ಶಬ್ದರಹಿತ ಬಾಂಧವ್ಯ ಸೃಷ್ಟಿಸುವ ಕಲಾಕಾರರು
Team Udayavani, Oct 6, 2018, 6:30 AM IST
ಬೆಂಗಳೂರು: ಚಿತ್ರಕಲೆಯಲ್ಲಿ ಅಪಾರ ಸೇವೆ ಸಲ್ಲಿಸಿದ ಉಡುಪಿಯ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ, ಮೈಸೂರಿನ ಎಸ್.ಎಂ.ಜಂಬುಕೇಶ್ವರ, ಧಾರವಾಡದ ಮಧು ದೇಸಾಯಿ ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ನೀಡುವ 2018ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಗೌರವ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆ ಹೊಂದಿದೆ.ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ
ಚಂದ್ರಶೇಖರ ಕಂಬಾರ, ಚಿತ್ರಗಳು ಅಂತರಂಗವನ್ನು ಪ್ರವೇಶಿಸಿ ನಮಗೆ ಗೊತ್ತಿಲ್ಲದೆ ಸಂಭಾಷಣೆ ಮಾಡುತ್ತವೆ. ಏನನ್ನೋ
ಹೇಳಹೋಗುತ್ತವೆ. ಇಂತಹ ಶಬ್ದರಹಿತವಾದ ಬಾಂಧವ್ಯವನ್ನು ಕಲಾಕಾರರು ಕೃತಿಗಳಲ್ಲಿ ಅಭಿವ್ಯಕ್ತಿಸುವುದು ಜಾಣ್ಮೆಯೇ ಸರಿ ಎಂದು ಬಣ್ಣಿಸಿದರು.
ಪ್ರಶಸ್ತಿ ವಿಜೇತರ ಕಲಾ ಪ್ರೌಢಿಮೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಾವಿದರ ಚಿತ್ರಗಳನ್ನು ನೋಡಿದಾಗ ಹೊಸದೊಂದು ಭಾವ ಲೋಕ ಕಣ್ಮುಂದೆ ಬರುತ್ತದೆ. ಚಿತ್ರದ ಮೂಲಕವೇ ಪ್ರಕೃತಿ ಸೇರಿದಂತೆ ಇನ್ನಿತರ ಅನುಪಮ ಅಂಶಗಳನ್ನು ಪೊಣಿಸಿಟ್ಟಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ವಿದೇಶದಲ್ಲಿ ನಡೆಯುವ ಕಲಾಕೃತಿ ಪ್ರದರ್ಶನದಲ್ಲಿ ಚಿತ್ರ ವಿವರಣೆಕಾರರನ್ನು ನೇಮಿಸುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ಕಲಾವಿದರ ಒಳ ಮನಸ್ಸಿನಿಂದ ಕಲೆಯಲ್ಲಿ ಅಭಿವ್ಯಕ್ತಿಗೊಂಡ ಸಂದೇಶಗಳನ್ನು ಬಿಡಿಸಿ ಹೇಳುವವರ ನೇಮಕ ಮಾಡುವ ಅಗತ್ಯವಿದೆ ಎಂದರು.
ಡಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ ಮಾತನಾಡಿ,ಚಿತ್ರಕಲೆ ಇನ್ನಷ್ಟು ಅಭಿವೃದಿಟಛಿ ಕಾಣುವಲ್ಲಿ ಕಲಾವಿದರಿಗೆ ಸೌಂದರ್ಯಶಾಸ್ತ್ರ ಹಾಗೂ ಮನ:ಶಾಸOಉದ ಶಿಕ್ಷಣದ ಅಗತ್ಯವಿದೆ ಎಂದರು.ಕಲಾವಿದನಿಗೆ ಕ್ರಿಯಾಶೀಲತೆ ಮುಖ್ಯವಾಗಿದ್ದು, ಬೇರೆ, ಬೇರೆ ಕಲಾಕೃತಿಗಳನ್ನು ನೋಡುವುದರ ಮುಖಾಂತರ ಚಿತ್ರಕಲೆಯಲ್ಲಿ ಸಾಧನೆ ಮಾಡಬೇಕು. ಸಮಕಾಲೀನ ಶಿಕ್ಷಣದಲ್ಲಿ ಕಲೆಗಳಿಗೆ ಪ್ರಾಶಸ್ತ$Â ಕೊಡಬೇಕು .ಆಗ ಮಾತ್ರ ಚಿತ್ರಕಲೆಗಳ ಮೂಲಕ ಅಭಿವ್ಯಕ್ತಿ ನಿರಂತರವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, 47ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನವನ್ನು ಬಾಗಲಕೋಟೆಯ ಇಂದ್ರಕುಮಾರ.ಬಿ.ದಸ್ತೇನವರ, ಹಾವೇರಿಯ ಕರಿಯಪ್ಪ ಹಂಚಿನಮನಿ, ಬೆಳಗಾವಿಯ ಶಂಕರ ಬಿ.ಲೋಹಾರ, ಬೆಂಗಳೂರಿನ ಆರ್.ವೆಂಕಟ ರಾಮನ್, ಬಾಗೂರು ಮಾರ್ಕಾಂಡೇಯ,ಶಿವಮೊಗ್ಗದ ಕೋಟೆಗದ್ದೆ ಎಸ್.ರವಿ, ಕಲಬುರಗಿಯ ಡಾ.ಸುಬ್ಬಯ್ಯ ಎಂ.ನೀಲಾ,ಶ್ರೀಶೈಲ ಗುಡೇದ, ಮಂಡ್ಯದ ವಿ.ಇ.ಅಕ್ಷಯ್ ಕುಮಾರ್, ಹುಬ್ಬಳ್ಳಿಯ ಗಣೇಶ ಎಸ್.ಸಾಬೋಜಿ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.