ಮಸೀದಿ-ಮದ್ರಸ ವಕ್ ಅಧೀನಕ್ಕೆ ಸೇರಿಸಿ: ಜಮೀರ್ ಅಹ್ಮದ್
Team Udayavani, Oct 4, 2018, 12:18 PM IST
ಸುಳ್ಯ : ಮಸೀದಿ-ಮದ್ರಸಗಳನ್ನು ವಕ್ಫ್ ಬೋರ್ಡ್ ಅಧೀನದಲ್ಲಿ ನೋಂದಾಯಿಸಿಕೊಂಡಲ್ಲಿ ಸರಕಾರದಿಂದ ಅನುದಾನ ಒದಗಿಸಲು ಸಾಧ್ಯವಿದೆ ಎಂದು ಅಲ್ಪಸಂಖ್ಯಾಕರ ಕಲ್ಯಾಣ, ವಕ್ಫ್ ಮತ್ತು ಹಜ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಜಟ್ಟಿಪಳ್ಳ ಅನ್ಸಾರಿಯಾ ಯತೀಂಖಾನದಲ್ಲಿ ಬುಧವಾರ ನಡೆದ ತಾಲೂಕು ಮಸೀದಿ-ಮದ್ರಸ ಪದಾಧಿಕಾರಿಗಳ ಮತ್ತು ಇಮಾಮರುಗಳ ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಮಸೀದಿ, ಮದ್ರಸಗಳಿಗೆ ಗರಿಷ್ಠ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಪೂರಕವಾಗಿ ಮಸೀದಿ, ಮದ್ರಸ ನೋಂದಾಯಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಣಚೂರು ಮೋನು, ಎಸ್. ಸಂಶುದ್ದಿನ್, ಟಿ.ಎಂ. ಶಹೀದ್, ಕೆ.ಎಂ. ಮುಸ್ತಾಫ, ಇಕ್ಬಾಲ್ ಎಲಿಮಲೆ, ಅನ್ಸಾರಿಯ ಅಧ್ಯಕ್ಷ ಅಬ್ದುಲ್ ಮಜೀದ್, ಆರ್.ಕೆ. ಮಹಮ್ಮದ್, ರಫೀಕ್ ಪಡು, ಸಿದ್ದಿಕ್ ಕೊಕ್ಕೊ, ಶರೀಫ್ ಕಂಠಿ, ಉಮ್ಮರ್ ಮುಸ್ಲಿಯಾರ್ ಮರ್ದಾಳ, ಆದಂ ಕಮ್ಮಡಿ, ಅಬ್ಟಾಸ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು. ಅನ್ಸಾರಿಯಾ ವತಿಯಿಂದ ಸಚಿವರನ್ನು ಸಮ್ಮಾನಿಸಲಾಯಿತು. ಸಭೆಯ ಬಳಿಕ ಅನ್ಸಾರಿಯಾ ಕೇಂದ್ರದ ಮಕ್ಕಳೊಂದಿಗೆ ಬೆರೆತು, ಅವರ ಯೋಗಕ್ಷೇಮ ವಿಚಾರಿಸಿದರು.
ಕಾಮಗಾರಿಗೆ ಶಂಕುಸ್ಥಾಪನೆ
ಸುಳ್ಯ ನಗರದ ಗಾಂಧಿನಗರ ಮಸೀದಿಗೆ ಭೇಟಿ ನೀಡಿ ಅಲ್ಲಿನ ನವೀಕೃತ ಮಸೀದಿ ಕಾಮಗಾರಿ ವೀಕ್ಷಿಸಿದರು. ಬಳಿಕ ಮೊಗರ್ಪಣೆ ದರ್ಗಾ ಶರೀಫ್ ಮುಂಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಪೈಚಾರಿನಲ್ಲಿ ನೂತನ ಮದರಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಅನ್ಸಾರಿಯಾದಲ್ಲಿ ನಡೆದ ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶದಲ್ಲಿ ಪಾಲ್ಗೊಂಡರು. ಸಂಜೆ ವೇಳೆ ನಗರದಲ್ಲಿ ಉತ್ತಮ ಮಳೆಯಾದ ಕಾರಣ ಮೊಗರ್ಪಣೆ ಸಹಿತ ಕೆಲವೆಡೆ ನಿಗದಿಯಾಗಿದ್ದ ಸಭಾ ಕಾರ್ಯಕ್ರಮ ಮೊಟಕುಗೊಂಡಿತ್ತು.
ಭರಪೂರ ಅನುದಾನ ಘೋಷಣೆ
ಮೊಗರ್ಪಣೆ ಮಸೀದಿ ಮುಂಭಾಗದಲ್ಲಿ ನಿರ್ಮಾಣಗೊಳ್ಳುವ ಶಾದಿ ಮಹಲ್‌ಗೆ 1 ಕೋಟಿ ರೂ., ಮೊಗರ್ಪಣೆ ಮದರಸಕ್ಕೆ 10 ಲಕ್ಷ ರೂ., ಅಂಬೆಟಡ್ಕ ಅನಘಿ ಜುಮಾ ಮಸೀದಿಗೆ 5 ಲಕ್ಷ ರೂ., ಮಸೀದಿ ಆಧುನೀಕರಣಕ್ಕೆ 10 ಲಕ್ಷ ರೂ., ಅನ್ಸಾರಿಯ ಯತಿಂಖಾನ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 40 ಲಕ್ಷ ರೂ., ಗಾಂಧಿನಗರ ನವೀಕೃತ ಮಸೀದಿಗೆ 20 ಲಕ್ಷ ರೂ., ಪೈಚಾರು ಮದರಸ ಕಟ್ಟಡಕ್ಕೆ 20 ಲಕ್ಷ ರೂ. ಅನುದಾನ ನೀಡುವುದಾಗಿ ಸಚಿವರು ಘೋಷಿಸಿದರು.
ಕ್ರೀಡಾಪಟುವಿಗೆ ಆರ್ಥಿಕ ನೆರವು
ಅಂಗವಿಕಲರ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಸುಹೈಲ್ ಅವರಿಗೆ ಸಚಿವ ಜಮೀರ್ ಅಹಮ್ಮದ್ ಅವರು 25 ಸಾವಿರ ರೂ. ಆರ್ಥಿಕ ನೆರವು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.