ನಟ ರಕ್ಷಿತ್ ಶೆಟ್ಟಿ ರೆಡ್‌ಕ್ರಾಸ್ ಸಂಸ್ಥೆ ರಾಯಭಾರಿ
Team Udayavani, Oct 1, 2018, 12:43 PM IST
ಕೆಂಗೇರಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ (ಬ್ರಾಂಡ್ ಅಂಭಾಸೆಡರ್) ರಾಯಭಾರಿಯಾಗಿ ನಟ ರಕ್ಷಿತ್ ಶೆಟ್ಟಿಯವರನ್ನು ನೇಮಿಸಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಭವನದಲ್ಲಿ ರಾಜ್ಯ ರೆಡ್ ಕ್ರಾಸ್ ಸೊಸೈಟಿಯು ಅಯೋಜಿಸಿದ್ದ ರಾಷ್ಟ್ರೀಯ ವಾಲೆಂಟರಿ ಬ್ಲಿಡ್ ಡೋನೇಷನ್ ಡೇ-2018ರ ಕಾರ್ಯಕ್ರಮದಲ್ಲಿ ರಾಜ್ಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಬಸರೂರು ರಾಜೀವ್ ಶೆಟ್ಟಿ ಅವರು ನಟ ರಕ್ಷಿತ್ ಶೆಟ್ಟಿಯವರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ರಾಯಭಾರಿಯಾಗಿ ನೇಮಕಗೊಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.
ಸಮಾರಂಭದಲ್ಲಿ ಸ್ವತಃ ನಟ ರಕ್ಷಿತ್ ಶೆಟ್ಟಿಯವರು ರಕ್ತದಾನವನ್ನು ಮಾಡಿ, ಮಾತನಾಡಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನಾದರು ಸಮಾಜ ಸೇವೆಗಾಗಿ ಮೀಸಲಾಗಿಡಬೇಕು. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಮತ್ತು ಎನ್‌ಎಸ್‌ಎಸ್ ಉತ್ತಮ ಕಾರ್ಯವನ್ನು ಮಾಡುತ್ತಿದ್ದು ಸಾವಿರಾರು ಯುನಿಟ್ ರಕ್ತವನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ಅದನ್ನು ನೀಡುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಘಟಕದ ಚೊಚ್ಚಲ ರಾಯಭಾರಿಯಾಗಿ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಕ್ಕೆ ಮುಂದಾಗಬೇಕು ಎಂದು ಹೇಳಿದರು. ರಕ್ತ ದಾನಕ್ಕೆ ಮಹಿಳೆಯರಿಂದ ಅಗತ್ಯ ಸ್ಪಂದನೆ ದೊರಕುತ್ತಿಲ್ಲ.
ಶೇ.0.6ರಷ್ಟು ಮಹಿಳೆಯರು ಮಾತ್ರ ರಕ್ತದಾನ ಪ್ರಕ್ರಿಯೆಯಲ್ಲಿ ಕೈ ಜೋಡಿಸಿದ್ದಾರೆ. ಎಲ್ಲಾ ರಂಗಗಳಲ್ಲಿ ಪಾರಮ್ಯ ಸಾಧಿಸಿರುವ ಮಹಿಳೆಯರು ರಕ್ತ ದಾನಕ್ಕೂ ಮುಂದಾಗಬೇಕು. ರಕ್ತ ದಾನವೊಂದೆ ರಕ್ತ ಸಂಗ್ರಹಣೆಗೆ ಇರುವ ಏಕೈಕ ಮಾರ್ಗ. ರಕ್ತ ದಾನದಿಂದ ಹೃದಯ ಬೇನೆ ಸೇರಿದಂತೆ ಇನ್ನಿತರ ಕಾಯಿಲೆಗಳ ಸಂಭವನೀಯತೆಯು ಇಳಿ ಮುಖವಾಗಲಿದೆ ಎಂದು ರೆಡ್ ಕ್ರಾಸ್ ರಾಜ್ಯ ಘಟಕದ ಸಭಾಪತಿ ಬಸೂರ್ ರಾಜೀವ ಶೆಟ್ಟಿ ಹೇಳಿದರು.
ಬೆಂವಿವಿ ಕಮ್ಯೂನಿಕೇಷನ್ ಮುಖ್ಯಸ್ಥ ಪ್ರೊ,ಡಾ.ಅಶೋಕ್ ಕುಮಾರ್ ಮಾತನಾಡಿ ವಿಶ್ವವಿದ್ಯಾಲಯವು ರೆಡ್‌ಕ್ರಾಸ್ ಸಂಸ್ಥೆಯೊಡಗೂಡಿ ಎನ್‌ಎಸ್‌ಎಸ್ ಸ್ವಯಂ ಸೇವಕರ ಜತೆ ಪ್ರತಿ ವರ್ಷ ನಗರದ ಹಲವಾರು ಕಾಲೇಜುಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ರಕ್ತವನ್ನು ಸಂಗ್ರಹಿಸಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. ಇದೇ ವೇಳೆ ಅವರು ರೆಡ್ ಕ್ರಾಸ್ ಸಂಸ್ಥೆಯ ನೂತನ ಘೋಷಣಾ ವಾಕ್ಯ ”ರಕ್ತದಾನದಿಂದ ಸಂತೋಷ” ಫಲಕ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಯಿತು. ರಕ್ತದಾನದ ಉಪಸಮಿತಿಯ ಕನ್‌ವೀನರ್ ಡಾ. ಶಾಮ್ ಸುಂದರ್, ರಾಜ್ಯ ಸಂಯೋಜನಾದಿಕಾರಿ ಬಾಲಕೃಷ್ಣಶೆಟ್ಟಿ, ಕಾರ್ಯದರ್ಶಿ ಅಶೊಕ್ ಕುಮಾರ್ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಆರ್.ಶ್ರೀನಿವಾಸ್, ರಾಜೀವ್ ಚಂದ್ರಶೇಖರ್, ಜಯರಾಮ್ ಶೆಟ್ಟಿ ಸೇರಿದಂತೆ ನೂರಾರು ಎನ್‌ಎಸ್‌ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.