ಕರಾವಳಿ: ವಿವಿಧೆಡೆ ಉತ್ತಮ ಮಳೆ
Team Udayavani, Oct 2, 2018, 9:55 AM IST
ಮಂಗಳೂರು: ಕರಾವಳಿಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾದರೆ ಉಡುಪಿಯ ಕೆಲವೆಡೆ ಬೂದಿ ಮಳೆಯಾಗಿದೆ. ಕಾಸರಗೋಡಿನ ಏತಡ್ಕದ ಸಮೀಪ ವಿದ್ಯುತ್ ತಂತಿ ಕಡಿದು ತಾಯಿ-ಮಗಳ ಮೇಲೆ ಬಿದ್ದಿದ್ದು, ಮಗಳು ಮೃತಪಟ್ಟಿದ್ದಾಳೆ.
ಮಂಗಳೂರು ನಗರದಲ್ಲಿ ಸಂಜೆ
ವೇಳೆ ಮಳೆಯಾಗಿದ್ದು, ಉಳಿದ ಸಮಯದಲ್ಲಿ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಮಚ್ಚಿನ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಪುತ್ತೂರು, ಉಪ್ಪಿ ನಂಗಡಿ, ವಿಟ್ಲ, ಬಂಟ್ವಾಳ, ಮೂಡಬಿದಿರೆ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಮುನ್ನೆಚ್ಚರಿಕೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಕೇರಳ, ಕರ್ನಾಟಕದಲ್ಲಿ ಅ. 4ರಿಂದ 9ರ ನಡುವೆ ಕಡಲು ಪ್ರಕ್ಷುಬ್ಧವಾಗಿರಲಿದ್ದು, ಮೀನುಗಾರರು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಆಲಿಕಲ್ಲು ಮಳೆ
ಕುಂದಾಪುರ ತಾಲೂಕಿನೆಲ್ಲೆಡೆ ಸೋಮವಾರ ಸಂಜೆ ವೇಳೆಗೆ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಗೋಳಿಯಂಗಡಿ ಭಾಗದಲ್ಲಿ ಸಂಜೆ 4ರ ಸುಮಾರಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕುಂದಾಪುರ, ತೆಕ್ಕಟ್ಟೆ, ಕೋಟೇಶ್ವರ, ಬಿದ್ಕಲ್‌ಕಟ್ಟೆ, ಸಿದ್ದಾಪುರ, ಶಂಕರ ನಾರಾಯಣ, ಹೆಮ್ಮಾಡಿ, ಬೈಂದೂರು, ಕಮಲಶಿಲೆ, ಕೊಲ್ಲೂರು, ವಂಡ್ಸೆ, ಹೊಸಂಗಡಿ, ಹಾಲಾಡಿ, ಪಡುಬಿದ್ರಿಯಲ್ಲಿ ಗುಡುಗು, ಸಹಿತ ಉತ್ತಮ ಮಳೆ ಯಾ ಗಿದೆ. ಸಮುದ್ರ ತೀರದಲ್ಲಿ ಗಾಳಿಯ ಅಬ್ಬರವೂ ಹೆಚ್ಚಾಗಿದೆ.
ಉಡುಪಿ ಪರಿಸರದಲ್ಲಿ ಮತ್ತೆ ಬೂದಿ ಮಳೆ?
ಉಡುಪಿ: ಸೋಮವಾರ ಸಂಜೆ ವೇಳೆ ಉಡುಪಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಮಣಿಪಾಲ, ಬ್ರಹ್ಮಾವರ, ಕೋಟದಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದ್ದು, ಪರ್ಕಳ ಸಹಿತ ಉಡುಪಿಯ ಕೆಲವೆಡೆ ಬೂದಿ ಮಳೆಯಾಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಸ್ಥಳೀಯರು ದ್ವಿಚಕ್ರ ವಾಹನಗಳನ್ನು ಪರಿಶೀಲಿಸಿದಾಗ ಕೆಲವು ವಾಹನಗಳ ಕನ್ನಡಿಗಳಲ್ಲಿ ಧೂಳಿನ ಅಂಶ ಪತ್ತೆಯಾಗಿವೆ. ಆದರೆ ಇದು ಮಳೆಯಿಂದಲೇ ಆಗಿರುವುದೇ ಎನ್ನುವುದು ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.