ಕೋಡಿ: ಸಮುದ್ರಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ
Team Udayavani, Oct 2, 2018, 10:47 AM IST
ಕುಂದಾಪುರ : ಕೋಡಿ ಬೀಚಿನಲ್ಲಿ ರವಿವಾರ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ತಂದೆಗೆ ಸಹಕರಿಸುತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ, ಸಮುದ್ರಪಾಲಾಗಿದ್ದ ವಿದ್ಯಾರ್ಥಿ ಮನೋಜ್ ಪೂಜಾರಿ (18) ಮೃತದೇಹ ಕೋಡಿ – ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ನಿರಂತರ ಹುಡುಕಾಟ
ಸೆ. 30ರ ಬೆಳಗ್ಗೆ 11.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯ ಲೈಫ್ಗಾರ್ಡ್, ಪೊಲೀಸರು, ಸ್ಥಳೀಯ ನಾಗರಿಕರು ಮನೋಜ್ ಹುಡುಕಾಟದಲ್ಲಿ ತೊಡಗಿದ್ದರು. ದೋಣಿ, ಬೋಟ್ ಮಾತ್ರವಲ್ಲದೆ, ಕೈರಂಪಣಿ ಬಲೆ ಬಳಸಿ ನೂರಕ್ಕೂ ಹೆಚ್ಚು ಮೀನುಗಾರರು ಕಡಲಿಗಿಳಿದು ಸಂಜೆಯವರೆಗೂ ಹುಡುಕಿದ್ದರು. ಸೋಮವಾರ ಬೆಳಗ್ಗಿನಿಂದಲೂ ಹುಡುಕಾಟ ನಡೆಸಿದ್ದರು.
ಕೋಡಿಗೆ ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ, ಸಿಬಂದಿ ಭೇಟಿ ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.