ಕುಸಿತದ ಭೀತಿಯಲ್ಲಿ ಶಿರ್ವ ಪಂ.ಕಟ್ಟಡದ ಪ್ಯಾರಪೀಟ್‌ ಗೋಡೆ

Team Udayavani, Oct 6, 2018, 6:20 AM IST

0510shirva4a.jpg

ಶಿರ್ವ: ಇಲ್ಲಿನ ಗ್ರಾ.ಪಂ. ಕಚೇರಿ ಕಟ್ಟಡದ ಅಂಗಡಿ ಕೋಣೆಗಳ ಮೇಲೆ ಕಟ್ಟಿರುವ ಪ್ಯಾರಪೆಟ್‌ ಗೋಡೆ ಬಿರುಕು ಬಿಟ್ಟು ಶಿಥಿಲಗೊಂಡು ವಾಲಿಕೊಂಡಿದೆ. ಸಿಮೆಂಟಿನ ಭಾಗ ಕುಸಿದಿದ್ದು ಕಬ್ಬಿಣದ ರಾಡ್‌ ಹೊರಬಂದಿದೆ. ಈ ಗೋಡೆಯ ಅಡಿಯಲ್ಲಿ ಮೆಡಿಕಲ್‌,ಬೇಕರಿ,
ಹೋಟೇಲ್‌ಗ‌ಳಿದ್ದು ಯಾವುದೇ ಸಂದರ್ಭದಲ್ಲಿ ಗೋಡೆ ಕುಸಿದು ಬೀಳುವ ಅಪಾಯ ಎದುರಾಗಿದೆ.

ಕಳೆದ ಸುಮಾರು 9 ವರ್ಷಗಳ ಹಿಂದೆ ಕಟ್ಟಲಾದ ಈ ಅಂಗಡಿ ಕೋಣೆಗಳ ಮೇಲೆ ಪ್ಯಾರಪೆಟ್‌ ವಾಲ್‌ ನಿರ್ಮಿಸಲಾಗಿತ್ತು. ಈ ಬಾರಿ ಪಂಚಾಯತ್‌ ಕಟ್ಟಡದ ಮೇಲೆ ಸಭಾಂಗಣ ನಿರ್ಮಿಸಲಾಗಿದ್ದು ಶಿಥಿಲಗೊಂಡಿರುವ ಪ್ಯಾರಪೆಟ್‌ಗೊàಡೆಯನ್ನು ಹಾಗೆಯೇ ಬಿಡಲಾಗಿದೆ.

ಅಂಗಡಿ, ಹೊಟೇಲ್‌ಗ‌ಳ ಗ್ರಾಹಕರಲ್ಲದೆ, ಬಸ್ಸು ತಂಗುದಾಣದ ಬದಿಯಲ್ಲಿರುವ ಈ ಕಟ್ಟಡದ ಬಳಿ ದಿನವೊಂದಕ್ಕೆ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನಿಲ್ಲುತ್ತಿದ್ದು ಗೋಡೆ ಕುಸಿತದ ಭೀತಿ ಎದುರಾಗಿದೆ.ಸೋಮವಾರ ಮುಂಜಾನೆ ಗೋಡೆಯ ಸ್ವಲ್ಪಭಾಗ ಕುಸಿದು ಬಿದ್ದಿದೆ. ಮೆಡಿಕಲ್‌ ಶಾಪ್‌ ಮಾಲಿಕರು ಅಂಗಡಿಯ ಎದುರಿಗೆ ತಡೆಯಿರಿಸಿ ಮುಂಜಾಗ್ರತೆ ವಹಿಸಿದರೂ ಪಂಚಾ ಯತ್‌ ಆಡಳಿತ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಅಂಗಡಿ ಬಾಡಿಗೆದಾರ ಹಲವಾರು ಬಾರಿ ಮೌಖೀಕವಾಗಿ ಪಂಚಾಯತ್‌ಗೆ ದೂರು ನೀಡಿದರೂ ದುರಸ್ತಿಗೆ ಸ್ಥಳಿಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಶಾಸಕರಿಗೂ ಈ ಬಗ್ಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಬಾಡಿಗೆದಾರ ತ್ರಿವಿಕ್ರಮ ಶೆಣೈ ನೋವು ವ್ಯಕ್ತಪಡಿಸಿದ್ದಾರೆ. ಗೋಡೆ ಕುಸಿದು ಅಂಗಡಿ ಗ್ರಾಹಕರ ಯಾ ಪ್ರಯಾಣಿಕರ ಮೇಲೆ ಬಿದ್ದು ಯಾವುದೇ ದುರಂತ ಸಂಭವಿಸುವ ಮುನ್ನ ಸ್ಥಳಿಯಾಡಳಿತ ಎಚ್ಚೆತ್ತುಕೊಂಡು ಪ್ಯಾರಪೆಟ್‌ ಗೋಡೆಯನ್ನು ಕೆಡವಿ ದುರಸ್ತಿಗೊಳಿಸಬೇಕಾಗಿದೆ.

ತಿಂಗಳ ಬಾಡಿಗೆ ಕಟ್ಟುವಾಗ ಹಲವಾರು ಬಾರಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಲ್ಲಿ ಗೋಡೆ ಶಿಥಿಲಗೊಂಡ ಬಗ್ಗೆ ಮೌಖೀಕವಾಗಿ ತಿಳಿಸಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ಗೋಡೆ ಕುಸಿದು ಅಂಗಡಿಗೆ ಬರುವ ಗ್ರಾಹಕರ ತಲೆಮೇಲೆ ಬೀಳುವ ಅಪಾಯವಿದೆ. 
– ತ್ರಿವಿಕ್ರಮ ಶೆಣೈ,   
ಮೆಡಿಕಲ್‌ ಶಾಪ್‌ ಮಾಲಕ

ಟಾಪ್ ನ್ಯೂಸ್

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

2-kadaba

Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.