ಡೆನಿಸ್, ನಾದಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ
Team Udayavani, Oct 6, 2018, 8:43 AM IST
ಒಸ್ಲೊ: ಅತ್ಯಾಚಾರ, ಮಹಿಳೆಯರ ಹಕ್ಕುಗಳು ಹಾಗೂ ಯುದ್ಧ-ದ್ವೇಷಗಳ ನೆರಳಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಕಾಂಗೋ ಗಣರಾಜ್ಯದ ವೈದ್ಯ ಡಾ| ಡೆನಿಸ್ ಮುಕ್ವೆಜ್ (63) ಹಾಗೂ ಇರಾಕ್‌ನ ಯಾಜಿದಿ ಸಮುದಾಯದ ಹೋರಾಟಗಾರ್ತಿ ನಾದಿಯಾ ಮುರಾದ್ (25) ಅವರಿಗೆ 2018ರ ನೊಬೆಲ್ ಶಾಂತಿ ಪುರಸ್ಕಾರ ಸಂದಿದೆ.
ಕಾಂಗೋ ಗಣರಾಜ್ಯದಲ್ಲಿ “ಡಾಕ್ಟರ್ ಮಿರಾಕಲ್’ ಎಂದೇ ಖ್ಯಾತರಾಗಿರುವ ಡಾ. ಡೆನ್ನಿಸ್ ಮುಕ್ವೆಗೆ ಅವರು, ತಮ್ಮ ತಾಯ್ನಾಡಿನಲ್ಲಿ ಆಂತರಿಕ ಗಲಭೆಗಳ ಹೆಸರಿನಲ್ಲಿ ಅತ್ಯಾಚಾರ ಕ್ಕೊಳಗಾದ ಸಾವಿರಾರು ಮಹಿಳೆಯರಿಗೆ ತಾವು ಸ್ಥಾಪಿಸಿರುವ “ಪಾಂಝಿ’ ಆಸ್ಪತ್ರೆಯಲ್ಲಿ ಪುನರ್ಜನ್ಮ ನೀಡಿದ್ದಾರೆ. ಈವರೆಗೆ ಸುಮಾರು 30,000ಕ್ಕೂ ಹೆಚ್ಚು ಸಂತ್ರಸ್ತೆಯರು ದೈಹಿಕ ಹಾಗೂ ಮಾನಸಿಕ ಆಘಾತಗಳಿಂದ ಹೊರ ಬರಲು ನೆರವಾಗಿದ್ದಾರೆ. ಅತ್ಯಾಚಾರವನ್ನು “ಸಮೂಹನಾಶದ ಒಂದು ಅಸ್ತ್ರ’ ಎಂದೇ ಪರಿಗಣಿಸಿರುವ ಅವರು, 2014ರಲ್ಲಿ ನಡೆದಿದ್ದ ಅವರ ಹತ್ಯೆ ಯತ್ನದಿಂದ ಪಾರಾದರೂ ಜೀವದ ಹಂಗು ತೊರೆದು ಸಂತ್ರಸ್ತೆಯರ ಆರೈಕೆಯಲ್ಲಿ ಜೀವನ ಸವೆಸುತ್ತಿದ್ದಾರೆ.
ಐಸಿಸ್ ಪಂಜರದಲ್ಲಿದ್ದ ನಾದಿಯಾ
ಇರಾಕ್‌ನ “ಯಾಜಿದಿ’ ಸಮುದಾಯದಲ್ಲಿ ಜನಿಸಿದ ನಾದಿಯಾ ಮುರಾದ್‌ಗೆ 19 ವರ್ಷವಿದ್ದಾಗಲೇ ಐಸಿಸ್ ಉಗ್ರರು ಅವರನ್ನು ಅಪಹರಿಸಿದ್ದರು. 3 ತಿಂಗಳ ಕಾಲ ಬಂಧಿಯಾಗಿದ್ದ ಅವರನ್ನು ಲೈಂಗಿಕ ಗುಲಾಮಳನ್ನಾಗಿ ಬಳಸಿಕೊಳ್ಳಲಾಗಿತ್ತಲ್ಲದೆ, ಉಗ್ರರ ತಂಡಗಳ ನಡುವೆಯೇ ಅವರು ಅನೇಕ ಬಾರಿ ಮಾರಾಟವಾಗಿದ್ದರು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು, ಚಿತ್ರಹಿಂಸೆ ಅನುಭವಿಸಿದ್ದರು. 2014ರಲ್ಲಿ ಐಸಿಸ್ ಪಂಜರದಿಂದ ತಪ್ಪಿಸಿಕೊಂಡು ಬಂದ ನಂತರ, ಮಾನವ ಕಳ್ಳಸಾಗಣೆ ಹಾಗೂ ಅತ್ಯಾಚಾರ ವಿರುದ್ಧ ಹೋರಾಟಗಾರ್ತಿಯಾಗಿ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಗಳನ್ನು ಅಸ್ತ್ರವಾಗಿ ಬಳಸುವುದರ ವಿರುದ್ಧ ಹೋರಾಡಿದ ಇಬ್ಬರಿಗೆ ಈ ಬಾರಿಯ ಶಾಂತಿ ನೊಬೆಲ್ ಸಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.