ಸುದ್ದಿ ಪ್ರವಾಹದಲ್ಲಿ ನಕಲಿಯದ್ದೇ ಮೇಲುಗೈ


Team Udayavani, Oct 6, 2018, 12:30 AM IST

1.jpg

ನಕಲಿ ಸುದ್ದಿಗಳು ಸಾಮಾಜಿಕ ತಾಲತಾಣಗಳ ಅಗ್ರಜರಾದ ವ್ಯಾಟ್‌ಆಪ್, ಫೇಸ್‌ಬುಕ್‌, ಟ್ವೀಟರ್‌ಗಳಿಗೆ ಅಂಟಿದ ಶಾಪವಾಗಿದೆ. ನಾವು ನ್ಯಾಯ ಯುತವಾದ ಬಳಕೆಗೆ ಮನಸ್ಸು ಮಾಡಿದರೆ ಮುಂಬರುವ ದಿನಗಳಲ್ಲಿ ಕಾನೂನಿಗೆ ಉತ್ತರಿಸಬೇಕಾದ ಅನಿ ವಾರ್ಯತೆಯಿಂದ ಪಾರಾಗಬಹುದು. ಇಲ್ಲದೇ ಹೋದರೆ ಕೈಗೆ ಕೋಳ ತೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ ಪೋಸ್ಟ್‌ಗಳು ಮತ್ತು ಮಾನಹಾನಿ ಮಾಡುವಂತಹ ಸಂದೇಶಗಳ ಹರಿದಾಟ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತವಾಗುತ್ತಿದೆ. ಈ ಬೆಳವಣಿಗೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ “ಮಕ್ಕಳ ಕಳ್ಳರ’ ಸುಳ್ಳು ಸುದ್ದಿಯಿಂದಾಗಿ ದೇಶಾದ್ಯಂತ ಸಂಭವಿಸಿದ ಸಮೂಹ ಥಳಿತ, ಸಾವುಗಳೇ ಇದಕ್ಕೆ ಸಾಕ್ಷಿ. 

ಈ ಎಲ್ಲ ಚಟುವಟಿಕೆಗಳು ನಡೆಯುತ್ತಿರುವುದು ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಹಾಗೂ ಟ್ವೀಟರ್‌ಗಳಲ್ಲಿ. ಸ್ವಲ್ಪ ಗುಣಮಟ್ಟದ ಬಳಕೆದಾರರನ್ನು ಹೊಂದಿರುವ ಟ್ವೀಟರ್‌ನಲ್ಲಿ ನಕಲಿ ಸುದ್ದಿಗಳು ಅಷ್ಟಾಗಿ ಇರುವುದಿಲ್ಲ. ಆದರೆ ಜನಪ್ರಿಯ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ಗ್ಳಲ್ಲಿ  ನಕಲಿ ಸುದ್ದಿಗಳು ಮೇಳೈಸುತ್ತಿವೆ ಎಂಬುದನ್ನು ಬೇಸರವಾದರೂ ಒಪ್ಪಿಕೊಳ್ಳಲೇಬೇಕಿದೆ. ಇಂತಹ ಜಾಲತಾಣಗಳು ಇಂದು ಭಾಷಣಗಳ, ಚರ್ಚೆಗಳ ಪ್ರಮುಖ ವಸ್ತುವಾಗಿವೆ. ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾಲತಾಣಗಳ ವಿರುದ್ಧ ಆಕ್ರೋಶದ ಮಾತು ಕೇಳಿಬರುತ್ತಿದೆ. ಕೆಲವು ಕೆಟ್ಟ ಕೈಗಳಿಂದಾಗಿ ಇಂದು ಸಾಮಾಜಿಕ ಜಾಲತಾಣ ತನ್ನ ಆಶಯದಿಂದ ವಿಮುಖಗೊಂಡಿದೆ. 

ದುರಂತವೆಂದರೆ ನಕಲಿ ಸುದ್ದಿ ಹರಿಬಿಡುವುದರಲ್ಲಿ ಅಕ್ಷರಸ್ಥ ಯುವ ಸಮುದಾಯವೇ ಮುಂದಿದೆ. ಶಿಕ್ಷಣದಿಂದ ಆಲೋಚನಾ ಲಹರಿ ಉನ್ನತಿಯನ್ನು ಕಾಣಬಹುದು ಎಂಬ ಮಾತು ಮಿಥ್ಯವಾಗುತ್ತಿದೆ. ತಾರ್ಕಿಕ‌ ಆಲೋಚನೆಯೇ ಇಲ್ಲದೇ ಅಂಧರಾಗಿ (ಬ್ಲೆ„ಂಡ್‌) ಬಂದ ಸುದ್ದಿಗಳನ್ನು ಫಾರ್ವರ್ಡ್‌ ಮಾಡುವುದರಲ್ಲಿ ಇಂದು ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವುಗಳಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ ಆಗಬೇಕಿದೆ. ಎಲ್ಲಿ ಆರಂಭ? 

ನ್ಯೂ-ಮೀಡಿಯಾ ಮುಖ್ಯಭೂಮಿಕೆಗೆ ಆಗಮಿಸಿದ ಬಳಿಕ ಸುದ್ದಿಗಳ ಸಂಗ್ರಹ ಜಾಸ್ತಿಯಾಯಿತು. ಆರಂಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನವ ಮಾಧ್ಯಮಗಳು ಇಂದು ನಕಲಿ ಸುದ್ದಿಗಳ ಬ್ಯಾಂಕ್‌ ಆಗಿವೆ. (ಆದರೆ ನಮ್ಮಲ್ಲಿ ಕೆಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನ್ಯೂ-ಮಿಡಿಯಾಗಳೂ ಇವೆ) ಪರಿಣಾಮವಾಗಿ ಪತ್ರಿಕೆಗಳನ್ನು ಓದುವುದು ಬಿಡಿ, ನೋಡುವ ಕಣ್ಣುಗಳೂ ಕಡಿಮೆಯಾದವು. ಇದರಿಂದ ನೋಡುವುದಕ್ಕೂ ಹಾಗೂ ವಾಸ್ತವ (ಅಪಿಯರೆನ್ಸ್‌ ಆ್ಯಂಡ್‌ ರಿಯಾಲಿಟಿ)ಗೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳುವುದರಿಂದ ಜನ ವಂಚಿತರಾದರು. ಪರಿಣಾಮವಾಗಿ ಕಂಡದೆಲ್ಲವೂ ಸತ್ಯ ಎಂಬ ಕೆಟ್ಟ ನಂಬಿಕೆಯೇ ಬಲವಾಯಿತು. 

ಪೇಯ್ಡ ನಕಲಿ ಸುದ್ದಿಗಳು 
ಇಂದು ಪೇಯ್ಡ ನಕಲಿ ಸುದ್ದಿಗಳು ಎಂಬ ಅತೀ ಅಪಾಯದ ವಹಿವಾಟು ಆರಂಭವಾಗಿದೆ. ಇವುಗಳು ಸಾಮಾಜಿಕ ಜಾಲಾತಾಣಗಳಲ್ಲಿ ಅತ್ಯಂತ ಹೆಚ್ಚು ಸಕ್ರಿಯವಾಗಿ ತನ್ನ “ಟಾರ್ಗೆಟ್‌ ಆಡಿಯನ್ಸ್‌’ ಅನ್ನು ತಲುಪುವ ಕೆಲಸ ಮಾಡುತ್ತಿವೆ. ಇದರಿಂದ ಯಾವುದು ನೈಜ ಸುದ್ದಿ, ಯಾವುದು ನಕಲಿ ಸುದ್ದಿ ಎಂದು ಓದುಗ ದೃಢ ನಿರ್ಧಾರಕ್ಕೆ ಬರಲಾಗದೇ ಅದರ ದಾಸನಾಗಿ ಬಿಡುತ್ತಾನೆ. ಪದೇ ಪದೇ ಆ ನಿರ್ದಿಷ್ಟ ಸುದ್ದಿಯ ಖಾತೆಗೆ ಭೇಟಿ ನೀಡಿ ಅಲ್ಲಿರುವ ಒಂದಷ್ಟು ಸುದ್ದಿಗಳನ್ನು, ಅವುಗಳ ಲಿಂಕ್‌ಗಳನ್ನು ಶೇರ್‌ ಮಾಡುತ್ತಾನೆ. ಇದರಿಂದ ಓದುಗರ ಅಭಿರುಚಿ ನೈಜತೆಗಿಂತ ಕಪೋಲಕಲ್ಪಿತವಾಗುತ್ತದೆ ಹಾಗೂ ಬಾಹ್ಯ ಮೂಲಗಳಿಂದ ಪ್ರಭಾವಿತ ಸುದ್ದಿಗಳು ಹೆಚ್ಚು ಕಲರ್‌ಫ‌ುಲ್‌ ಆಗಿ ಕಾಣಿಸುತ್ತವೆ. 

ಅಜಮಾಸು 60 ಪ್ರತಿಶತದಷ್ಟು ನಕಲಿ ಸುದ್ದಿಗಳು ರಾಜಕೀಯ ಪಕ್ಷಗಳ ಖಾತೆಗಳಿಂದಲೇ ಹರಿದಾಡುತ್ತಿವೆ. ರಾಜಕೀಯ ಪಕ್ಷಗಳ ಐಟಿ ಸೆಲ್‌ಗ‌ಳೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಫೇಕ್‌ ಸುದ್ದಿಗಳನ್ನು ಹೆಚ್ಚು ಪ್ರಸಾರ ಮಾಡುತ್ತಿವೆ. ಆಡಳಿತ ಪಕ್ಷ ವಿಪಕ್ಷಗಳ ಮೇಲೆ, ವಿಪಕ್ಷಗಳು ಆಡಳಿತದ ವಿರುದ್ಧ ಬಹಳಷ್ಟು ನಕಲಿ ಸುದ್ದಿಯನ್ನು ಸೃಷ್ಟಿಸಿ ಹರಿಬಿಡುತ್ತವೆ. ಆದರೆ ಮುಗª ಬಳಕೆದಾರರಿಗೆ ಸುಳ್ಳೆಲ್ಲವೂ ಸತ್ಯವೆನಿಸಿಬಿಡುತ್ತದೆ. 

ಬಹುತೇಕ ನ್ಯೂಸ್‌ ಚಾನೆಲ್‌ಗ‌ಳು ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದು, ಕಾರ್ಯಕ್ರಮಗಳನ್ನು “ಲೈವ್‌ ಸ್ಟ್ರೀಮ್‌’ ಮಾಡುತ್ತಿವೆ. ರಾಜಕೀಯ ಪಕ್ಷಗಳ ಸುದ್ದಿಗಳು ಬಂದ ಸಂದರ್ಭದಲ್ಲಿ ಸಾಮಾಜಿಕ ತಾಣಗಳಲ್ಲಿ ಮೆಸೇಜ್‌ಗಳು, ವೃಥಾರೋಪಗಳು, ನಕಲಿ, ಇಲ್ಲಸಲ್ಲದ ಆರೋಪಗಳು ಹರಿದಾಡುತ್ತಿವೆ. ಇಂತಹ ಚಟುವಟಿಕೆಯಲ್ಲಿ ಯುವಕರೇ, ಅದರಲ್ಲೂ ವಿದ್ಯಾವಂತ ಯುವಕರೇ ಹೆಚ್ಚಿರುವುದು ಶಿಕ್ಷಣ ವ್ಯವಸ್ಥೆಯನ್ನು ನಾಚುವಂತೆ ಮಾಡಿದೆ. ವಿದ್ಯಾವಂತರಿಗೂ ಅವಿದ್ಯಾವಂತರಿಗೂ ಸಾಮಾಜಿಕ ಜಾಲತಾಣಗಳು ಭಿನ್ನವಾಗಿಲ್ಲ. ಈ ಇಬ್ಬರು ಬಳಸುವ ವಿಧಾನಗಳಲ್ಲೂ ವ್ಯತ್ಯಾಸ ಇಲ್ಲ. 

ಇದೊಂದು ಗಂಭೀರ ವಿಷಯವಾಗಿದ್ದು, ರಾಜಕೀಯ ಲಾಭಕ್ಕಾಗಿ, ಪೂರ್ವಗ್ರಹ ಪೀಡಿತರಾಗಿ ಇಂತಹ ಹಿತಾಸಕ್ತಿಯನ್ನು ಅಪ್ಪಿಕೊಂಡರೆ ಮುಂದೊಂದು ದಿನ ಅದು ಸೃಷ್ಟಿದವನನ್ನೇ ಸುಡುವ ಭಸ್ಮಾಸುರನಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು?

1.ರಾಜಕೀಯ ಪಕ್ಷಗಳ ಹೆಸರಿನಿಂದ ಹರಿಯುವ ನಕಲಿ ಸುದ್ದಿಗಳ ಮೇಲೆ ಸೈಬರ್‌ ವಿಭಾಗ ಕಣ್ಣಿಡಬೇಕು. ಸೈಬರ್‌ ಇಲಾಖೆಗೆ ಸಹಕಾರ ಆಗುವಂತಹ ಕಾನೂನಿನ ಅವಕಾಶಗಳನ್ನು ಸರಕಾರಗಳು ಮಾಡಿಕೊಡಬೇಕು. ಈಗಿರುವ ಕಾನೂನಿನ ತೊಡಕನ್ನು ನಿವಾರಿಸಬೇಕು. 

2.ಟ್ರೋಲ್‌ಗ‌ಳ ಮೇಲೆ ಕಣ್ಣಿಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಮಾತು ಕೇಳಿಬಂದರೆ, ಆಯಾ ತಾಣಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಬಳಕೆದಾರಿಗೆ ಮನವರಿಕೆ ಮಾಡಿಕೊಡಬೇಕು. 

   3.ಸುದ್ದಿ ನೀಡುವ ಹೆಸರಿನೊಂದಿಗೆ ಸ್ಥಾಪಿತ ವಾದ ಕೆಲವು ಸಂಸ್ಥೆಗಳು ಬರೀ ನಕಲಿ ಸುದ್ದಿಗಳನ್ನೇ ಬಿತ್ತರ ಮಾಡುತ್ತಿವೆ. ಇಂಥವುಗಳಿಗೆ ಕಡಿವಾಣ ಬೀಳಬೇಕು. ಮುಖ್ಯವಾಗಿ ನಕಲಿ ಸುದ್ದಿಗಳು ಹೊರಬೀಳುವುದೇ ಇಂಥ ವೆಬ್‌ಸೈಟ್‌ಗಳಿಂದ. ಇವುಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತಾಗಬೇಕು. 

 ಕಾರ್ತಿಕ್‌ ಅಮೈ 

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.