ಹಿರಣ್ಯಕಶಿಪು ಘೋರ ತಪಸ್ಸು; ಬ್ರಹ್ಮನಿಂದ ಸಾವಿಲ್ಲದಂತೆ ವರದಾನ!


Team Udayavani, Oct 2, 2018, 6:12 PM IST

jaya-vijaya.jpg

ದಿತಿ – ಕಾಶ್ಯಪರ ಪುತ್ರರು ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪು [ಜಯ – ವಿಜಯ] ಇವರು ಬಹಳ ವೀರರೂ ಶಕ್ತಿಶಾಲಿಗಳು ಆಗಿದ್ದರು, ಆದರೆ ಭೂಮಿಯನ್ನು ಅಪಹರಿಸಲು ಮುಂದಾದ ಹಿರಣ್ಯಾಕ್ಷನು ವರಾಹರೂಪಿ ಶ್ರೀಹರಿಯಿಂದ ಹತನಾದ ನಂತರ ಶೋಕತಪ್ತರಾದ ತನ್ನ ತಾಯಿ ಮತ್ತು ಕುಟುಂಬದವರನ್ನು ಕಂಡ ಹಿರಣ್ಯ ಕಶಿಪು ಕೋಪದಿಂದ ನಡುಗುತ್ತ ಉಗ್ರವಾದ ದೃಷ್ಟಿಯಿಂದ ತುಂಬಿದ ಸಭೆಯಲ್ಲಿ ತ್ರಿಶೂಲವನ್ನೆತ್ತಿ ದ್ವಿಮೂರ್ಧಾ, ತ್ರ್ಯಕ್ಷ, ಶಂಬರ , ಶತಬಾಹು ,ಹಯಗ್ರೀವ, ನಮೂಚಿ, ಪಾಕ ,ಇಲ್ವಲ, ವಿಪ್ರಚಿತ್ತಿ ,ಪುಲೋಮ ಮತ್ತು ಶಕುನ ಮೊದಲಾದವರನ್ನು ಕುರಿತು “ಎಲೈ ದಾನವರೇ , ಕ್ಷುದ್ರರಾದ ನನ್ನ ಶತ್ರುಗಳು ನನ್ನ ಪ್ರೀತಿಯ, ಹಿತೈಷಿಯೂ ಆದ ತಮ್ಮನನ್ನು ವಿಷ್ಣುವಿನಿಂದ ಕೊಲ್ಲಿಸಿರುವುದು ನಿಮಗೆಲ್ಲಾ ತಿಳಿದೇ ಇದೆ.

ಆ ವಿಷ್ಣುವು ಮೊದಲು ತುಂಬಾ ಶುದ್ಧನೂ, ಪಕ್ಷಪಾತರಹಿತನೂ ಆಗಿದ್ದನು ಆದರೆ ಈಗ ಮಾಯಾರೂಪಗಳನ್ನು ಧರಿಸುತ್ತಾ ತನ್ನ ಸ್ವಭಾವದಿಂದ ಚ್ಯುತನಾಗಿ ತನ್ನ ಸೇವೆ ಮಾಡಿದವರ ಕಡೆಗೆ ಹೋಗುತ್ತಿದ್ದಾನೆ. ಅವನನ್ನು ನನ್ನ ಈ ಶೂಲದಿಂದ ಕತ್ತರಿಸಿ ಅವನ ರಕ್ತ ಧಾರೆಯಿಂದ ರುಧಿರ ಪ್ರೇಮಿಯಾದ ನನ್ನ  ತಮ್ಮನಿಗೆ ತರ್ಪಣವನ್ನು ಕೊಡುವೆನು. ಹಾಗೆ ಮಾಡಿದರೆ ಮಾತ್ರ ನನ್ನ ಹೃದಯದ ವ್ಯಥೆಯೂ ಶಾಂತವಾಗಿ ನನ್ನ ತಮ್ಮನಿಗೆ ಆತ್ಮ ಶಾಂತಿ ಉಂಟಾದೀತು .

ಅದಕ್ಕಾಗಿ  ನೀವೆಲ್ಲರೂ ಈಗಲೇ ಭೂಮಿಗೆ ಹೋಗಿ ತಪಸ್ಸು ಯಜ್ಞ ವ್ರತ ದಾನಾದಿ ಶುಭಕರ್ಮಗಳನ್ನು ಮಾಡುವ ಜನರೆಲ್ಲರನ್ನು ಕೊಂದು ಹಾಕಿ. ಈ ಧರ್ಮ ಕರ್ಮಗಳೇ ವಿಷ್ಣುವಿನ ಮೂಲವಾಗಿದೆ . ದೇವತೆಗಳು ಋಷಿಗಳು ಪಿತೃಗಳು ಸಮಸ್ತ ಪ್ರಾಣಿಗಳು ಮತ್ತು ಧರ್ಮ ಇವುಗಳಿಗೆಲ್ಲ ವಿಷ್ಣುವೇ ಪರಮಾಶ್ರವ್ಯನಾಗಿದ್ದಾನೆ. ಆದ್ದರಿಂದ ಬ್ರಾಹ್ಮಣರು, ಸಜ್ಜನರು, ಗೋವುಗಳು, ವೇದ ಮತ್ತು ಧರ್ಮ ಕರ್ಮಗಳನ್ನು ನಾಶಮಾಡಿರೆಂದು ಆಜ್ಞಾಪಿಸಿದನು.

ಹಿರಣ್ಯಕಶಿಪುವಿನ ಆಜ್ಞೆಯಂತೆ ದಾನವರೆಲ್ಲರೂ ಭೂಮಿಗೆ ಹೋಗಿ ಸಜ್ಜನಾದಿಗಳನ್ನು ನಾಶಪಡಿಸ ತೊಡಗಿದರು. ತಮ್ಮನ ಅಂತ್ಯೇಷ್ಟಿ ಕರ್ಮದ ಬಳಿಕ ಹಿರಣ್ಯಕಶಿಪು ತಮ್ಮನ ಮಕ್ಕಳಾದ ಶಕುನಿ, ಶಂಬರ, ದೃಷ್ಟ, ಭೂತಸಂತಾಪನ , ವೃಕ , ಕಾಲನಾಭ ,ಮಹಾನಾಭ ,ಹರಿಶ್ಮ್ಯಾಶ್ರು ಮತ್ತು ಉತ್ಕಚ ಎಂಬವರಿಗೆ ಸಾಂತ್ವನವನ್ನು ಹೇಳಿದನು. ತನ್ನ ನಾದಿನಿಯಾದ  ರುಷಭಾನು ಮತ್ತು ತನ್ನ ತಾಯಿಯಾದ ದಿತಿದೇವಿಯನ್ನು ದೇಶಕಾಲಕ್ಕನುಸಾರವಾಗಿ ಮಧುರವಾಣಿಯಿಂದ ಸಂತೈಸಿದನು.

ತದನಂತರ ತಾನು ಮುಪ್ಪು ಸಾವುಗಳಿಲ್ಲದವನಾಗಿ ಅಜೇಯನಾಗಿ ಏಕಚ್ಛತ್ರಾಧಿಪತಿಯಾಗಬೇಕೆಂಬ ಬಯಕೆಯಿಂದ ಮಂದರ ಪರ್ವತದ ತಪ್ಪಲಿಗೆ ಹೋಗಿ, ಅತ್ಯಂತ ದಾರುಣವಾದ ತಪಸ್ಸನ್ನು ಆಚರಿಸತೊಡಗಿದನು. ತನ್ನ ಕೈಗಳನ್ನು ಮೇಲೆತ್ತಿಕೊಂಡು ಕಾಲಿನ ಹೆಬ್ಬೆರಳಿನ ಬಲದಿಂದ ನಿಂತು ಆಕಾಶದ ಕಡೆಗೆ ನೋಡುತ್ತಾ ಬಹಳಷ್ಟು ಕಾಲ ತಪಸ್ಸನಾಚರಿಸಲು ಹಿರಣ್ಯ ಕಷಿಪುವಿನ ತಲೆಯೊಂದಿನ ಹೊಗೆಯಿಂದ ತಪೋಜ್ವಾಲೆಯು ಹೊರಟು ಎಲ್ಲ ಕಡೆಗಳಲ್ಲಿಯೂ ಪಸರಿಸಿ ಭೂರಾದಿ ಚತುರ್ದಶ ಲೋಕಗಳನ್ನು ಸುಡಲು ತೊಡಗಿತು. ಅದರ ಜ್ವಾಲೆಯಿಂದ ನದಿಗಳು , ಸಮುದ್ರಗಳು ಕುದಿಯತೊಡಗಿದವು.  ದ್ವೀಪ ಮತ್ತು ಪರ್ವತಗಳಿಂದ ಕೂಡಿದ ಭೂಮಿಯು ನಡುಗ ತೊಡಗಿತು. ಗ್ರಹನಕ್ಷತ್ರಗಳು ಉರುಳಿಬಿದ್ದು ದಶದಿಕ್ಕುಗಳು ಉರಿಯತೊಡಗಿದವು.

ಇದರಿಂದ ಗಾಬರಿಗೊಂಡ ದೇವತೆಗಳು ಸ್ವರ್ಗದಿಂದ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮದೇವರಲ್ಲಿ ತಮಗೆ ಬಂದ ಸಂಕಷ್ಟವನ್ನು ನಿವೇದಿಸಿ ಪರಿಹಾರಕ್ಕಾಗಿ ಪ್ರಾರ್ಥಿಸುತ್ತಾ, ಹಿರಣ್ಯಕಶಿಪು ಬ್ರಹ್ಮ ಪದವಿಯ ಪ್ರಾಪ್ತಿ ಹಾಗೂ ಪಾಪ-ಪುಣ್ಯಗಳ ನಿಯಮಗಳನ್ನು ಬದಲಾವಣೆ ಮಾಡುವುದೇ ಮೊದಲಾದ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನಾಚರಿಸುವ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸಿದರು.

ನಂತರ ಬ್ರಹ್ಮದೇವರು ಭೃಗು ,ದಕ್ಷ ಮುಂತಾದವರನ್ನು ಕೂಡಿಕೊಂಡು ಹಿರಣ್ಯಕಶಿಪುವಿನ ತಪೋಭೂಮಿಗೆ ಹೋದರು. ಅಲ್ಲಿ ಹುತ್ತದಿಂದ ಮತ್ತು ಹುಲ್ಲು ಬಿದಿರುಗಳಿಂದ ಹಿರಣ್ಯಕಶಿಪುವಿನ ದೇಹವು ಮುಚ್ಚಿಹೋಗಿತ್ತು. ಅವನ ದೇಹದ  ಚರ್ಮ ,ಮೇಧಸ್ಸು, ಮಾಂಸ ,ರಕ್ತ ಇವೆಲ್ಲವನ್ನೂ ಇರುವೆಗಳು ಹಾಗು ಹುಳಗಳು ತಿಂದುಬಿಟ್ಟಿದ್ದವು. ಮೋಡಗಳಿಂದ ಮುಚ್ಚಲ್ಪಟ್ಟ ಸೂರ್ಯನಂತಿರುವ ಕಶ್ಯಪ ಸಂಭೂತನು ತನ್ನ ತಪೋ ತೇಜದಿಂದ ಲೋಕಗಳನ್ನು ಸುಡುತ್ತಿದ್ದನು. ಅವನನ್ನು ನೋಡಿ ಬ್ರಹ್ಮ ದೇವರು ಕೂಡ ಒಂದು ಕ್ಷಣ ಮೂಕವಿಸ್ಮಿತರಾಗಿ ನಗುತ್ತಾ, ” ವತ್ಸ ಏಳು; ಎದ್ದೇಳು! ನಿನಗೆ ಮಂಗಳವಾಗಲಿ… ನಿನ್ನ ತಪಸ್ಸು ಸಿದ್ಧಿಸಿತು. ನಿನಗೆ ವರವನ್ನು ಕೊಡಲು ನಾನೇ ಬಂದಿರುವೆನು.

ಅಯ್ಯಾ… ಹುಳ-ಹುಪ್ಪಟೆಗಳು ನಿನ್ನ ದೇಹವನ್ನು ತಿಂದಿದ್ದರು ನಿನ್ನ ಪ್ರಾಣಗಳು ಅಸ್ಥಿಗತವಾಗಿ ಉಳಿದಿದೆ. ಇಂತಹ ಕಠಿಣವಾದ ತಪಸ್ಸನ್ನು ಈ ಹಿಂದೆ ಯಾರು ಮಾಡಿಲ್ಲ ಮುಂದೆ ಯಾರೂ ಮಾಡಲಾರರು. ದೇವತೆಗಳ ದಿವ್ಯವಾದ ನೂರು ವರ್ಷಗಳ ವರೆಗೆ ಪವನಾಶನಾಗಿ ಯಾರು ತಾನೆ ಇರಬಲ್ಲರು. ಇಂತಹ ಕಾರ್ಯವನ್ನು ಧೀರರು ಮಾತ್ರ ಕಷ್ಟದಿಂದ ಮಾಡಬಲ್ಲರು. ಈ ತಪೋ ನಿಷ್ಠೆಯಿಂದ ನೀನು ನನ್ನನ್ನು ವಶಪಡಿಸಿಕೊಂಡಿರುವೆ. ದೈತ್ಯ ಶಿರೋಮಣಿಯೇ  ನಿನಗೆ ಬೇಕಾದ ವರವನ್ನು ಬೇಡಿಕೋ ಎಂದು ತನ್ನ ಕಮಂಡಲುವಿನ ಜಲವನ್ನು ಅಭಿಮಂತ್ರಿಸಿ ಅವನಿಗೆ ಪ್ರೋಕ್ಷಿಸಿದನು. ತಕ್ಷಣವೇ ಕಟ್ಟಿಗೆಯ ರಾಶಿಯಿಂದ ಬೆಂಕಿಯು ಉರಿದೇಳುವಂತೆ ಹುತ್ತದ ಮಣ್ಣಿನಿಂದ, ಪರಿಪೂರ್ಣವಾದ, ವಜ್ರದಂತೆ ಕಠೋರವಾದ, ಚಿನ್ನದಂತೆ ಥಳಥಳಿಸುವ ದೇಹವುಳ್ಳ ಹಿರಣ್ಯಕಶಿಪು ಎದ್ದು ನಿಂತನು .

 ತನ್ನ ಮುಂದೆ ಅಂತರಿಕ್ಷದಲ್ಲಿ ಹಂಸವಾಹನರಾಗಿ ಇರುವ ಬ್ರಹ್ಮದೇವರನ್ನು ಕಂಡು ಆನಂದ ಭರಿತರಾಗಿ ತನ್ನ ಶಿರಸ್ಸನ್ನು ಭೂಮಿಯಲ್ಲಿ ಇರಿಸಿ ಶಿರಸಾ ನಮಸ್ಕರಿಸಿದನು. ಮತ್ತೆ ಅಂಜಲೀಭದ್ದನಾಗಿ ವಿನಮ್ರಭಾವದಿಂದ ನಿಂತುಕೊಂಡು ಗದ್ಗದ ವಾಣಿಯಿಂದ ಬ್ರಹ್ಮನನ್ನು ಸ್ತುತಿಸಿದನು. ಪ್ರಭುವೇ ನೀನು ವರಕೊಡುವುದರಲ್ಲಿ ಸರ್ವ ಶ್ರೇಷ್ಠನು. ನೀನು ನನಗೆ ಅಭೀಷ್ಟವಾದ ವರವನ್ನು ಕೊಡುವುದಾದರೆ – ನೀನು ಸೃಷ್ಟಿಸಿರುವ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ದೇವತೆ ದೈತ್ಯ ನಾಗಾದಿಗಳಿಂದಲೂ ನನಗೆ ಮರಣವು ಪ್ರಾಪ್ತವಾಗಬಾರದು. ಒಳಗಾಗಲೀ ಹೊರಗಾಗಲಿ, ಹಗಲು-ರಾತ್ರಿಗಳಲ್ಲಾಗಲಿ , ಯಾವುದೇ ಶಸ್ತ್ರ ಅಸ್ತ್ರಗಳಿಂದಾಗಲಿ , ಭೂಮಿಯಾಕಾಶಾದಿಗಳಲ್ಲಿ ನನಗೆ ಮರಣ ಉಂಟಾಗದಿರಲಿ. ಯುದ್ಧದಲ್ಲಿ ನನಗೆ ಯಾವುದೇ ಎದುರಾಳಿಗಳಿಲ್ಲದೆ ಏಕಚ್ಛತ್ರಾಧಿಪತಿಯಾಗಿ ಮೆರೆಯುವಂತೆ ವರವನ್ನು ಕರುಣಿಸು ಎಂದು ಬ್ರಹ್ಮದೇವನಲ್ಲಿ ಬೇಡಿದನು.

ಹಿರಣ್ಯಕಶಿಪು ಈ ಪ್ರಕಾರ ದುರ್ಲಭವಾದ ವಾರಗಳನ್ನ ಬೇಡಲು ಮಹಾ ಮಹಿಮರಾದ ಬ್ರಹ್ಮ ದೇವರು ಪ್ರಸನ್ನರಾಗಿ ವರಗಳನ್ನು ಕರುಣಿಸಿದರು. ನಂತರ ಬ್ರಹ್ಮದೇವರು “ವತ್ಸ , ನೀನು ಪಡೆದಿರುವ ವರಗಳು ಅತಿ ದುರ್ಲಭವಾದವುಗಳು.  ಈ ವರಗಳು ಎಂದು ಸುಳ್ಳಾಗುವುದಿಲ್ಲ” ಎಂದು ಹೇಳಿ ಬ್ರಹ್ಮದೇವರು ತಮ್ಮ ಲೋಕಕ್ಕೆ ಹೊರಟು ಹೋದರು .

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.