ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕಿನ 101 ನೇ ವಾರ್ಷಿಕ ಮಹಾಸಭೆ


Team Udayavani, Oct 2, 2018, 4:21 PM IST

666.jpg

ಮುಂಬಯಿ: ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಮೋಡೆಲ್‌ ಬ್ಯಾಂಕ್‌ ಸೇವೆ ಅನುಪಮವಾಗಿದೆ. 102 ವರ್ಷಗಳ ನಿರಂತರ ಸೇವೆಯೇ ಮೋಡೆಲ್‌ ಬ್ಯಾಂಕ್‌ನ ನಿಷ್ಠಾವಂತ ಸೇವೆಗೆ ಕೈಗನ್ನಡಿಯಾಗಿದೆ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕಿನ ಸಮೃದ್ಧಿಯಾಗಿದೆ. ಬ್ಯಾಂಕುಗಳು ಬರೇ ಹಣಕಾಸು ವ್ಯವಸ್ಥೆ ನಿವಾ ರಿಸುವ ಉದ್ದೇಶವನ್ನಿರಿಸಿ ಸೇವಾ ನಿರತವಾಗದೆ ಜನಸಾಮಾನ್ಯರಿಗೆ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಹಕಾರಿ ಆದಾಗ ಆರ್ಥಿಕ ಸೇವಾ ಸಂಸ್ಥೆಗಳ ಉದ್ದೇಶ ಫಲಪ್ರದವಾಗುವುದು. ಜಾಗತೀ ಕರಣದ ಈ ಕಾಲದಲ್ಲಿ ಬ್ಯಾಂಕುಗಳಂತಹ ಪಥ ಸಂಸ್ಥೆಗಳು ದಿಟ್ಟತನದಿಂದ ವ್ಯವಹಾರ ನಡೆಸಿ ಮುನ್ನಡೆದಾಗ ಮಾತ್ರ ಬ್ಯಾಂಕುಗಳು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಲ್ಲವು. ಆದ್ದರಿಂದ ಮಧ್ಯಮ ವರ್ಗದ ಜನತೆ ಆರ್ಥಿಕ ಸಹಾಯದತ್ತ ಹೆಚ್ಚಿನ ಬ್ಯಾಂಕುಗಳು ಮಹತ್ವ ನೀಡುವುದು ಅತ್ಯವಶ್ಯವಾಗಿದೆ  ಎಂದು ಮಂಗ ಳೂರು ರೋಮನ್‌ ಕ್ಯಾಥೋಲಿಕ್‌ ಧರ್ಮ ಪ್ರಾಂತ್ಯದ ಬಿಷಪ್‌ ಅ| ವಂ| ಡಾ| ಪೀಟರ್‌ ಪಾವ್‌É ಸಲ್ದಾನ್ಹಾ ಕರೆ ನೀಡಿದರು.

ಸೆ. 29 ರಂದು ಸಂಜೆ ಮಾಹಿಮ್‌ ಪಶ್ಚಿಮದ ಸೈಂಟ್‌ ಕ್ಸೇವಿಯರ್ ಎಂಜಿನೀಯರಿಂಗ್‌ ಕಾಲೇಜು ಸಭಾಗೃಹದಲ್ಲಿ ಕರ್ನಾಟಕ ಕರಾವ ಳಿಯ ಕ್ರೈಸ್ತ ಸಮುದಾಯದ ಧುರೀಣರು ಸ್ಥಾಪಿತ ದಿ. ಮೆಂಗ್ಳೂರಿಯನ್‌ ಕಥೋಲಿಕ್‌ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ನಿಯ ಮಿತ ಪಥಸಂಸ್ಥೆ  ಸದ್ಯ ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ನ 101 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.

ಮೋಡೆಲ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲಿé. ಡಿ’ಸೋಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಗತ ಸಾಲಿನಲ್ಲಿ ಸುಮಾರು 919.94 ಕೋ. ರೂ. ಗಳ ಭದ್ರತಾ ಠೇವಣಿಯನ್ನು ಬ್ಯಾಂಕ್‌ ಹೊಂದಿದ್ದು. 510.82 ಕೋ. ರೂ. ಮುಂಗಡ ಠೇವಣಿ, 92.71 ಕೋ. ರೂ.  ಸಾಂದ್ರ ಆದಾಯ ಹಾಗೂ ಸುಮಾರು 12.39 ಕೋ. ರೂ. ನಿವ್ವಳ ಲಾಭದೊಂದಿಗೆ ಸುಮಾರು 8.55 ಕೋ. ರೂ. ನೆಟ್‌ ಪ್ರಾಫಿಟ್‌ ಪಿಎಟಿಯನ್ನು ಹೊಂದಿದೆ ಎಂದು ನುಡಿದು, ಶೇರುದಾರರಿಗೆ ವಾರ್ಷಿಕ ಶೇ. 9ರಷ್ಟು ಡಿವಿಡೆಂಡ್‌ ಘೋಷಿಸಿದರು.

ಬಿಷಪ್‌ ಪೀಟರ್‌ ಸಲ್ದಾನ್ಹಾ ಮತ್ತು ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿ’ಸಿಲ್ವಾ, ರಾಯನ್‌ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೋ ಅವರಿಗೆ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಸ್ಮರಣಿಕೆ, ಪುಷ್ಪಗುತ್ಛವನ್ನು  ಪ್ರದಾನಿಸಿ ಗೌರವಿಸಿದರು. ಮಹಾಸಭೆಯ ಆದಿಯಲ್ಲಿ ಬಿಷಪ್‌ ಸಲ್ದಾನ್ಹಾ  ಬ್ಯಾಂಕ್‌ನ ವಾರ್ಷಿಕ ಅಭಿವಂದನಾ ದಿವ್ಯಪೂಜೆ ನೆರವೇರಿಸಿ ಆಶೀರ್ವದಿಸಿದರು.

ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಮಾಜಿ ಉಪಕಾರ್ಯಾಧ್ಯಕ್ಷ, ನಿರ್ದೇಶಕರಾದ ವಿನ್ಸೆಂಟ್‌ ಮಥಾಯಸ್‌ ಪೌಲ್‌ ನಝರೆತ್‌, ಸಂಜಯ್‌ ಶಿಂಧೆ, ಬೆನೆ ಡಿಕ್ಟಾ ರೆಬೆಲ್ಲೋ, ಮರಿಟಾ ಡಿ’ಮೆಲ್ಲೋ, ಥೋಮಸ್‌ ಡಿ.ಲೊಬೋ, ಜೆರಾಲ್ಡ್‌ ಕಾರ್ಡೊàಜಾ, ನ್ಯಾಯವಾದಿ ಪಿಯುಸ್‌ ವಾಸ್‌, ಆ್ಯನ್ಸಿ ಡಿ’ಸೋಜಾ, ಜೋರ್ಜ್‌ ಕಾಸ್ತೆಲಿನೋ, ರೋನಾಲ್ಡ್‌ ಎಚ್‌. ಮೆಂಡೋನ್ಸಾ, ಬ್ಯಾಂಕ್‌ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್‌.ಡಿ’ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕರಾದ ಜೋನ್‌ ಡಿ’ಸಿಲ್ವಾ ಮತ್ತು ವಿನ್ಸೆಂಟ್‌ ಮಥಾಯಸ್‌ ಸಂದಭೋìಚಿತವಾಗಿ ಮಾತನಾಡಿ ಬ್ಯಾಂಕಿನ ಕಾರ್ಯವೈಖರಿ, ಆಧುನಿಕ ಸೇವೆಗಳನ್ನು ತಿಳಿಸಿ ಅವುಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಸಭೆಯಲ್ಲಿ ಬ್ಯಾಂಕ್‌ನ ಶೇರುದಾರರು, ಹಿತೈಷಿಗಳು, ಹೆಚ್ಚುವರಿ ಪ್ರಧಾನ ಪ್ರಬಂಧ‌ಕ ಹರೋಲ್ಡ್‌ ಎಂ.ಸೆರಾವೋ, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಶೇರುದಾರರ ಪರವಾಗಿ ಕೆಲವು ಸದಸ್ಯರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ದರು. ಬ್ಯಾಂಕ್‌ನ ಸಿಇಒ ವಿಲಿಯಂ ಡಿ’ಸೋಜಾ ಸೂಚನಾ ಪತ್ರಗಳನ್ನು ಹಾಗೂ ಸಭಾ ಕಲಾಪ ಗಳನ್ನು ಭಿತ್ತರಿಸಿದರು. ಗತ ಸಾಲಿನಲ್ಲಿ ಅಗಲಿದ ಬ್ಯಾಂಕ್‌ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು ರಾಷ್ಟ್ರದ-ಗಣ್ಯರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಕೋರ ಲಾಯಿತು. ಎಡ್ವರ್ಡ್‌ ರಾಸ್ಕಿನ್ಹಾ ಸಭಾ ಕಲಾಪ ನಿರ್ವಹಿಸಿದರು. ವಿಲಿಯಂ ಸಿಕ್ವೇರಾ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.