ವರುಣಾ ಕೆರೆಯಲ್ಲಿ ಜಲಕ್ರೀಡೆ ಆರಂಭ


Team Udayavani, Oct 6, 2018, 11:33 AM IST

m2-varuna.jpg

ಮೈಸೂರು: ನಗರದೆಲ್ಲೆಡೆ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಕಳೆಕಟ್ಟಿದೆ. ನಾಡಹಬ್ಬದ ಆಕರ್ಷಣೆ ಕಣ್ತುಂಬಿಕೊಳ್ಳಲು ನಗರಕ್ಕಾಗಮಿಸುವ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಆಯೋಜಿಸಿರುವ ಜಲಸಾಹಸ ಕ್ರೀಡೆಗಳಿಗೆ ಶುಕ್ರವಾರ ಚಾಲನೆ ದೊರೆಯಿತು.

ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮೈಸೂರಿಗೆ ಪ್ರತಿನಿತ್ಯ ಸ್ಥಳೀಯರು ಮಾತ್ರವಲ್ಲದೆ, ದೇಶ ವಿದೇಶಗಳ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಾರೆ. ಮೈಸೂರಿನ ವಿವಿಧ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರಿಗೆ ದಸರಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಜಲಸಾಹಸ ಕ್ರೀಡೆಗಳು ಹೊಸ ಅನುಭವ ನೀಡಲಿದೆ.

ನಗರದ ಮೈಸೂರು – ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ವರುಣಾ ಕೆರೆಯಲ್ಲಿ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳು ಸ್ಥಳೀಯರು ಜತೆಗೆ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ. ದಸರಾ ಅಂಗವಾಗಿ ಪ್ರತಿ ವರ್ಷವೂ ವರುಣಾ ಕೆರೆಯಲ್ಲಿ ಜಲಸಾಹಸ ಕ್ರೀಡೆ ಆಯೋಜಿಸಲಾಗುತ್ತಿದೆ. ಈ ಜಲಸಾಹಸ ಕ್ರೀಡೆಯನ್ನು ದಸರಾಗೆ ಮಾತ್ರವಲ್ಲದೆ ವರ್ಷವಿಡೀ ನಡೆಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

ಇದಕ್ಕಾಗಿ ಔಟ್‌ಬ್ಯಾಕ್‌ ಅಡ್ವೆಂಚರಸ್‌ ಸಂಸ್ಥೆಗೆ ಐದು ವರ್ಷಗಳ ಟೆಂಡರ್‌ ನೀಡಿದೆ. ಟೆಂಡರ್‌ ಪಡೆದ ಸಂಸ್ಥೆ ಜಲಸಾಹಸ ಕ್ರೀಡೆಗೆ ಬೇಕಾದ ಮೂಲಸೌಲಭ್ಯ ಕಲ್ಪಿಸಿ, ಜಲಸಾಹಸ ಕ್ರೀಡೆಗಳು ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿದೆ. ಪ್ರಮುಖವಾಗಿ ಕೆರೆಯಲ್ಲಿ ಸೇತುವೆ, ಕೊಠಡಿ ನಿರ್ಮಾಣ, ಕೆರೆ ಸ್ವತ್ಛತೆ ಕಾರ್ಯ ಆರಂಭಿಸಿ ಅಚ್ಚುಕಟ್ಟಾಗಿ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಿದೆ.

12 ಮಂದಿ ತಂಡ: ಜಲಸಾಹಸ ಕ್ರೀಡೆಗೆ ಹೇಳಿ ವರುಣಾ ಕೆರೆ ಹೇಳಿಮಾಡಿಸಿದಂತಿದೆ. ಟೆಂಡರ್‌ ಪಡೆದಿರುವ ಔಟ್‌ಬ್ಯಾಕ್‌ ಸಂಸ್ಥೆ ಜಲಸಾಹಸ ಕ್ರೀಡೆಗಳನ್ನು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರವೇಶ ದ್ವಾರದಲ್ಲಿ ಟಿಕೆಟ್‌ ಕೌಂಟರ್‌ ಆರಂಭಿಸಿದ್ದು, ಟಿಕೆಟ್‌ ಪಡೆದವರು ರೆಡ್‌ಝೊàನ್‌ನಿಂದ ಲೈಫ್ಜಾಕೆಟ್‌ ಧರಿಸಿ ಬೋಟ್‌ಗಳಿರುವ ಸ್ಥಳಕ್ಕೆ ತೆರಳಬೇಕು. 

ಅಲ್ಲದೆ ಸಾರ್ವಜನಿಕರ ಸುರಕ್ಷತೆಗೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಜಲಸಾಹಸ ಕ್ರೀಡೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಲೈಫ್ ಜಾಕೆಟ್‌ ಧರಿಸಬೇಕಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲೆಂದೆ ಇಂಡಿಯನ್‌ ವಾಟರ್‌ ಇನ್ಸ್‌ಟಿಟ್ಯೂಟ್‌ನಿಂದ ತರಬೇತಿ ಪಡೆದ 12 ಮಂದಿ ನುರಿತ ಈಜುಗಾರರಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ, ರೆಸ್ಟೋರೆಂಟ್‌ ನಿರ್ಮಿಸಲಾಗಿದೆ.

ಯಾವ್ಯಾವ ಕ್ರೀಡೆಗೆ ಎಷ್ಟು ದರ: ಜೆಟ್‌ಸ್ಕಿ-450 ರೂ., ವಾಟರ್‌ ಟ್ರ್ಯಾಂಪೋಲಿನ್‌-150 ರೂ., ಸ್ಪೀಡ್‌ ಬೋಟ್‌-200 ರೂ., ಬನಾನ ರೈಡ್‌-300 ರೂ., ಸ್ಟಿಲ್‌ ವಾಟರ್‌ ರ್ಯಾಫ್ಟಿಂಗ್‌-100 ರೂ., ಕಯಾಕಿಂಗ್‌-100 ರೂ., ಕ್ಯಾನೋಯಿಂಗ್‌-100 ರೂ. ಹಾಗೂ ಪೆಡಲ್‌ ಬೋಟ್‌-100 ರೂ. 

ಸಚಿವರಿಂದ ಚಾಲನೆ: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವರುಣಾ ಕೆರೆಯಲ್ಲಿ ಆಯೋಜಿಸಿರುವ ಜಲಸಾಹಸ ಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ಬೋಟ್‌ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು. ಔಟ್‌ಬ್ಯಾಕ್‌ ಅಡ್ವೆಂಚರಸ್‌ ಸಂಸ್ಥೆ ನಡೆಸುತ್ತಿರುವ ಜಲಸಾಹಸ ಕ್ರೀಡೆಯಲ್ಲಿ ಜೆಟ್‌ಸ್ಕಿ, ವಾಟರ್‌ ಟ್ರ್ಯಾಂಪೋಲಿನ್‌, ಸ್ಪೀಡ್‌ ಬೋಟ್‌, ಬನಾನ ರೈಡ್‌, ಸ್ಟಿಲ್‌ ವಾಟರ್‌ ರ್ಯಾಫ್ಟಿಂಗ್‌, ಕಯಾಕಿಂಗ್‌, ಕ್ಯಾನೋಯಿಂಗ್‌, ಪೆಡಲ್‌ ಬೋಟ್‌ ಕ್ರೀಡೆಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ. 

ಈ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಪಿ.ಜನಾರ್ದನ್‌, ಔಟ್‌ಬ್ಯಾಕ್‌ ಅಡ್ವೆಂಚರಸ್‌ ಸಂಸ್ಥೆಯ ಸಹ ಮಾಲಿಕ ಅಲೀಂ ಇನ್ನಿತರರು ಹಾಜರಿದ್ದರು.

ದಸರಾ ಮಹೋತ್ಸವಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಆಯೋಜಿಸಿರುವ ಜಲಸಾಹಸ ಕ್ರೀಡೆ ಆಕರ್ಷಣೀಯವಾಗಿದೆ. ಇದಲ್ಲದೆ ಓಪನ್‌ ಬಸ್‌ ವ್ಯವಸ್ಥೆಯನ್ನೂ ಕಲ್ಪಿಸಿದೆ. ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ಆಕರ್ಷಕವಾಗಿರಲಿದೆ. ದಸರೆಗಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು 2-3 ದಿನಗಳಲ್ಲಿ ಮುಗಿಯಲಿವೆ. 
-ಜಿ.ಟಿ.ದೇವೇಗೌಡ, ಉಸ್ತುವಾರಿ ಸಚಿವ

ದಸರಾ ವೇಳೆ ಜನರ ಅನುಕೂಲಕ್ಕಾಗಿ ಆಕಾಶ್‌ ಅಂಬಾರಿ ಯೋಜನೆಯಡಿ ಮೈಸೂರು-ಬೆಂಗಳೂರು ನಡುವೆ ವಿಮಾನಯಾನ ಆರಂಭಿಸಿದ್ದು ಕೇವಲ 999 ರೂ.ಗೆ ವಿಶೇಷ ಪ್ಯಾಕೇಜ್‌ ನೀಡಲಾಗಿದೆ. ಮೊದಲ ಬಾರಿಗೆ ಓಪನ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ ಟಿಕೆಟ್‌ ಪಡೆದು ಎಲ್ಲಾ ಪ್ರವಾಸಿ ತಾಣಗಳಿಗೂ ಭೇಟಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. 
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

ಟಾಪ್ ನ್ಯೂಸ್

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Kabaka: ಮನೆಯಿಂದ ಮಾದಕ ವಸ್ತು ವಶ?

Kabaka: ಮನೆಯಿಂದ ಮಾದಕ ವಸ್ತು ವಶ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Udupi: ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಸಮಾರೋಪ

Udupi: ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಸಮಾರೋಪ

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.