ಸಾಹಿತ್ಯ ಬಳಗ ಮುಂಬಯಿ ರಜತ ಮಹೋತ್ಸವ: “ಸಾಧಕರಿಗೆ ನಮನ’ 


Team Udayavani, Oct 4, 2018, 3:35 PM IST

0210mum12.jpg

ಮುಂಬಯಿ: ಸಾಹಿತ್ಯ ಬಳಗ ಮುಂಬಯಿ ತನ್ನ ರಜತ ಮಹೋತ್ಸವದ ಅಂಗವಾಗಿ “ಸಾಧಕರಿಗೆ ನಮನ’  ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದು, ಇದರ ದ್ವಿತೀಯ ಹಂತದ ಹತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸೆ. 30 ರಂದು  ಸಂಜೆ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

ವಿಜಯ ಸುಬ್ರಹ್ಮಣ್ಯ ಸಂಗ್ರಹದ ಅಪೂರ್ವ ತೌಳವ ಸಂಶೋಧಕಿ “ಡಾ| ಲಕ್ಷ್ಮೀ ಪ್ರಸಾದ್‌’, ಮುದ್ರಾ ವಿಜ್ಞಾನತಜ್ಞೆ, ಸ್ವರ್ಗಿàಯ ಸುಮನ್‌ ಚಿಪ್ಲೂಣ್‌ಕರ್‌   ಅವರ ಪ್ರೇಮಾ ಎಸ್‌. ರಾವ್‌ ಸಂಗ್ರಹದ  “ಮುದ್ರಾ ”ಜ್ಞಾನಿ ಸುಮನ್‌ ಚಿಪ್ಲಣ್‌ಕರ್‌ ರ್‌, ಲೇಖಕಿ ಚಿತ್ರಾ ಮೇಲ್ಮನೆ ರಚಿತ ಲೆಕ್ಕ ಪರಿಶೋಧಕ ಸಿಎ ಸುಬ್ಬರಾವ್‌ ಅವರ  “ಕರ್ತವ್ಯ ನಿಷ್ಠ ಲೆಕ್ಕ ಪರಿಶೋಧಕ-ಸಿಎ  ಸುಬ್ಬರಾವ್‌, ಲೇಖಕಿ ಪ್ರೇಮಾ ಎಸ್‌.ರಾವ್‌ ರಚಿತ ಸ್ವರ್ಗಿàಯ ಮುಚ್ಚಾcರು ನಾರಾಯಣ ಭಟ್‌ ಕುರಿತ  “ಪ್ರಚಾರ ಬಯಸದ ಕಲಾ ಪೋಷಕ ಮುಚ್ಚಾರು ನಾರಾಯಣ ಭಟ್‌’, ಲೇಖಕಿ ಡಾ| ಜಿ. ಪಿ, ಕುಸುಮಾ ರಚಿತ “ನೂರನಲ್ವತ್ತು ವರ್ಷಗಳ ಇತಿಹಾಸವಿರುವ ಶ್ರೀಮದ್ಭಾರತ ಮಂಡಳಿ’, ಲೇಖಕ  ಅಶೋಕ್‌  ಎಸ್‌. ಸುವರ್ಣ ರಚಿತ “ಸೇವಾ ಮನೋಭಾವದ ಮೊಗವೀರ ವ್ಯವಸ್ಥಾಪಕ ಮಂಡಳಿ”  ಹೀಗೆ ಸಾಹಿತ್ಯ ಬಳಗದ ಅಧ್ಯಕ್ಷ ಎಚ್‌. ಬಿ. ಎಲ್‌. ರಾವ್‌ ಸಂಗ್ರಹಣೆಯ ಎಲ್ಲಾ ಆರು ಕೃತಿಗಳನ್ನು ಅನಾವರಣಗೊಳಿಸಲಾಯಿತು.

ಪ್ರಸಿದ್ಧ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್‌ ನಿಂಜೂರ್‌ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೈಗಾರಿಕೋದ್ಯಮಿ ಶ್ರೀನಿವಾಸ್‌ ಕಾಂಚನ್‌ ಮತ್ತು ಸುಮನ್‌ ಟ್ರಸ್ಟ್‌ ಯಾದಗಿರಿ ಇದರ ಅಧ್ಯಕ್ಷ ಡಾ| ಮರಿಯಪ್ಪ ನಾಟೇಕರ್‌ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಶವರಾವ್‌ ಚಿಪೂÉಣRRರ್‌, ಎಂ. ಹರಿ ಭಟ್‌, ಸಿಎ ಸುಬ್ಬರಾವ್‌, ಡಾ| ಲಕ್ಷಿ¾à ಪ್ರಸಾದ್‌, ಜಗನ್ನಾಥ್‌ ಪಿ. ಪುತ್ರನ್‌, ಕೃಷ್ಣಕುಮಾರ ಎಲ್‌. ಬಂಗೇರ ಅವರು ಗ್ರಂಥ ಗೌರವದ ಸಮ್ಮಾನ ಸ್ವೀಕರಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ತನ್ವಿ ರಾವ್‌ ಅವರ ಯಕ್ಷನೃತ್ಯ ಶೆ„ಲಿಯ  ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿತು. ಅನಿತಾ ಆಚಾರ್ಯ ಕಥಕ್‌, ಅನುಪಮಾ ರಾವ್‌ ಮೋಹಿನಿಯಾಟ್ಟಂ, ಪ್ರಿಯಾಂಜಲಿ ರಾವ್‌ ಭರತನಾಟ್ಯ ಹಾಗೂ ವಿದುಷಿ ಸಹನಾ ಭಾರದ್ವಾಜ್‌ ಶಿಷ್ಯೆಯರಾದ ಜಾಹ್ನವಿ, ಭಾರ್ಗವಿ, ತನ್ವಿ, ಹಂಸಾ ಮತ್ತು ಮನಸ್ವಿ ಅವರಿಂದ ನೃತ್ಯ ವೈವಿಧ್ಯ ನಡೆಯಿತು. ಹಿರಿಯ ಸಾಹಿತಿ ಮತ್ತು ಗಮಕಿ ಕೆ. ಆರ್‌. ಕೃಷ್ಣಯ್ಯ ಅವರು  ಕುಮಾರವ್ಯಾಸ ಭಾರತದ ನಾಂದಿ ಪದ್ಯಗಳ ಕುರಿತು ವ್ಯಾಖ್ಯಾನ ನೀಡಿದರು. ಸಹನಾ ಭಾರದ್ವಾಜ್‌, ಡಾ| ಸಹನಾ ಪೋತಿ ಹಾಗೂ ಕಲಾ ಭಾಗವತ್‌ ಗಮಕ ವಾಚನಗೈದರು. ಶಾಲಿನಿ ರಾವ್‌ ಮತ್ತು ಅನಿತಾ ಆಚಾರ್ಯ ಪ್ರಾರ್ಥ®ಗೈದರು.  ಸಾಹಿತ್ಯ ಬಳಗದ ಅಧ್ಯಕ್ಷ  ಎಚ್‌. ಬಿ. ಎಲ್‌. ರಾವ್‌ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುರಾಧಾ ರಾವ್‌, ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾ. ದಯಾ ವಂದಿಸಿದರು. 

ಚಿತ್ರ-ವರದಿ: ರೊನಿಡಾ ಮುಂಬಯಿ.

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.