ಸೂಕ್ಷ್ಮತೆಯಲ್ಲಿದೆ ಬದುಕಿನ ನೆಮ್ಮದಿ


Team Udayavani, Oct 1, 2018, 3:51 PM IST

1-october-16.gif

ಅಣು, ರೇಣು, ತೃಣ ಕಾಷ್ಠಗಳೆಲ್ಲ ಸೂಕ್ಷ್ಮವೇ ಸೂಕ್ಷ್ಮಕ್ಕೆ ಪರ್ಯಾಯ ಪದಗಳೇ. ಹಾಗಿರುವಾಗ ‘ತೇನ ವಿನಾ ತೃಣ ಮಪಿ ನ ಚಲತಿ’ ಎಂಬ ಶರಣಾಗತಿಗೆ ಸಂಬಂಧಿತ ವಾಕ್ಯವೂ ಇದಕ್ಕೆ ಅನ್ವರ್ಥವೇ…

ಏನಿದ್ದರೂ ಇಲ್ಲಿ ಸೂಕ್ಷ್ಮ ಎಂಬ ಪದವೇ ಪ್ರಧಾನ. ನಮ್ಮ ಪ್ರತಿಯೊಂದು ಕಾರ್ಯವೂ ಸೂಕ್ಷ್ಮತೆಯಿಂದ ಕೂಡಿರಬೇಕು. ಅರ್ಥಾತ್‌ ನಾವು ಇಡುವ ಹೆಜ್ಜೆ, ನುಡಿದ ಮಾತು, ನೋಡುವ ನೋಟ, ಮಾಡುವ ಕಾರ್ಯಗಳೆಲ್ಲದರಲ್ಲಿಯೂ ಸೂಕ್ಷ್ಮತೆ ಇದ್ದರೆ ಆದರೆ ಫ‌ಲಿತಾಂಶವೂ ಉತ್ತಮವಾಗಿರುತ್ತದೆ ಎಂಬುದು ನಂಬಿಕೆ. ವಾಸ್ತವ ಸತ್ಯ. ಇಲ್ಲವಾದರೆ ಅರ್ಥಹೀನ ಎನ್ನುವುದಕ್ಕಿಂತ ಅಪೂರ್ಣಗೊಳ್ಳುತ್ತದೆ ಎಂದರೆ ತಪ್ಪಾಗಲಾರದು.

ಇನ್ನೊಬ್ಬರು ನಮ್ಮೊಡನೆ ಮಾತನಾಡುವಾಗ ನಾವು ಅವರ ಮಾತನ್ನು ಕೇಳಿದ ಬಳಿಕವೇ ಉತ್ತರಿಸುವುದು. ಇಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿ ಅತ್ಯಗತ್ಯ. ಅಂತೆಯೇ ತರಗತಿಗೆ ಬಂದ ವಿದ್ಯಾರ್ಥಿ ಕುರ್ಚಿ, ಡೆಸ್ಕ್ ಎಳೆಯುವುದು, ದೊಪ್ಪನೆ ಪುಸ್ತಕ, ಬ್ಯಾಗ್‌ಗಳನ್ನು ಎಸೆಯುವುದು, ಹೇಗೋ ಹೇಗೋ ಕುಳಿತುಕೊಳ್ಳುವುದು, ನಿತ್ಯೋಪಯೋಗಿ ಬಟ್ಟೆ ಬರೆ, ಪುಸ್ತಕ ಲೇಖನ ಸಾಮಗ್ರಿಗಳೊಂದಿಗೆ ಅತಿ ಮುಖ್ಯವಾದ ವಸ್ತುಗಳನ್ನೂ ಎಲ್ಲೆಂದರಲ್ಲಿ ಇಡುವುದು.

ಇದೆಲ್ಲ ಸರಿಯೇ? ಪ್ರತಿಯೊಂದು ವಸ್ತುವಿಗೂ ಪ್ರತಿಯೊಂದು ಕಾರ್ಯಕ್ಕೂ, ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆದ ಮಹತ್ವವಿದೆ. ವಸ್ತುಗಳನ್ನು ಒಂದೆಡೆ ನಿರ್ದಿಷ್ಟ ಸ್ಥಳದಲ್ಲಿಡುವುದು, ತೆಗೆಯುವುದು, ಉಪಯೋಗಿಸಿದ ಬಳಿಕ ಮತ್ತೆ ಅಲ್ಲಿಯೇ ಜೋಪಾನವಾಗಿಡುವುದು ಒಂದು ಸೂಕ್ಷ್ಮತೆಯ ಕೆಲಸ.

ಎಷ್ಟೋ ಬಾರಿ ಒಂದು ವಸ್ತುವಿಗಾಗಿ ಹುಡುಕಿ, ನಮಗೆ ನಾವೇ ಹೇಳಿ ಕೊಳ್ಳುತ್ತೇವೆ. ಅಗತ್ಯವಿದ್ದಾಗ ಯಾವುದೂ ಸಿಗುವುದಿಲ್ಲ…ಇಂಥ ಸ್ಥಿತಿಗೆ ನಾವೇ ಕಾರಣರಾಗುತ್ತೇವೆ. ವಸ್ತು ಸಿಗದಿದ್ದಾಗ ನಮಗೆ ನಾವೇ ಗಲಿಬಿಲಿಯಾಗುತ್ತೇವೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಹುಡುಕಿ ಹುಡುಕಿ ಸುಸ್ತಾಗುತ್ತೇವೆ. ಕೆಲವೊಮ್ಮೆ ಹತ್ತಿರವಿರುವವರ ಮೇಲೆ ಹರಿಹಾಯುತ್ತೇವೆ. ಒಟ್ಟಾರೆ ಪರಿಸ್ಥಿತಿಯ ಕೈಗೊಂಬೆಯಾಗಿ ನಾವಿರಿಸಿಕೊಳ್ಳದ ಸೂಕ್ಷ್ಮ ಪ್ರಜ್ಞೆಯ ದೆಸೆಯಿಂದ ನಾವೇ ಕಂಗಾಲಾಗುತ್ತೇವೆ. ಇದರಿಂದ ನಮ್ಮ ಸುತ್ತಮುತ್ತಲಿನ ಜನರೊಡನೆ ಬಾಂಧವ್ಯವೂ ಹದಗೆಡುತ್ತದೆ. ಆದ್ದರಿಂದ ಸೂಕ್ಷ್ಮತೆ ಶಬ್ದ ಕೇವಲ ಶಬ್ದವಾಗಿರದೇ ನಾವು ನಿತ್ಯ ಮಾಡುವ ಕಾರ್ಯಗಳಲ್ಲಿ ರೂಢಿಸಿ ಕೊಳ್ಳಬೇಕಾದ ಅತ್ಯಂತ ಅಗತ್ಯದ ಅರ್ಥಗರ್ಭಿತ ಪದ ಕೂಡ ಹೌದು.

ಉಮೇಶ್‌ ಕಾರಂತ ಮಂಗಳೂರು

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.