಂಗ್ ಓಟದಲ್ಲಿ “ಅತಿರಥ’ನ ಓಟ ಜೋರಾಗಿದ್ದು, ಮಹೇಶ್ ಬಾಬು ಖುಷಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.