ನಾಳೆ ಅಂಚೆ ವಿಂಗಡಣಾ ನೌಕರರ ಸಮಾವೇಶ 


Team Udayavani, Oct 5, 2018, 3:57 PM IST

5-october-19.gif

ಗದಗ: ಅಂಚೆ ಇಲಾಖೆಯ ಅಂಚೆ ವಿಂಗಡನಾ ನೌಕರರ(ಆರ್‌ಎಂಎಸ್‌) ಹುಬ್ಬಳ್ಳಿ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ಹಾಗೂ ಬಹಿರಂಗ ಸಮಾವೇಶವನ್ನು ಅ.6 ರಿಂದ ಎರಡು ದಿನಗಳ ಕಾಲ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರೂ ಆಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮುಳಗುಂದ ರಸ್ತೆಯ ಕನಕ ಭವನದಲ್ಲಿ ಅ.7 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಬಹಿರಂಗ ಸಮಾವೇಶದಲ್ಲಿ ದಕ್ಷಿಣ-ಪಶ್ಚಿಮ ರೈಲ್ವೆ ಮಜ್ದೂರ್‌ ಯೂನಿಯನ್‌ ವಿಭಾಗೀಯ ಕಾರ್ಯದರ್ಶಿ ಎಸ್‌ .ಎ.ಅಲ್ಬರ್ಟ್‌ ಡಿಕ್ರೂಜ್‌, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌.ಸಿ. ಹಿರೇಮಠ, ಆರ್‌.ಎಂ.ಎಸ್‌. ಹುಬ್ಬಳ್ಳಿ ವಿಭಾಗೀಯ ಅಧೀಕ್ಷಕಿ ಜಿ.ಎಸ್‌. ಸುಜಾತಾ ಮುಖ್ಯ ತಿಥಿಗಳಾಗಿ ಪಾಲ್ಗೊಳ್ಳುವರು.

ವಿಡಿಎಸ್‌ ಬಾಲಕರ ಪಿಯು ಕಾಲೇಜಿನ ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ ಅವರು ಗದಗ ವಿಭಾಗದ ಅಂಚೆ ವಿಂಗಡಣಾ ಕಾರ್ಯಾಲಯದ ಇತಿಹಾಸ, ಗದಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಅಂಚೆ ಹಾಗೂ ನಾಗರಿಕರ ಸೌಹಾರ್ದ ಸಂಬಂಧದ ಬಗ್ಗೆ ಉಪನ್ಯಾಸ ನೀಡುವರು. 

ವಕೀಲ ಪಿ.ಕಮಲೇಶನ್‌, ಎ.ಶ್ರೀನಿವಾಸ, ಉದಯ ಶಂಕರರಾವ್‌, ಕೆ.ಬಿ.ರೂಗಿಶೆಟ್ಟರ, ಎಚ್‌. ಎಸ್‌. ಬಸವರಾಜ, ಎಂ.ಬಿ. ಹುಲ್ಯಾಳ, ಎಸ್‌.ಎಂ. ಕುಲಕರ್ಣಿ ಸೇರಿ ಅನೇಕರು ಆಗಮಿಸಲಿದ್ದು, ಅಂಚೆ ವಿಂಗಡಣೆ ನೌಕರರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವರು ಎಂದರು.

ಗದಗ ಅಂಚೆ ವಿಂಗಡಣಾ ನೌಕರರ ಸಂಘದ ಅಧ್ಯಕ್ಷ ಸಿ.ಎಫ್‌. ಪಾಟೀಲ ಮಾತನಾಡಿ, ಅಂಚೆ ಸೇವೆ ಎಂದಾಕ್ಷಣ ಎಲ್ಲರಿಗೂ ಅಂಚೆ ಕಚೇರಿ ಸಿಬ್ಬಂದಿ, ಪೋಸ್ಟ್‌ಮನ್‌ ನೆನಪಾಗುತ್ತಾರೆ. ಆದರೆ, ಸಾರ್ವಜನಿಕರು ತಮ್ಮ ಪತ್ರಗಳನ್ನು ಸಂಬಂಧಿಸಿದವರಿಗೆ ಕಳುಹಿಸಿದಾಗ ಅದನ್ನು ಸಾರ್ಟಿಂಗ್‌ ಸೇರಿ ಹಲವು ಕಾರ್ಯಗಳನ್ನು ಆರ್‌ಎಂಎಸ್‌ ಸಿಬ್ಬಂದಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಾರೆ. ಅವರನ್ನು ಬೆಳಕಿಗೆ ತರುವುದರೊಂದಿಗೆ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವುದು ಹಾಗೂ ಮಾಡಿಕೊಳ್ಳಬಹುದಾದ ಬದಲಾವಣೆಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿಣಿ ನಡೆಯುತ್ತದೆ. ಮಹಾರಾಷ್ಟ್ರದ ಸೊಲ್ಲಾಪುರ ಒಳಗೊಂಡಂತೆ ಉತ್ತರ ಕರ್ನಾಟಕದ 11 ಜಿಲ್ಲೆಗಳು ಹುಬ್ಬಳ್ಳಿ ವಿಭಾಗಕ್ಕೆ ಒಳಪಡುತ್ತವೆ. ಈ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ನೌಕರರು ಭಾಗವಹಿಸಲಿದ್ದಾರೆ. ಅ.6 ರಂದು ಹುಬ್ಬಳ್ಳಿ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ವಿವರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್‌.ಲ್‌. ಕುಲಕರ್ಣಿ, ಸಿ.ವೈ. ನದಾಫ್‌, ಆರ್‌.ಬಿ. ಒಡೆಯರ, ಎ.ಪಿ. ಇಟಗಿ, ಎಚ್‌. ಯಲ್ಲಪ್ಪ, ಎಂ.ಎಸ್‌. ಶಿರಹಟ್ಟಿ, ವಿ.ಆರ್‌. ಚವಡಿ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

1

Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.