ಕಾಮಗಾರಿ ಮುಗಿದರೂ ಪೂರ್ಣ ಹಲಗೆ ಅಳವಡಿಸದೆ ನಿಷ್ಪ್ರಯೋಜಕ


Team Udayavani, Oct 3, 2018, 1:05 AM IST

kindi-2-10.jpg

ಆಜ್ರಿ: ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ಒಂದು ಕೋಟಿ ರೂ.ಗೂ ಮಿಕ್ಕಿದ ಅನುದಾನದಲ್ಲಿ ನಿರ್ಮಾಣಗೊಂಡ, ಬೇಸಿಗೆ ಸಮಯದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಚೋನಮನೆ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡರೂ, ಸಂಪೂರ್ಣ ಹಲಗೆ ಅಳವಡಿಸದ ಕಾರಣ ಕಿಂಡಿ ಅಣೆಕಟ್ಟು ಇದ್ದರೂ ನಿಷ್ಪ್ರಯೋಜಕವಾಗಿದೆ. ಜುಲೈ-ಆಗಸ್ಟ್‌ನಲ್ಲಿ ಅತಿವೃಷ್ಟಿಯಾಗಿದ್ದರೂ ಸೆಪ್ಟಂಬರ್‌ನಲ್ಲಿ ಅನಾವೃಷ್ಟಿಯಿಂದ ನದಿ, ಹೊಳೆ, ಡ್ಯಾಂ, ಹಳ್ಳಗಳಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವ ತಾಜಾ ನಿದರ್ಶನ ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಇಂತಹ ಸಂದರ್ಭ ಕಿಂಡಿ ಅಣೆಕಟ್ಟು, ವೆಂಟೆಂಡ್‌ ಡ್ಯಾಂಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಆಜ್ರಿ ಗ್ರಾಮದಲ್ಲಿರುವ ಚೋನಮನೆ ಶ್ರೀ ಶನೈಶ್ಚರ ದೇವಸ್ಥಾನದ ಸಮೀಪವಿರುವ ನದಿಗೆ ಅಡ್ಡಲಾಗಿ ಸುಮಾರು 1.60 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುವಿನಲ್ಲಿ ಅರ್ಧದವರೆಗೆ ಮಾತ್ರ ಹಲಗೆ ಅಳವಡಿಸಿದ್ದಾರೆ. ಈಗ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದ ಆಜ್ರಿ, ತಗ್ಗುಂಜೆ,ಬೆಳುವಾಣ, ಚೋನಮನೆ, ಗೂಂಜಾಡಿ, ಹೊಸಬಾಳು ಭಾಗದ ಸುಮಾರು 300 ಎಕರೆ ಕೃಷಿ ಭೂಮಿಗೆ ನೀರು ಪೂರೈಕೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎನ್ನುವುದು ಇಲ್ಲಿನ ರೈತರ ಅಭಿಪ್ರಾಯ.


ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿದ್ದರೂ, ನೀರು ಕೆಳಕ್ಕೆ ಸೋರಿಕೆಯಾಗುತ್ತಿರುವುದು.

ಕಿರು ವಿದ್ಯುತ್‌ ಯೋಜನೆ
ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ನೀರು ಸಂಗ್ರಹವಾದರೆ ಈ ಭಾಗದ ಸುತ್ತಮುತ್ತಲಿನ ಹಳ್ಳಿ ಪ್ರದೇಶಕ್ಕೆ ಅನುಕೂಲವಾಗುವಂತೆ ಕಿರು ವಿದ್ಯುತ್‌ ಯೋಜನೆಯನ್ನು ಕೂಡ ಆರಂಭಿಸಬಹುದು. ಈ ಸಂಬಂಧ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೂ ಮನವಿ ಸಲ್ಲಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರಾದ ರಾಜೀವ್‌ ಶೆಟ್ಟಿ.

2 ದಶಕದ ಹೋರಾಟ
ಆಜ್ರಿಯಿಂದ ಚೋನಮನೆ – ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಇಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಿಸಬೇಕು ಎನ್ನುವ ಬೇಡಿಕೆ 2 ದಶಕದ ಹಿಂದಿನದ್ದು. ಶ್ರೀ ಶನೈಶ್ಚರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚೋನಮನೆ ಅಶೋಕ ಶೆಟ್ಟಿ ನೇತೃತ್ವದಲ್ಲಿ ಸೇತುವೆಗಾಗಿ ಹೋರಾಟವು ನಡೆದಿತ್ತು. ಕಳೆದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ, ಹಿಂದಿನ ಶಾಸಕ ಗೋಪಾಲ ಪೂಜಾರಿ ಮುತುವರ್ಜಿಯಲ್ಲಿ 1.60 ಕೋ.ರೂ. ಅನುದಾನ ಮಂಜೂರಾಗಿ, ಈಗ ಕಾಮಗಾರಿಯೂ ಮುಗಿದಿದೆ.

ಇದ್ದ ಹಲಗೆಯಿಂದಲೂ ಸೋರಿಕೆ
ಈಗ ಅರ್ಧದವರೆಗೆ ಹಲಗೆ ಅಳವಡಿಸಲಾಗಿದೆ. ಆದರೆ ಈಗ ಅಳವಡಿಸಿರುವ ಹಲಗೆಯ ಕೆಳಗ್ಗಿನಿಂದ, ಮಧ್ಯದಲ್ಲಿ ಸರಿಯಾಗಿ ಹಲಗೆ ಅಳವಡಿಸದ ಕಾರಣ ಅಲ್ಲಿ ನೀರು ಸೋರಿಕೆಯಾಗಿ, ಕೆಳಗೆ ಹರಿಯುತ್ತಿದೆ.

ಸೋರಿಕೆ ನಿಲ್ಲಿಸಿ
ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಆದರೆ ಈಗ ಈ ಕಿಂಡಿ ಅಣೆಕಟ್ಟು ನಿರ್ಮಾಣವಾದರೂ, ಅಲ್ಲಿಗೆ ಪೂರ್ತಿ ಮೇಲಿನವರೆಗೆ ಹಲಗೆ ಅಳವಡಿಸಿಲ್ಲ. ಅದಲ್ಲದೆ ಈಗ ಅಳವಡಿಸಿರುವ ಹಲಗೆಯ ಅಡಿಯಿಂದ, ಮಧ್ಯದಿಂದ ನೀರು ಕೆಳಕ್ಕೆ ಸೋರಿಕೆಯಾಗುತ್ತಿದೆ. ಇದರಿಂದ ಕಿಂಡಿ ಅಣೆಕಟ್ಟು ನಿರ್ಮಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಈ ಭಾಗದ ಅನೇಕ ರೈತರು ಇದೇ ನೀರನ್ನು ಕೃಷಿಗೆ ಆಶ್ರಯಿಸಿದ್ದಾರೆ.
– ಚೋನಮನೆ ಅಶೋಕ ಶೆಟ್ಟಿ, ಸ್ಥಳೀಯರು

ಹೊಸದಾಗಿ ಹಲಗೆ ಅಳವಡಿಕೆ
ನಾನು ಕಳೆದವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈಗ ಅಳವಡಿಸಿರುವ ಹಲಗೆ ಸರಿಯಾಗದ ಕಾರಣ ಅದನ್ನು ತೆಗೆದು, ಹೊಸದಾಗಿ ಅಳವಡಿಸಲು ಸೂಚಿಸಲಾಗಿದೆ. ನೀರಿನ ಹರಿವು ಹೆಚ್ಚಾಗಿರುವುದರಿಂದ ಈಗ ಪೂರ್ತಿಯಾಗಿ ಅಳವಡಿಸಲು ಸಾಧ್ಯವಾಗುತ್ತಿಲ್ಲ.
– ಸುರೇಂದ್ರ ಎಸ್‌., ಎಇಇ, ಸಣ್ಣ ನೀರಾವರಿ ಇಲಾಖೆ ಉಡುಪಿ 

— ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

4

Kundapur: ಸಿಆರ್‌ಪಿಎಫ್‌ ನಿವೃತ್ತ ಸೈನಿಕ ಕುಸಿದು ಬಿದ್ದು ಸಾವು

Kundapura: ಮದುವೆ ವಾಹನ ಅಡ್ಡಗಟ್ಟಿ ಹಲ್ಲೆ ಆರೋಪಿಗಳು ದೋಷಮುಕ್ತ

Kundapura: ಮದುವೆ ವಾಹನ ಅಡ್ಡಗಟ್ಟಿ ಹಲ್ಲೆ ಆರೋಪಿಗಳು ದೋಷಮುಕ್ತ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

2

Sullia: ಹೋರಿ ಎರಗಿ ವ್ಯಕ್ತಿಗೆ ಗಾಯ

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.