ಬಜಪೆ ಪೊಲೀಸ್‌ ಠಾಣೆಯಲ್ಲಿ ಶಾಲಾ ಮಕ್ಕಳ ಕಲರವ


Team Udayavani, Oct 5, 2018, 11:51 AM IST

5-october-6.gif

ಬಜಪೆ: ದಿನವಿಡೀ ಕೇಸ್‌, ಅಪರಾಧ ಹಾಗೂ ಒತ್ತಡಗಳ ನಡುವೆ ಕಾಲ ಕಳೆಯುತ್ತಿದ್ದ ಬಜಪೆ ಪೊಲೀಸ್‌ ಅಧಿಕಾರಿಗಳು ಗುರುವಾರ ಮಾತ್ರ ಉಲ್ಲಾಸಿತರಾಗಿದ್ದರು. ಇದಕ್ಕೆ ಕಾರಣ ಪುಟಾಣಿ ಕಂದಮ್ಮಗಳ ತೊದಲು ನುಡಿಯ ಟ್ವಿಂಕಲ್‌ ಟ್ವಿಂಕಲ್‌ ಲಿಟ್ಲ ಸ್ಟಾರ್‌ ಹಾಡು..

2ರಿಂದ 4 ವರ್ಷ ಸಣ್ಣ ವಯಸ್ಸಿನ ಮಕ್ಕಳಲ್ಲಿ ಪೊಲೀಸ್‌ರ ಭಯ ಹೋಗಿ, ಸುರಕ್ಷಾ ಭಾವನೆ ಮೂಡಿಸುವ ಉದ್ದೇಶದಿಂದ ನಗರದ ಎಂ.ಜೆ.ಎಂ. ಬಹ್ರುರುತುಲ್‌ ಕುರಾನ್‌ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ ಗುರುವಾರ ಬಜಪೆ ಪೊಲೀಸ್‌ ಠಾಣೆಗೆ ಭೇಟಿ ನೀಡಿದರು.

ಶಾಲೆಯ 20 ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ  ನೀಡಿ ಸ್ವಾಗತಿಸಲಾಯಿತು. ಠಾಣೆಯ ಎಲ್ಲ ಕೊಠಡಿಗಳ ಸಿಬಂದಿ ಪರಿಚಯ ಮಾಡಿಕೊಂಡು ಮಾಹಿತಿ ಪಡೆದುಕೊಂಡರು. ಪುಟಾಣಿ ವಿದ್ಯಾರ್ಥಿಗಳ ನೃತ್ಯ ಸಹಿತ ಟ್ವಿಂಕಲ್‌ ಟ್ವಿಂಕಲ್‌ ಲಿಟ್ಲ ಸ್ಟಾರ್‌ ಹಾಡಿನೊಂದಿಗೆ ಪೊಲೀಸ್‌ ಸಿಬಂದಿಯನ್ನು ಮನೋರಂಜಿಸಿ, ಒತ್ತಡವನ್ನು ಮರೆತು ಪುಣಾಣಿಗಳೊಂದಿಗೆ ಬೆರೆಯುವಂತೆ ಮಾಡಿತು.

ಪೊಲೀಸ್‌ರಿಂದ ಐಸ್‌ಕ್ರೀಂ
ಮಧುರ ಧ್ವನಿಯಿಂದ ಹಾಡು ಹೇಳಿ ಪೊಲೀಸ್‌ರನ್ನು ರಂಜಿಸಿದ ಪುಟಾಣಿಗಳ ಮಕ್ಕಳಿಗೆ ಇಷ್ಟವಾದ ಐಸ್‌ಕ್ರೀಂನ್ನು ನೀಡಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತೋಷಪಟ್ಟರು. ಕಳೆದ ವಾರವಷ್ಟೇ ಕೈಕಂಬದ ಮರ್ಕಜ್‌ ಜಹರುತುಲ್‌ ಕುರಾನ್‌ ಶಾಲೆಯ 25 ಪುಟಾಣಿಗಳು ಬಜಪೆ ಪೊಲೀಸ್‌ ಠಾಣೆಗೆ ಬಂದಿದ್ದರು. ಅವರನ್ನು ಕೂಡ ಹೀಗೆ ಸ್ವಾಗತಿಸಿ, ಸಿಹಿತಿಂಡಿ ನೀಡಲಾಯಿತು. ವಾರಕ್ಕೊಂದು ಶಾಲೆಯ ಪುಟಾಣಿಗಳನ್ನು ಪೊಲೀಸ್‌ ಠಾಣೆಗೆ ಸ್ವಾಗತಿಸಿ, ಎಳೆಯ ವಯಸ್ಸಿನಲ್ಲೇ ಪೊಲೀಸ್‌ರ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಯಾವಾಗಲೂ ಪ್ರಕರಣ, ಕಳ್ಳತನ ಎಂದು ಕೆಲಸದ ಒತ್ತಡದಲ್ಲಿರುವ ನಮಗೆ ಪುಟಾಣಿಗಳು ಬಂದಾಗ ಮಾನಸಿಕ ತೃಪ್ತಿ ಸಿಗುತ್ತದೆ. ಸ್ಟೇಶನ್‌ ಮನೆ ಹಾಗೂ ಶಾಲೆಯಂತಾಗುತ್ತದೆ ಎಂದು ಬಜಪೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಸ್‌. ಪರಶಿವ ಮೂರ್ತಿ ಹೇಳಿದರು.

ಮಕ್ಕಳಲ್ಲಿ ಭಯ ಹೋಗಲಾಡಿಸುವ ಉದ್ದೇಶ 
ಮನೆಗಳಲ್ಲಿ ಹೆತ್ತವರು ಪುಟಾಣಿಗಳು ತಪ್ಪು ಮಾಡಿದಾಗ ಬೆತ್ತವನ್ನು ತೋರಿಸಿ ಹೆದರಿಸುವ ಹಾಗೂ ಇಲ್ಲವೇ ಪೊಲೀಸ್‌ ರನ್ನು ಕರೆದು ಅಂಜಿಸುವ ವಾಡಿಕೆಯಿದೆ. ಈ ಭಯವನ್ನು ಅಕ್ಷರಶಃ ಹೋಗಲಾಡಿಸಿ ಸುರಕ್ಷೆ ಭಾವನೆ ಮೂಡಿಸುವ ದೃಷ್ಟಿಯಿಂದ ಪುಟಾಣಿಗಳನ್ನು ಠಾಣೆಗೆ ಭೇಟಿ ನೀಡಲಾಯಿತು ಎಂದು ಶಾಲೆಯ ಅಧ್ಯಾಪಕರು ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.