ವಿದ್ಯಾರ್ಥಿಗಳಿಗೆ ದಸರಾ ಸ್ಪೆಷಲ್‌ ಕ್ಲಾಸ್‌!


Team Udayavani, Oct 6, 2018, 9:40 AM IST

scholl.jpg

ಸುರತ್ಕಲ್‌: ಕಲಿಕೆಯಲ್ಲಿ ಹಿಂದುಳಿದ ಸರಕಾರಿ ಶಾಲೆಯ 9 ಮತ್ತು 10ನೇ ತರಗತಿ ಮಕ್ಕಳು ಮತ್ತು ಅವರಿಗೆ ಪಾಠ ಹೇಳುವ ಶಿಕ್ಷಕರಿಗೆ ಈ ಬಾರಿ ದಸರಾ ರಜೆ ಸಂಭ್ರಮವಿಲ್ಲ. ಅಷ್ಟೇ ಅಲ್ಲ , ರವಿವಾರವೂ ಮಕ್ಕಳು ಪಾಠ ಕೇಳಬೇಕಾಗಿ ಬಂದಿರುವುದು ಬೇಸರಕ್ಕೆ ಕಾರಣವಾಗಿದೆ. 

“ವಿಶ್ವಾಸ ಕಿರಣ’ ಅನ್ವಯ 25 ದಿನಗಳ ಕಾಲ, ದಿನಕ್ಕೆ 3 ತಾಸು ವಿಶೇಷ ಬೋಧನಾ ತರಗತಿ ನಡೆಸಿ ಮಕ್ಕಳನ್ನು ಮುಂದಕ್ಕೆ ತರುವ ಜವಾಬ್ದಾರಿ ಶಿಕ್ಷಕರಿಗೆ ನೀಡಲಾಗಿದೆ. ರಾಜ್ಯದ 34 ಜಿಲ್ಲೆಗಳ 204 ಶೈಕ್ಷಣಿಕ ಬ್ಲಾಕ್‌ಗಳ 535 ಕಲಿಕಾ ಕೇಂದ್ರಗಳಲ್ಲಿ ಈ ಹೆಚ್ಚುವರಿ ಕಲಿಕೆಗೆ ವ್ಯವಸ್ಥೆ ಆಗಲಿದೆ. ಮಂಗಳೂರು ಉತ್ತರದಲ್ಲಿ ಎರಡು ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಇಂತಹ ಎರಡು ಕಲಿಕಾ ಬ್ಲಾಕ್‌ ಗುರುತಿಸಲಾಗಿದೆ.

ವಿಶ್ವಾಸ ಕಿರಣ
ಕಲಿಕೆಯಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಕ್ಕಳನ್ನು ಗುರುತಿಸಿ ಅವರಿಗೆ “ವಿಶ್ವಾಸ ಕಿರಣ’ ವಿಶೇಷ ತರಗತಿ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ಅದರಂತೆ ಅ.9ರಿಂದ ವಿಶೇಷ ತರಗತಿ ಆರಂಭವಾಗಲಿದ್ದು ರವಿವಾರವೂ ಸೇರಿ ನಿತ್ಯ 3 ತಾಸು ತರಗತಿ ಇರಲಿದೆ.  

ದ.ಕ.ದಲ್ಲಿ 14 ಕಲಿಕಾ ಕೇಂದ್ರ 
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ “ವಿಶ್ವಾಸ ಕಿರಣ’ ಕಾರ್ಯಕ್ರಮದಲ್ಲಿ ಒಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಒ) ವಲಯದಲ್ಲಿ ಎರಡು ಕೇಂದ್ರಗಳನ್ನು ತೆರೆಯ ಲಾಗುತ್ತದೆ. 9ನೇ ತರಗತಿ ಯಿಂದ ನೂರು ಹಾಗೂ 10ನೇ ತರಗತಿಯಿಂದ 100 ಮಕ್ಕಳಂತೆ ಆಯಾ ವಲಯದ ಒಟ್ಟು 400 ಮಕ್ಕಳು ಇದರ ಪ್ರಯೋಜನ ಪಡೆಯ ಲಿದ್ದಾರೆ. ದಕ್ಷಿಣ ಕನ್ನಡದಲ್ಲಿ 14 ಕಲಿಕಾ ಕೇಂದ್ರ ತೆರೆಯಲಾಗುತ್ತಿದ್ದು, ಸುಮಾರು 1800ಕ್ಕೂ ಮಿಕ್ಕಿ ವಿದ್ಯಾರ್ಥಿ ಗಳು ಪ್ರಯೋಜನ ಪಡೆದು ಕೊಳ್ಳ ಲಿದ್ದಾರೆ. ಆಸಕ್ತ ಮಕ್ಕಳನ್ನೂ ಪರಿಗಣಿಸ ಲಾಗುತ್ತದೆ. ವಿದ್ಯಾರ್ಥಿಗಳ ಅಧ್ಯಯನ ಕೌಶಲ ಉತ್ತಮಗೊಳಿಸುವುದು, ಕಲಿಕೆ ಯಲ್ಲಿ ಹಿಂದುಳಿದವರಿಗೆ ಉತ್ತೇಜನ, ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭ್ಯಾಸ ಮಾಡುವುದು ಈ ತರಗತಿಯ ಉದ್ದೇಶ.   

ಒಂದೂ ದಿನ ಬಿಡದೆ ತರಗತಿ!  
ಅ. 9ರಿಂದ ಅ. 17ರ ವರೆಗೆ ರವಿವಾರವೂ ಸೇರಿ ಈ ತರಗತಿ ನಡೆಯುವ ಕಾರಣ ಸರಕಾರಿ ಪ್ರೌಢ ಶಾಲೆ ಗಳ ಶಿಕ್ಷಕರು-ಮಕ್ಕಳು ಅಸಮಾ ಧಾನಗೊಂಡಿದ್ದಾರೆ. ಕಳೆದ 2 ವರ್ಷದಲ್ಲಿ ರವಿವಾರ ತರಗತಿ ಇರಲಿಲ್ಲ. ಈಗ ಇತರ ಶಿಕ್ಷಕರು ದಸರಾ ರಜೆಯಲ್ಲಿದ್ದರೆ ಈ ಮಕ್ಕಳು-ಶಿಕ್ಷಕರು ತರಗತಿಯಲ್ಲಿರಬೇಕಾಗಿದೆ.

ವಿಶ್ವಾಸ ಕಿರಣ’ ಕಾರ್ಯಕ್ರಮ ಉತ್ತಮ ಫ‌ಲಿತಾಂಶ ನೀಡಿರುವ ಕಾರಣ ಈ ಬಾರಿಯೂ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರಗಳನ್ನು ಗುರುತಿಸಿ ನುರಿತ ಶಿಕ್ಷಕರನ್ನು ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಾಗುವುದು.
ಶಿವರಾಮಯ್ಯ, ಡಿಡಿಪಿಐ, ದಕ್ಷಿಣ ಕನ್ನಡ

ಉಡುಪಿ ಜಿಲ್ಲೆಯ ಬೈಂದೂರು ಮತ್ತು ಬ್ರಹ್ಮಾವರಗಳಲ್ಲಿ ತಲಾ 3; ಇನ್ನುಳಿದ ಬ್ಲಾಕ್‌ಗಳಲ್ಲಿ ತಲಾ ಎರಡು ಕೇಂದ್ರ ತೆರೆಯಲಾಗುತ್ತದೆ. ರಾಜ್ಯಾದ್ಯಂತ ಏಕ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೊನೆಯ ಕ್ಷಣದ ಬದಲಾವಣೆ ಇದ್ದಲ್ಲಿ ಶನಿವಾರ ನಡೆಯುವ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಿರಿಯ ಅಧಿಕಾರಿಗಳು ತಿಳಿಸಲಿದ್ದಾರೆ.
ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ
* ಲಕ್ಷ್ಮೀನಾರಾಯಣ ರಾವ್‌ 

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.