ಹಿರಿಯ ನಾಗರಿಕರನ್ನು ಗೌರವಿಸುವುದು ಅತ್ಯಗತ್ಯ
Team Udayavani, Oct 2, 2018, 6:00 AM IST
ಉಡುಪಿ: ಮನೆಯಲ್ಲಿರುವ ಹಿರಿಯರನ್ನು ಅಗೌರವಿಸುವವರನ್ನು ಸಮಾಜ ಕೂಡ ಅಗೌರವಿಸಬೇಕು. ಆಗಲಾದರೂ ವೃದ್ಧ ತಂದೆ ತಾಯಿಯರನ್ನು ಗೌರವಿಸುವ ಮನಃಸ್ಥಿತಿ ಮಕ್ಕಳಲ್ಲಿ ಬೆಳೆಯಬಹುದು. ಕಾನೂನಿಂದ ಹಿರಿಯ ನಾಗರಿಕರಿಗೆ ರಕ್ಷಣೆ ನೀಡಬಹುದು. ಆದರೆ ಅವರಿಗೆ ಗೌರವ ಸಿಗುವಂತೆ ಮಾಡಲು ಸಾಧ್ಯವಾಗುವುದು ಸಮಾಜ ಮನಸ್ಸು ಮಾಡಿದಾಗ ಮಾತ್ರ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸೋಮವಾರ ಜರಗಿದ ವಿಶ್ವ ಹಿರಿಯನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವೃದ್ದ ತಂದೆತಾಯಿಗಳನ್ನು ನೋಡಿಕೊಳ್ಳುವಷ್ಟು ಸಮಯ ಇಂದಿನ ಯುವ ಜನತೆಗಿಲ್ಲ. ವೃದ್ಧಾಶ್ರಮಕ್ಕೆ ತಂದೆತಾಯಿಗಳನ್ನು ಬಿಟ್ಟು, ಅವರು ಮೃತರಾದಾಗ ಅವರ ಅಂತ್ಯಸಂಸ್ಕಾರಕ್ಕೂ ಬಾರದೇ ಇರುವಷ್ಟು ಪುರಸೋತ್ತಿಲ್ಲ. ಇದು ವಿದ್ಯಾವಂತ ಸಮಾಜ ಮೌಲಿಕವಾಗಿ ಕುಸಿಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಖೇದ ವ್ಯಕ್ತಪಡಿಸಿದರು.
ಉತ್ತಮ ಮಕ್ಕಳನ್ನು ಗುರುತಿಸಿ
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ಪೋಷಕರನ್ನು ವೃದ್ದಾಪ್ಯದಲ್ಲಿ ಉತ್ತಮವಾಗಿ ಪೋಷಿಸಿದ, ಪೋಷಿಸುತ್ತಿರುವ ಮಕ್ಕಳನ್ನು ಗುರುತಿಸಿ ಸಮ್ಮಾನಿಸಿ, ಇದಕ್ಕೆ ಇಲಾಖೆಯಿಂದ ಬೇಕಾದ ಸಹಕಾರ ನೀಡುವ ಪ್ರಯತ್ನ ಮಾಡುತ್ತೇವೆ. ಇದರಿಂದ ಹತ್ತು ಜನರಿಗೆ ಪ್ರೇರಣೆಯಾಗಲಿ ಎನ್ನುವುದು ನಮ್ಮ ಆಶಯ ಎಂದು ಸಲಹೆ ನೀಡಿದರು.
ಡೇ ಕೇರ್‌ಗೆ ಸಹಾಯ
ಹಿರಿಯ ನಾಗರಿಕರ ವೇದಿಕೆಯ ಸಿ.ಎಸ್ ರಾವ್ ಅವರು ಹಿರಿಯ ನಾಗರಿಕರಿಗೆ ಡೇ ಕೇರ್ ಸೆಂಟರ್ ನಡೆಸಲು ಸ್ಥಳಾವಕಾಶ ಕೇಳಿದ್ದಾರೆ. ಬೋರ್ಡ್ ಹೈಸ್ಕೂಲ್‌ನಲ್ಲಿ ಸ್ಥಳಾವಕಾಶ ಒದಗಿಸಿ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಆದರೆ ನಿರ್ವಹಣೆ ಮಾತ್ರ ಹಿರಿಯ ನಾಗರಿಕರ ವೇದಿಕೆ ನೋಡಿಕೊಳ್ಳಬೇಕೆಂದು ಎಂದು ಶಾಸಕ ಭಟ್ ತಿಳಿಸಿದರು.
ಈ ಸಂದರ್ಭ 103 ವರ್ಷದ ಹಿರಿಯ ಗುರುವ ಕೊರಗ ಅವರನ್ನು ಇಲಾಖೆಯಿಂದ ಸಮ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಹಾಯಕ ಜಿಲ್ಲಾ ಪೊಲೀಸ್ ಅಧಿಕ್ಷಕ ಕುಮಾರಚಂದ್ರ, ಜಿ. ಪಂ ಸಿಇಓ ಶಿವಾನಂದ ಕಾಪಶಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎ. ಪಿ. ಕೊಡಂಚ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್ ಗೋನ್ಸಾಲ್ವಿಸ್ ಪ್ರಸ್ತಾವನೆಗೈದರು, ಗಣೇಶ್ ಮರಾಠೆ ವಂದಿಸಿದರು. ಜಿಲ್ಲಾ ಆರೋಗ್ಯ ಇಲಾಖೆಯಿಂದ ನೇತ್ರ ಮತ್ತು ಆರೋಗ್ಯ ತಪಾಸನಾ ಶಿಬಿರ ನಡೆಯಿತು. ಪ್ರಭಾಕರ ಪೈ, ವಸುಧಾ ಪೈ, ನಂದಕುಮಾರ್ ಅವರಿಗೆ ನೇತ್ರದಾನದ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಹೆಲ್ಪ್ ಡೆಸ್ಕ್
ಹಿರಿಯ ನಾಗರಿಕರ ಸಹಾಯಕ್ಕಾಗಿ ನಗರಸಭೆಯಲ್ಲಿ ಸಹಾಯಕೇಂದ್ರವನ್ನು ತೆರೆಯಲು ಉದ್ದೇಶಿಸಿದ್ದೇವೆ. ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇದು ಕೂಡ ಜಾರಿಗೆ ಬರಲಿದೆ. ಬಿಲ್ ಕಟ್ಟುವುದು, ಮೊದಲಾದ ಸಹಾಯಗಳು ಈ ಹೆಲ್ಪ್ಡೆಸ್ಕ್ ಮೂಲಕವೇ ಹಿರಿಯ ನಾಗರಿಕರಿಗೆ ದೊರಕಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.