ನಿಯಮ ಪಾಲಿಸಬೇಕು:ಹೈಕೋರ್ಟ್ ಸುತ್ತೋಲೆ
Team Udayavani, Oct 2, 2018, 6:15 AM IST
ಬೆಂಗಳೂರು: ರಾಜ್ಯದ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ವರ್ಗಾವಣೆ ಕುರಿತಂತೆ ನೇರವಾಗಿ ರಿಜಿಸ್ಟ್ರಾರ್ ಜನರಲ್ ಅವರ ಬದಲಿಗೆ ಸಂಬಂಧಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮೂಲಕ ಮನವಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.
ಸಾಮಾನ್ಯ ವರ್ಗಾವಣೆ ಮುಗಿದ ಬಳಿಕವೂ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ನೇರವಾಗಿ ರಿಜಿಸ್ಟ್ರಾರ್ ಜನರಲ್ಗೆ ಮನವಿ ಸಲ್ಲಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ, ಹೀಗಾಗಿ ಸುತ್ತೋಲೆ ಹೊರಡಿಸಲಾಗುತ್ತಿದೆ ಎಂದು ರಿಜಿಸ್ಟ್ರಾರ್ ಜನರಲ್ ಅಶೋಕ್ ನಿಜಗಣ್ಣವರ್ ತಿಳಿಸಿದ್ದಾರೆ.
ಹೈಕೋರ್ಟ್ನ ಪೂರ್ಣ ಪೀಠ ಅನುಮೋದಿಸಿದ ವರ್ಗಾವಣೆ ನೀತಿ ಅನ್ವಯ ಪ್ರತಿವರ್ಷ ಸಾಮಾನ್ಯ ವರ್ಗಾವಣೆಗಳನ್ನು ಮತ್ತು ಇತರೆ ವರ್ಗಾವಣೆಗಳನ್ನು ಮಾಡಲಾಗುತ್ತಿದೆ. ಆ ಪ್ರಕಾರ ನ್ಯಾಯಾಂಗ ಅಧಿಕಾರಿಗಳು ತಮ್ಮ ವರ್ಗಾವಣೆ ಬಗ್ಗೆ ಏನೇ ಮನವಿ ಅಥವಾ ಆಕ್ಷೇಪ ಇದ್ದರೂ ಅವರು ಆಯಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಸಲ್ಲಿಸಬೇಕು. ಅದನ್ನು ಅವರು ಸಂಬಂಧಿಸಿದ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯ ಮುಂದೆ ಮಂಡಿಸುತ್ತಾರೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.