ನೆನಪುಗಳ ಜೊತೇನೇ ಬದುಕೋಕೆ ಆಗುತ್ತೇನೋ?

Team Udayavani, Oct 2, 2018, 6:00 AM IST

9.jpg

ಪ್ರತಿದಿನ ನಾವು ಕಾಲ್‌, ಮೆಸೇಜ್‌ ಮಾಡಿಕೊಳ್ಳುತ್ತಿರಬಹುದು. ಆದರೂ ಮನಸ್ಸಿಗೆಕೋ ತೃಪ್ತಿಯೇ ಸಿಗದು. ಫೋನ್‌ನಲ್ಲಿ ಎಷ್ಟೇ ಮಾತಾಡಿದರೂ, ಮೆಸೇಜ್‌ ಮಾಡಿದರೂ ನೀ ಎದುರಿಗೆ ಸಿಕ್ಕ ಹಾಗಲ್ಲ ನೋಡು. ನನ್ನ ಬದುಕು, ನನ್ನ ಉಸಿರು, ನನ್ನ ಭವಿಷ್ಯ, ನನ್ನ ಸಂತೋಷವೇ ನೀನಾಗಿರುವಾಗ ನಿನ್ನ ನೆನಪುಗಳಲ್ಲಿಯೇ ದಿನ ಕಳೆಯುವುದು ಹೇಗೆ?

 ಮನಸ್ಸೇಕೋ ನಿನ್ನನ್ನು ನೋಡಲೇಬೇಕೆಂದು ಹಠ ಹಿಡಿದಿದೆ. ಸಮಾಧಾನ ಹೇಳಿದಷ್ಟೂ ಮುನಿಸಿಕೊಳ್ಳುವ ಮನಸ್ಸು ನಿನ್ನಾಗಮನವನ್ನೇ ಎದುರು ನೋಡುತ್ತಿದೆ. ಮನದಂಗಳದಲ್ಲಿ ಹಚ್ಚಹಸಿರಾಗಿರುವ ನೆನಪುಗಳ ಮಧ್ಯೆ ಅದೆಷ್ಟು ದಿನ ಬದುಕಲಿಕ್ಕಾಗುತ್ತದೆ ಹೇಳು? ಆಗಾಗ ನಾನು ನಿನ್ನನ್ನು ನೋಡುತ್ತಿರಬೇಕು. ನಿನ್ನೊಡನೆ ಮುಗಿಯದಷ್ಟು ಮಾತಾಡುತ್ತಿರಬೇಕು. ಆ ಬಣ್ಣದ ಛತ್ರಿಯ ಅಡಿಯಲ್ಲಿ ನಿನ್ನೊಡನೆ ನಿಂತು ಮುಂಗಾರಿನ ಸ್ವಾದ ಸವಿಯಬೇಕು. ನಿನ್ನ ಪಕ್ಕಕ್ಕೆ ಬೆಚ್ಚನೆ ಕುಳಿತು ಬರುವ ಚಳಿಗಾಲವನ್ನು ಖುಷಿಯಿಂದ ಸ್ವಾಗತಿಸಬೇಕು. ತಂಪು ತಂಗಾಳಿಗೆ ನಾಚುವ ಮುಂಗುರುಳು ಮೆಲ್ಲನೇ ನಿನ್ನ ಹಣೆಗೆ ಮುತ್ತಿಡಬೇಕು. ನಿನ್ನ ತೋಳಿನಲಿ ನಾನು ಬಂಧಿಯಾಗಿರಬೇಕು. ನೀ ಎದುರಿಗೆ ಬಂದಾಗೆಲ್ಲಾ ಸಣ್ಣ ಕೋಪ, ಸಣ್ಣ ಹಠ ಮಾಡಿ ನಿನ್ನನ್ನು ಕಾಡುತ್ತಿರಬೇಕು. ಮನದಲ್ಲಿ ಮೂಡುತ್ತಿರುವ ಈ ಭಾವನೆಗಳಿಗೆಲ್ಲಾ 
ಸಾರಥಿಯಾಗಬೇಕಾದವನು ನೀನೇ!

  ಆದರೆ ನೀನು? ನಮ್ಮೂರು ಹಾಗಿರಲಿ, ನಮ್ಮ ರಾಜ್ಯದ ಗಡಿಯನ್ನೇ ದಾಟಿ ಆಚೆ ಹೋಗಿರುವೆಯಲ್ಲಾ. ನಿನ್ನನ್ನು ನೋಡಲು ಈ ಮನಸ್ಸು ಅದೆಷ್ಟು ದಿನದಿಂದ ಹಂಬಲಿಸುತ್ತಿದೆ ಗೊತ್ತಾ? ನಿನ್ನೊಂದಿಗೆ ಕಳೆಯಲೇಬೇಕಾದ ಮಧುರ ಕ್ಷಣಗಳು, ಹೇಳಲೇಬೇಕಾದ ಮಾತುಗಳು, ಮಾಡಲೇಬೇಕಾದ ತುಂಟಾಟಗಳು ಮನದಲ್ಲೀಗ ಸದ್ದು ಮಾಡಲು ಶುರು ಮಾಡಿವೆ. ನಿನ್ನನ್ನೊಮ್ಮೆ ಸ್ಪರ್ಶಿಸಬೇಕೆಂದು ಈ ಹೃದಯ ಕಾತರದಿಂದ ಕಾಯುತ್ತಿದೆ ಕಣೋ. 

ಪ್ರತಿದಿನ ನಾವು ಕಾಲ್‌, ಮೆಸೇಜ್‌ ಮಾಡಿಕೊಳ್ಳುತ್ತಿರಬಹುದು. ಆದರೂ ಮನಸ್ಸಿಗೆಕೋ ತೃಪ್ತಿಯೇ ಸಿಗದು. ಫೋನ್‌ನಲ್ಲಿ ಎಷ್ಟೇ ಮಾತಾಡಿದರೂ, ಮೆಸೇಜ್‌ ಮಾಡಿದರೂ ನೀ ಎದುರಿಗೆ ಸಿಕ್ಕ ಹಾಗಲ್ಲ ನೋಡು. ನನ್ನ ಬದುಕು, ನನ್ನ ಉಸಿರು, ನನ್ನ ಭವಿಷ್ಯ, ನನ್ನ ಸಂತೋಷವೇ ನೀನಾಗಿರುವಾಗ ನಿನ್ನ ನೆನಪುಗಳಲ್ಲಿಯೇ ದಿನ ಕಳೆಯುವುದು ಹೇಗೆ? ಕಣ್ಣಂಚಿಂದ ಕೆನ್ನೆಯ ಮೇಲೆ ಜಾರುವ ಕಣ್ಣೀರನ್ನು ಕೇಳು, ನನ್ನ ಕಷ್ಟವೇನೆಂದು. ಮುಸ್ಸಂಜೆಯಲಿ ಮೌನವಾಗಿ ಕುಳಿತರೆ, ಬೀಸುವ ತಂಗಾಳಿಯೂ ನಿನ್ನದೇ ಲೋಕಕ್ಕೆ ನನ್ನನ್ನು ಕರೆಯುತ್ತದೆ. ನಿನ್ನ ನೆನಪಿಂದಲೇ ದಿನ ಆರಂಭಿಸುತ್ತವೆ. ಸಿಹಿ ನಿದ್ದೆಯಲ್ಲೂ ಸೊಗಸಾದ ಒಂದು ಕನಸು ನನ್ನೊಳಗೆ ಪ್ರವೇಶಿಸುತ್ತದೆ. ನಿನ್ನೊಂದಿಗೆ ಕಳೆಯಬೇಕಾಗಿರುವ ಸುಂದರ ಕ್ಷಣಗಳನ್ನು ಕಣ್ಮುಂದೆ ತರುತ್ತದೆ.

 ಗಡಿದಾಟಿರುವ ಈ ಪ್ರೀತಿ, ನೆನಪುಗಳ ಕುರಿತು ಬರೆಯಲು ಹೋದರೆ ಸುಂದರ ಕಾವ್ಯ ಸೃಷ್ಟಿಯಾಗಿ ನನ್ನೊಳಗೊಬ್ಬ ಕವಿ ಉದಯಿಸಬಹುದೇನೋ! ಅದೇನೇ ಇರಲಿ, ಆದರೆ ನನಗೀಗ ನೀನು ಬೇಕೇಬೇಕು. ನಿನ್ನನ್ನು ನೋಡಲೇಬೇಕು ಅಷ್ಟೇ! ಈ ಶನಿವಾರದ ಸೂರ್ಯ ಮರೆಯಾಗುವ ಮುನ್ನ ನಿನ್ನ ಕೈ ನನ್ನ ಹೆಗಲಮೇಲಿರಲಿ.. 

ಇಂತಿ ,
ನಿನ್ನ ಮುದ್ದು ಗೊಂಬೆ.
ಜಯಶ್ರೀ ಎಸ್‌ ಕಾನಸೂರ್‌    

ಟಾಪ್ ನ್ಯೂಸ್

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.