ಸಂತ್ರಸ್ತರಿಗೆ ಕೊಡವ ಸಾಹಿತ್ಯ ಅಕಾಡೆಮಿ ಸಾಂತ್ವನ
Team Udayavani, Oct 5, 2018, 6:45 AM IST
ಮಡಿಕೇರಿ: ಮುಂಗಾರಿನ ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪದಿಂದ ಮನೆಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ, ಉತ್ತಮ ಬದುಕಿನ ಭರವಸೆಯನ್ನು ತುಂಬುವ ಪ್ರಯತ್ನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ತಂಡ ಮುಂದಾಗಿದ್ದು, ಬಾಳ್ಳೋ ಬಾಳ್ಳೋ ಜಬ್ಬೂಮಿ,ಕೊಡವಾಮೆಕ್ ಕಣ್ಣೀರ್ ಘೋಷವಾಕ್ಯದೊಂದಿಗೆ ವಿವಿಧ ಪ್ರಾಕೃತಿಕ ವಿಕೋಪದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ, ನೊಂದವರ ಅಳಲನ್ನು ಆಲಿಸಿ ಸಾಂತ್ವನ ಹೇಳುವ ಕಾರ್ಯ ನಡೆಸಿದೆ.
ಮಹಾತ್ಮಾ ಗಾಂಧಿ ಜಯಂತಿಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮತ್ತು ಅಕಾಡೆಮಿ ಸದಸ್ಯರು ಮಕ್ಕಂದೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬೆಳಗ್ಗಿನಿಂದ 11 ಗಂಟೆಯವರೆಗೆ ಸ್ವತ್ಛತಾ ಶ್ರಮದಾನ ನಡೆಸಿದರು. ಬಳಿಕ ಹಾನಿ ಪೀಡಿತ ಪ್ರದೇಶಗಳತ್ತ ಸಾಗಿ, ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.
ಭಾರೀ ಪ್ರಮಾಣದ ಗುಡ್ಡ ಕುಸಿತಕ್ಕೆ ಒಳಗಾದ ಮಕ್ಕಂದೂರು ವ್ಯಾಪ್ತಿಯ ತಂತಿಪಾಲ ಗ್ರಾಮಕ್ಕೆ, ಗ್ರಾಮ ಪಂಚಾಯತ್ ಪಿಡಿಒ ಚಂಗಪ್ಪ ಅವರೊಂದಿಗೆ ಅಕಾಡೆಮಿ ತಂಡ ತೆರಳಿ, ಅಲ್ಲಿನ ಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ಸಂತ್ರಸ್ತರೊಂದಿಗೆ ಮಾತನಾಡಿ, ಸಾಂತ್ವನವನ್ನು ಹೇಳಿತು.
ಕಾಲೂರು ಗ್ರಾಮಕ್ಕೆ ಭೇಟಿ ನೀಡಿದ ಅಕಾಡೆಮಿ ತಂಡದೊಂದಿಗೆ ಅಕಾಡೆಮಿ ಮಾಜಿ ಸದಸ್ಯರು ಹಾಗೂ ಗ್ರಾಮದ ಭಗವತಿ ದೇವಸ್ಥಾನದ ಅರ್ಚಕರಾದ ನಾಗೇಶ್ ಕಾಲೂರು ಅವರು ಮಾತನಾಡಿದ್ದಲ್ಲದೆ, ಸಂತ್ರಸ್ತ ಗ್ರಾಮಸ್ಥರಿಗೆ ಅತ್ಯವಶ್ಯವಾಗಿ ಆಗಬೇಕಿರುವ ಮೂಲಭೂತ ಸೌಲಭ್ಯ ಮತ್ತು ಕೆಲಸ ಕಾರ್ಯಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮತ್ತು ತಂಡ, ಬೇಡಿಕೆಗಳ ಈಡೇರಿಕೆಗೆ ಸರಕಾರದೊಂದಿಗೆ ಅಕಾಡೆಮಿ ಮಾತುಕತೆ ನಡೆಸುವ ಭರವಸೆಯನ್ನು ನೀಡಿತು.
ನೆರವು ದೊರತಿಲ್ಲ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ತಂತಿಪಾಲ,ಕಾಲೂರು ವಿಭಾಗಗಳಲ್ಲಿನ ಬಹುತೇಕ ಸಂತ್ರಸ್ತರು,ದುರ್ಘಟನೆ ಸಮಭವಿಸಿದ ಬಳಿಕ ತಮಗೆ ಪ್ರಾಥಮಿಕ ಹಂತದಲ್ಲಿ ದೊರಕಬೇಕಾಗಿದ್ದ ನೆರವು ಸಮರ್ಪಕವಾಗಿ ದೊರತ್ತಿಲ್ಲ. ಸರ್ಕಾರ ಸಂತ್ರಸ್ತರಿಗೆ ಕೊಡಮಾಡಿರುವ 3800 ರೂ. ಪರಿಹಾರ ನಿರಾ]ತರಿಗೆ ಸಮರ್ಪಕವಾಗಿ ದೊರಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡ ಘಟನೆಯೂ ನಡೆಯಿತು.
ಅಕಾಡೆಮಿಯ ಮಾಜಿ ಸದಸ್ಯೆ ಮುಕ್ಕಾಟಿರ ತಂಗಮ್ಮ ಅವರನ್ನು ಅಕಾಡೆಮಿ ತಂಡ ಭೇಟಿಯಾಗಿ ಸಾಂತ್ವನ ನುಡಿಯಿತು. ಪ್ರಾಕೃತಿಕ ವಿಕೋಪದಲ್ಲಿ ತಂಗಮ್ಮ ಅವರ ಪತಿ ಸಾಬು ಅವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ನೊಂದ ತಂಗಮ್ಮ ಅವರಿಗೆ ಬದುಕಿನ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ಅಕಾಡೆಮಿ ತಂಡ ಮಾಡಿತು.
ಅಕಾಡೆಮಿ ತಂಡ ಭೇಟಿ ನೀಡಿದ ಗ್ರಾಮೀಣ ಭಾಗಗಳಲ್ಲಿನ ಬಹುತೇಕ ಸಂತ್ರಸ್ತರು, ನಾವು ಮತ್ತೆ ನಮ್ಮ ಗ್ರಾಮಗಳಲ್ಲಿ ವಾಸಿಸಲು ಸಾಧ್ಯವೆ ಎನ್ನುವ ಬಗ್ಗೆ ತಾಂತ್ರಿಕವಾದ ಮಾಹಿತಿಯನ್ನು ಇಲ್ಲಿಯವರೆಗೆ ಆಡಳಿತ ವ್ಯವಸ್ಥೆ ಲಿಖೀತ ರೂಪದಲ್ಲಿ ನೀಡಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ನಾಲ್ಕೆçದು ತಿಂಗಳ ಬಳಿಕ ನಮ್ಮ ಪಾಡೇನು ಎಂದು ನೊಂದು ನುಡಿದ ಪ್ರಸಂಗವೂ ಎದುರಾಯಿತು.ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಗ್ರಾಮೀಣ ಭಾಗಗಳಿಗೆ ಅಕಾಡೆಮಿ ಸದಸ್ಯ ಹಂಚೆಟ್ಟಿರ ಮನು ಮುದ್ದಯ್ಯ ಅವರ ಮುಂದಾಳತ್ವದಲ್ಲಿ ತೆರಳಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಂಡದಲ್ಲಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರೊಂದಿಗೆ ಸದಸ್ಯರಾದ ಅಮ್ಮುಣಿಚಂಡ ಪ್ರವೀಣ್, ಉಮೇಶ್ ಕೇಚಮ್ಮಯ್ಯ, ಬೀಕಚಂಡ ಬೆಳ್ಯಪ್ಪ, ಬೊಳ್ಳಾಜಿರ ಅಯ್ಯಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಆಂಗೀರ ಕುಸುಮ್, ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ, ಎಚ್. ಗಣಪತಿ, ಕುಡಿಯರ ಶಾರ¨ದಾ, ಆಪಟ್ಟಿರ ಟಾಟು ಮೊಣ್ಣಪ್ಪ, ಅಜ್ಜಮಾಡ ಕುಶಾಲಪ್ಪ ಅವರಿದ್ದರು.
ಮನೆ ಬೇಕು: ಮಳೆಹಾನಿ ಸಂತ್ರಸ್ತರ ಬೇಡಿಕೆ
ಪ್ರಾಕೃತಿಕ ವಿಕೋಪದಿಂದ ಜರ್ಜರಿತವಾಗಿರುವ ಮೂವತ್ತೂಕ್ಲು, ಶಿರಂಗಳ್ಳಿ ಗ್ರಾಮಗಳಿಗೆ ಅಕಾಡೆಮಿ ತಂಡ ಭೇಟಿ ನೀಡಿದ ಸಂದರ್ಭ, ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಗಳಿಂದ ಮಳೆಗಾಲದ ಅವಧಿಯಲ್ಲಿ ಮತ್ತೆ ತಮ್ಮ ಗ್ರಾಮಗಳಲ್ಲಿ ವಾಸಿಸುವುದು ಅಸಾಧ್ಯವೆಂದು ಸಂತ್ರಸ್ತರು ಅಳಲು ತೋಡಿಕೊಂಡರು. ತಮಗೆ ಮಾದಾಪುರದ ತೋಟಗಾರಿಕೆ ಜಾಗದಲ್ಲಿ ನಿವೇಶನ ಮತ್ತು ಮನೆಯನ್ನು ಒದಗಿಸಿಕೊಟ್ಟಲ್ಲಿ, ಅಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದರೊಂದಿಗೆ, ಅಲ್ಲಿದ್ದುಕೊಂಡು ಗ್ರಾಮದಲ್ಲಿ ಉಳಿದಿರುವ ತಮ್ಮ ಆಸ್ತಿ ಪಾಸ್ತಿಗಳನ್ನು ನಿರ್ವಹಣೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.