ಕ್ಲಿನಿಕಲ್ ರಿಸರ್ಚರ್ ಆದ್ರೆ ಕೈ ತುಂಬಾ ಕಾಸು
Team Udayavani, Oct 2, 2018, 6:00 AM IST
ಆಗಿಂದಾಗ್ಗೆ ಒಂದಲ್ಲ ಒಂದು ಬಗೆಯ ಕಾಯಿಲೆಗಳು ಕಾಣಿಸಿಕೊಂಡು ಎಲ್ಲರನ್ನೂ ಹೆದರಿಸುವುದುಂಟು. ಇಂಥ ಸಂದರ್ಭದಲ್ಲಿ ಈ ಹೊಸ ಕಾಯಿಲೆಗೆ ಇಂತಿಂಥ ಔಷಧಿಗಳು ರಾಮಬಾಣದಂತೆ ಮದ್ದಾಗಬಲ್ಲವು ಎಂಬ ಘೋಷಣೆ ಹೊರಬೀಳುತ್ತದಲ್ಲ, ಅದರ ಹಿಂದಿರುವವರೇ ಕ್ಲಿನಿಕಲ್ ರಿಸರ್ಚರ್‌ಗಳು!
ಪೌಷ್ಠಿಕಾಂಶ ಹೊಂದಿದ ಆಹಾರ ಸೇವನೆಯಿಂದಷ್ಟೇ ಆರೋಗ್ಯ ಭಾಗ್ಯ. ಆಹಾರದಲ್ಲಿ ಪೌಷ್ಠಿಕಾಂಶಗಳ ಕೊರತೆ, ನೀರಿನ ವ್ಯತ್ಯಾಸ ಹಾಗೂ ದೇಹಕ್ಕೆ ಹೊಂದಿಕೆಯಾಗದಂಥ ಹವಾಗುಣದ ಕಾರಣದಿಂದ ಅನಾರೋಗ್ಯ ಉಂಟಾಗುತ್ತದೆ. ಅದೇ ನೆಪದಲ್ಲಿ ಹೆಸರೇ ಗೊತ್ತಿಲ್ಲದ ಕಾಯಿಲೆ ಅಂಟಿಕೊಳ್ಳುತ್ತದೆ. ಕೆಲವೊಮ್ಮೆ ಸೋಂಕು ಮತ್ತು ವಂಶವಾಹಿ ಕಾರಣದಿಂದಲೂ ರೋಗ ಕಾಣಿಸಿಕೊಳ್ಳುವುದುಂಟು. ಇಂಥ ಸಂದರ್ಭದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಔಷಧೋಪಚಾರಕ್ಕೆ ಮುಂದಾಗಬೇಕು.
ಜ್ವರವಿದ್ದರೆ ಈ ಮಾತ್ರೆ, ಹೊಟ್ಟೆ ನೋವಿಗೆ ಆ ಮಾತ್ರೆ, ನೆಗಡಿ- ಕೆಮ್ಮು, ತಲೆನೋವಿಗೆ ಬೇರೊಂದು ಮಾತ್ರೆ ಎಂದು ವೈದ್ಯರೇನೋ ಹೇಳುತ್ತಾರೆ. ಆದರೆ, ಇಂತಿಂಥ ಕಾಯಿಲೆಗೆ ಇಂಥದೇ ಮಾತ್ರೆ ಬಳಸಿ ಎಂದು ಖಡಾಖಂಡಿತವಾಗಿ ಹೇಳುವ ತಜ್ಞರ ತಂಡವೂ ಇದೆ. ಅವರೇ ಕ್ಲಿನಿಕಲ್ ರಿಸರ್ಚರ್‌ಗಳು.
ಯಾವುದೇ ರೋಗ ಪತ್ತೆಯಾಯಿತೆಂದರೆ ಆರೋಗ್ಯಕ್ಕೆ ಕಾರಣವಾದ ವೈರಾಣು, ಅದರ ಲಕ್ಷಣಗಳು, ಅದನ್ನು ನಾಶ ಮಾಡಲು ಇರಬಹುದಾದ ಮಾರ್ಗ, ಅದು ಕಂದೊಡ್ಡುವ ಕಾಯಿಲೆಗೆ ಪ್ರತಿರೋಧ ಒಡ್ಡುವಂಥ ಔಷಧಗಳ ಉತ್ಪಾದನೆ, ಹೊಸದಾಗಿ ತಯಾರಾದ ಔಷಧವನ್ನು ಯಾವ ಪ್ರಮಾಣದಲ್ಲಿ ಕೊಡಬೇಕು ಎಂಬ ಸೂಚನೆ, ಇವೆಲ್ಲಾ ವಿಷಯವಾಗಿ ಈ ಕ್ಲಿನಿಕಲ್ ರಿಸರ್ಚರ್‌ಗಳು ಸಂಶೋಧನೆ ನಡೆಸುತ್ತಾರೆ.
ಔಷಧಿಗಳ ಅನುಕೂಲ ಮತ್ತು ಪ್ರತಿಕೂಲ ಪರಿಣಾಮಗಳನ್ನು ಗ್ರಹಿಸಿ, ಸುರಕ್ಷತೆ ಮತ್ತು ಅಡ್ಡಪರಿಣಾಮಗಳನ್ನು ತಡೆಯಲು ಸಲಹೆ ಸೂಚನೆ ನೀಡುವವರು ಇವರೇ.
ಇವರು ಮನುಷ್ಯನ ದೇಹದಲ್ಲಾಗುವ ಜೈವಿಕ ಬದಲಾವಣೆಗಳನ್ನು ಗಮನಿಸುತ್ತಾ, ಹಲವು ಬಗೆಯ ಪ್ರಯೋಗಗಳನ್ನು ನಡೆಸುತ್ತಿರುತ್ತಾರೆ. ಔಷಧಿಯ ಅಡ್ಡ ಪರಿಣಾಮ ಮತ್ತು ಬದಲಾವಣೆಗಳಲ್ಲಿ ಕಂಡುಬರುವ ದತ್ತಾಂಶಗಳ ಸಂಗ್ರಹಣೆ ಮಾಡುತ್ತಾರೆ. ವಿವಿಧ ರೋಗಗಳ ಕುರಿತು ಅಧ್ಯಯನ ನಡೆಸುತ್ತಾರೆ. ಒಂದೇ ರೋಗಕ್ಕೆ ಬೇರೆ ಬೇರೆ ಔಷಧ ಸಾಧ್ಯವೇ ಎಂದು ಸಂಶೋಧಿಸುವ ಕೆಲಸವನ್ನೂ ಇವರು ಮಾಡುತ್ತಾರೆ. ಭವಿಷ್ಯದಲ್ಲಿ ಕ್ಲಿನಿಕಲ್ ರಿಸರ್ಚರ್ ಆಗಬೇಕು ಎಂಬುದು ನಿಮ್ಮ ಕನಸಾಗಿದ್ದರೆ ಹೀಗೆ ಮಾಡಿ.
ವಿದ್ಯಾಭ್ಯಾಸ ಹೀಗಿರಲಿ
ಪಿಯುಸಿ ಬಳಿಕ ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ ಬಯೋಟೆಕ್/ ಲ್ಯಾಬ್‌ಟೆಕ್ ಪದವಿ ಪೂರೈಸಿ. ಆನಂತರ ಐಸಿಆರ್‌ಐ ಪ್ರವೇಶ ಪರೀಕ್ಷೆ ಬರೆದು, ಒಂದು ವರ್ಷದ ಕ್ಲಿನಿಕಲ್ ರಿಸರ್ಚ್ ಕೋರ್ಸ್ ಮಾಡಿದರೆ ಕ್ಲಿನಿಕಲ್ ರಿಸರ್ಚರ್ ಆಗಬಹುದು. ಮತ್ತೂಂದು ವಿಧದಲ್ಲಿ ಬಿ.ಫಾರ್ಮಾ, ಎಂ.ಪಾರ್ಮ ಮಾಡಿ ಕ್ಲಿನಿಕಲ್ ರಿಸರ್ಚ್ ಮಾಡಿಯೂ ಕ್ಲಿನಿಕಲ್ ಸಂಶೋಧಕರಾಗಬಹುದು. ಇನ್ನೊಂದು ಮಾರ್ಗದಲ್ಲಿ ಐಸಿಆರ್‌ಐ ಪ್ರವೇಶ ಪರೀಕ್ಷೆ ಪೂರೈಸಿ ಕ್ಲಿನಿಕಲ್ ರಿಸರ್ಚ್‌ನಲ್ಲಿ ಪಿ.ಎಚ್.ಡಿ ಮಾಡಿಯೂ ಕ್ಲಿನಿಕಲ್ ರಿಸರ್ಚರ್ ಆಗಬಹುದು.
ಕೌಶಲ್ಯಗಳೂ ಬೇಕು
ವಿವಿಧ ರೋಗಗಳ ಬಗ್ಗೆ ಅರಿವು, ಜ್ಞಾನ
ಔಷಧಿಗಳು ಮತ್ತು ಪರಿಣಾಮ ಅವುಗಳ ಬಳಕೆ ಬಗೆಗೆ ಅರಿವು
ರೋಗಿಗೆ ನೀಡಿದ ಔಷಧಿಗಳ ಚರಿತ್ರೆ ಅರಿಯುವ ಗುಣ
ವೈಜ್ಞಾನಿಕ ಪ್ರಾವೀಣ್ಯತೆ- ವಿಶ್ಲೇಷಣಾತ್ಮಕ ಜ್ಞಾನ
ಕೇಸ್ ಹಿಸ್ಟರಿಗಳ ದತ್ತಾಂಶ ಸಂಗ್ರಹಣೆ ಮತ್ತು ಸಂಶೋಧನಾ ಕೌಶಲ್ಯ
ಗಣಕ ಸಂಬಂಧಿತ ಜ್ಞಾನ, ಏಕಾಗ್ರತೆ
ಅವಕಾಶಗಳು
ಔಷಧೀಯ ಸಂಸ್ಥೆಗಳು
ಜೈವಿಕ ಔಷಧೀಯ ಸಂಸ್ಥೆಗಳು
ಡ್ರಗ್ ಡೆವಲಪ್‌ಮೆಂಟ್ ಅಂಡ್ ಕ್ಲಿನಿಕಲ್ ಟ್ರಯಲ್ ಅಂಡ್ ರಿಸರ್ಚ್ ಸಂಸ್ಥೆಗಳು
ವೈದ್ಯಕೀಯ ಸಂಶೋಧನಾ ಸಂಸ್ಥೆಗಳು
ವೈದ್ಯಕೀಯ ಶೈಕ್ಷಣಿಕ ವಿಭಾಗ
ಸರ್ಕಾರಿ ಮತ್ತು ಖಾಸಗಿ ಕ್ಲಿನಿಕಲ್ ಪ್ರಯೋಗಾಲಯಗಳು
ಮೆಡಿಕಲ್ ಉಪಕರಣಗಳ ವಿನ್ಯಾಸ ಮತ್ತು ಉತ್ಪಾದನಾ ವಲಯ
ಸೌಂದರ್ಯ ವರ್ಧಕ ತಯಾರಿಕಾ ಘಟಕಗಳು
ಕಾಲೇಜುಗಳು
ಇನ್ಸ್‌ಟಿಟ್ಯೂಟ್ ಆಫ್ ಕ್ಲಿನಿಕಲ್ ರಿಸರ್ಚ್ ಇಂಡಿಯಾ, ಇಂದಿರಾನಗರ, ಬೆಂಗಳೂರು
ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜ್ ಆಫ್ ವುಮೆನ್, ಮಲ್ಲೇಶ್ವರ, ಬೆಂಗಳೂರು
ಕ್ಲಿನಿಕಲ್ ರಿಸರ್ಚ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್, ಮಲ್ಲೇಶ್ವರ, ಬೆಂಗಳೂರು
ಕ್ಲಿನಿಕಲ್ ರಿಸರ್ಚ್ ಎಜುಕೇಷನ್ ಅಂಡ್ ಮ್ಯಾನೇಜ್‌ಮೆಂಟ್ ಅಕಾಡೆಮಿ, ಜಯನಗರ, ಬೆಂಗಳೂರು
ಅಕಾಡೆಮಿ ಫಾರ್ ಕ್ಲಿನಿಕಲ್ ಎಕ್ಸಲೆನ್ಸ್, ಸಾಂತಾಕ್ರೂಝ್ ಈಸ್ಟ್, ಮುಂಬೈ
ಎನ್. ಅನಂತ್ ನಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.