ಜಮಖಂಡಿ ಶುಗರ್ ವಿರುದ್ಧ ಪ್ರತಿಭಟನೆ
Team Udayavani, Oct 6, 2018, 12:02 PM IST
ಸಿಂದಗಿ: ರೈತರ ಕಬ್ಬಿನ ಬಾಕಿ ಹಣ ನೀಡದೇ ಇರುವ ಜಮಖಂಡಿ ಶುಗರ್ ನಾದ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಂಡು ರೈತರಿಗೆ ನೀಡುವ ಹಣ ಬಿಡುಗಡೆ ಮಾಡಿ ಇಲ್ಲವೆ ರೈತರಿಗೆ ವಿಷ ಕೊಡಿ ಎಂದು ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಸವರಾಜ ಕಡಕಬಾವಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ರೈತರು ಬೆಳೆದ ತೊಗರಿ ಇನ್ನಿತರೆ ಬೆಳೆಗಳಿಗೆ ಬೆಳೆ ಬರುವುದಿಲ್ಲ ಎಂದು ಕಬ್ಬು ಬೆಳೆದರೂ ರೈತನ ಕೈಗೆ ಹಣ ಸೇರುತ್ತಿಲ್ಲ. ಕಬ್ಬು ಕಟಾವುಮಾಡಿ ಸಕ್ಕರೆ ಕಾರ್ಖಾನೆಗೆ ಕಳುಹಿಸಿದರೆ ರೈತರಿಗೆ ಸಕ್ಕರೆ ಕಾರ್ಖಾನೆಯವರು ಹಣ ನೀಡುತ್ತಿಲ್ಲ. ಅದರಲ್ಲಿ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿನ ಜಮಖಂಡಿ ಶುಗರ್ ಸಕ್ಕರೆ ಕಾರ್ಖಾನೆ ರೈತರ ಪಾಲಿಗೆ ಪಾಷಾಣವಾಗಿದೆ ಎಂದು ಆರೋಪಿಸಿದರು.
ಇಂಡಿ ತಾಲೂಕಿನ ನಾದ ಗ್ರಾಮದಲ್ಲಿನ ಜಮಖಂಡಿ ಶುಗರ್ ಸಕ್ಕರೆ ಕಾರ್ಖಾನೆಗೆ ಸಿಂದಗಿ ತಾಲೂಕಿನ ಸಾಕಷ್ಟು ರೈತರು ಕಬ್ಬು ನೀಡಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ 10 ಕೋಟಿ ರೂ. ಬಾಕಿ ನೀಡಬೇಕಾಗಿದೆ. ಹೀಗಾದಲ್ಲಿ ರೈತರ ಪಾಡೇನು? ಪ್ರತಿ ವರ್ಷ ಜಮಖಂಡಿ ಶುಗರ್ಕಾ ರ್ಖಾನೆಯವರು ರೈತರಿಗೆ ಹಣ ನೀಡುವಲ್ಲಿ
ಸತಾಯಿಸುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಜಮಖಂಡಿ ಶುಗರ್ ಕಾರ್ಖಾನೆಯವರು ರೈತರಿಂದ ಕಬ್ಬು ಪಡೆಯುವಾಗ ಒಂದು ಮಾತನಾಡುತ್ತಾರೆ. ನಂತರ ಹಣ ಪಡೆಯಲು ಹೋದಾಗ ಅಲ್ಪ ಸ್ವಲ್ಪ ಹಣ ನೀಡಿ ಮೂಗಿಗೆ ತುಪ್ಪ ಹಚ್ಚಿದ ಹಾಗೆ ಮಾಡುತ್ತಾರೆ.
ನಂತರದ ದಿನದಲ್ಲಿ ರೈತರಿಗೆ ಹಣ ನೀಡಲು ಸತಾಯಿಸುತ್ತಾರೆ. ಶೀಘ್ರದಲ್ಲಿ ಹಣ ನೀಡದಿದ್ದಲ್ಲಿ ರೈತರು ಇನ್ನಷ್ಟು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಜಮಖಂಡಿ
ಶುಗರ್ ಸಕ್ಕರೆ ಕಾರ್ಖಾನೆ ಮುಟ್ಟುಗೊಲು ಹಾಕಿ ರೈತರಿಗೆ ಬಾಕಿ ಹಣ ನೀಡುವಂತೆ ಮಾಲೀಕರಿಗೆ ಹಾಗೂ ವ್ಯವಸ್ಥಾಪಕರಿಗೆ ಸೂಚಿಸಬೇಕು. ಅವರು ಒಪ್ಪದ ಪಕ್ಷದಲ್ಲಿ ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ಹರಾಜು ಮಾಡಿ ರೈತರಿಗೆ ಹಣ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸಹಕಾರಿಯಾಗಬೇಕು. ಇಲ್ಲವೇ ಅವರಿಂದಲೇ ರೈತರಿಗೆ ವಿಷದ ಪೊಟ್ಟಣ ವಿತರಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಮಹೇಶ ಸಾವಳಸಂಗ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಸರಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಜಮಖಂಡಿ ಶುಗರ್ನಂಥಹ ಸಕ್ಕರೆ ಕಾರ್ಖಾನೆಗೆ ತಕ್ಕ ಪಾಠ ಕಲಿಸಬೇಕು. ರೈತರ ಬಾಕಿ ಹಣ ನೀಡದಂತ ಜಮಖಂಡಿ ಶುಗರ್ ಕಾರ್ಖಾನೆ ಮಾನ್ಯತೆ ರದ್ದು ಮಾಡುವ ಮೂಲಕ ಉಳಿದ ಸಕ್ಕರೆ ಕಾರ್ಖಾನೆಗಳಿಗೂ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಜಿ. ಬಿರಾದಾರ ಆಸಂಗಿಹಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಡಂಬಳ, ಹನುಮಂತ ಬಿಜಾಪುರ, ಈರಯ್ಯ ಮಠಪತಿ, ಇಮಾಮಸಾಬ ಬೈರೋಡಗಿ, ರಾಜು ಮಾಲಗಾರ, ಬಾಪುಗೌಡ ಚೌಧರಿ, ಗೋಲ್ಲಾಳಪ್ಪ ಡಂಬಳ, ನಿಂಗಯ್ಯ ಮಠಪತಿ, ಕೆಂಚಪ್ಪ ತಳವಾರ, ರಾಯಪ್ಪ ಹಳಗೊಂಡ, ಶಂಕ್ರಯ್ಯ ಹಳಗೊಂಡ, ಶಂಕ್ರಯ್ಯ ಹಿರೇಮಠ, ಚಂದ್ರಶೇಖರ ಕೋಟ್ಯಾಳ, ಅಮರಪ್ಪ ಬೆಕಿನಾಳ, ಸಿದ್ದಪ್ಪ ಚೋರಗಸ್ತಿ, ಸಿದ್ದಪ್ಪ ಚೋರಗಸ್ತಿ, ಮಲ್ಲಪ್ಪ ಹವಳಗಿ, ನಿಂಗಪ್ಪ ನಾಗೂರ, ಭೀಮಣ್ಣ ಬನ್ನೆಟ್ಟಿ, ರವೀಂದ್ರ ಚೋರಗಸ್ತಿ, ನಿಂಗಣ್ಣ ಕರಿಶೆಟ್ಟಿ ಸೇರಿಂದತೆ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.