ಜಾಗೃತಿ ನಡಿಗೆಯಲ್ಲಿ ಹೆಜ್ಜೆ ಹಾಕ್ತಾರೆ ದರ್ಶನ್
Team Udayavani, Oct 2, 2018, 12:41 PM IST
ಆನೇಕಲ್: ವನ್ಯಜೀವಿ ಸಪ್ತಾಹದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಮಂಗಳವಾರ (ಅ.2) ವಿಧಾನಸೌಧದಿಂದ ಲಾಲ್‌ಬಾಗ್‌ವರೆಗೆ ಆಯೋಜಿಸಿರುವ “ನಮ್ಮ ನಡಿಗೆ ವನ್ಯಜೀಗಳ ಸಂರಕ್ಷಣೆ ಕಡೆಗೆ’ ಜಾಗೃತಿ ಜಾಥಾದಲ್ಲಿ ನಟ ದರ್ಶನ್ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.
ವಾರದ ಹಿಂದೆ ಮೈಸೂರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದರ್ಶನ್ ಗಾಯಗೊಂಡಿದ್ದರು. ಕಾರಣ, ಜಾಗೃತಿ ಜಾಥಾಗೆ ಚಾಲನೆ ನೀಡಲು ಅವರು ಬರುವುದಿಲ್ಲ ಎಂಬ ವದಂತಿ ಹಬ್ಬಿತ್ತು. ಆದರೆ ಈ ವದಂತಿಗೆ ಉತ್ತರವೆಂಬಂತೆ ಎರಡು ಆಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹರಿಬಿಟ್ಟಿದ್ದಾರೆ. ಈ ಆಡಿಯೋ ಕ್ಲಿಪ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿವೆ.
ಆಡಿಯೋ ಕ್ಲಿಪ್‌ನಲ್ಲಿ ಏನಿದೆ?
ಆಡಿಯೋ 1: “ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ದರ್ಶನ್ ಮಾತಾಡ್ತಾ ಇದ್ದೀನಿ. ಸಂಪತ್ಭರಿತ ಕಾಡನ್ನ ನಾವೆಲ್ಲಾ ನಾಶ ಮಾಡ್ತಾ ಇದ್ದೇವೆ. ಈ ಮೂಲಕ ವನ್ಯ ಪ್ರಾಣಿಗಳ ಆಶ್ರಯ, ಆಹಾರವನ್ನ ನಾವೇ ಕಿತ್ತುಕೊಳ್ತಾ ಇದ್ದೇವೆ. ಅವುಗಳು ವಾಸಿಸುವ ಸ್ಥಳವನ್ನು ನಾವು ಆತಿಕ್ರಮಣ ಮಾಡುತ್ತಿದ್ದೇವೆ. ಹೀಗೆ ಮಾಡಿದರೆ ವನ್ಯ ಪ್ರಾಣಿಗಳು ಎಲ್ಲಿಗೆ ಹೋಗಬೇಕು? ಅವುಗಳ ಬದುಕು ಏನಾಗಬೇಕು? ಅವು (ಪ್ರಾಣಿಗಳು) ಕೂಡ ನಮ್ಮಂತೇ ಅಲ್ಲವೇ? ದಯವಿಟ್ಟು ಅವುಗಳಿಗೂ ಬದುಕಲು ಬಿಡಿ’ ಎಂದು ಚಾಲೆಂಜಿಂಗ್ ಸ್ಟಾರ್ ಕೋರಿದ್ದಾರೆ.
ಆಡಿಯೋ 2: “ವನ್ಯ ಸಂಪತ್ತು ನಮ್ಮ ರಾಜ್ಯಕ್ಕೆ ಆಭರಣವಿದ್ದಂತೆ. ಈ ಅಮೂಲ್ಯ ವನ್ಯ ಸಂಪತ್ತು, ವನ್ಯ ಪ್ರಾಣಿಗಳ ರಕ್ಷಣೆ ಉದ್ದೇಶದಿಂದ ಅಕ್ಟೋಬರ್ 2ರ ಮಂಗಳವಾರ ಬೆಳಗ್ಗೆ 7.30ಕ್ಕೆ ಕಬ್ಬನ್ ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗೆ ಅರಣ್ಯ ಇಲಾಖೆ 64ನೇ ವನ್ಯಜೀವ ಸಪ್ತಾಹ ಆಯೋಜಿಸಿದೆ. ಈ ಸಪ್ತಾಹದ ಪ್ರಯುಕ್ತ ವನ್ಯಜೀವಿ ಸಂರಕ್ಷಣಾ ಜಾಗೃತಿ ನಡಿಗೆ ಕೂಡ ನಡೆಯುತ್ತಿದೆ. ಈ ನಡಿಗೆಯಲ್ಲಿ ನೀವೂ ನಮ್ಮೊಂದಿಗೆ ಪಾಲ್ಗೊಳ್ಳಿ’ ಎಂದು ರಣ್ಯ ಇಲಾಖೆ ರಾಯಭಾರಿಯೂ ಆಗಿರುವ ದರ್ಶನ್ ಕರೆ ನೀಡಿದ್ದಾರೆ.
ದರ್ಶನ್ ಬರುವುದು ಖಚಿತ?: ಜಾಗೃತಿ ನಡಿಗೆಯಲ್ಲಿ ದರ್ಶನ್ ಭಾಗವಹಿಸುವುದು ಬಹುತೇಕ ಖಚಿತವಾಗಿದೆ ಎಂದು ಅರಣ್ಯ ಇಲಾಖೆಯ ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗೋಕುಲ್ “ಉದಯವಾಣಿ’ಗೆ ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಹೋಗಿರುವ ದರ್ಶನ್, ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ.
ಸಪ್ತಾಹದ ಅಂಗವಾಗಿ ಈಗಾಗಲೆ ಅರಣ್ಯ ಸಚಿವರು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ದರ್ಶನ್ ಸಹ ವಿಡಿಯೋ ಸಂದೇಶ ಕಳುಹಿಸಿ ಜಾಗೃತಿ ಮೂಡಿಸಬೇಕಿತ್ತು ಆದರೆ ಅದು ಸಾಧ್ಯವಾಗದ ಕಾರಣ, ಆಡಿಯೋ ಸಂದೇಶ ಕಳುಹಿಸಿ ಕಾಳಜಿ ಮೆರೆದಿದ್ದಾರೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.