ಹತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Team Udayavani, Oct 6, 2018, 12:23 PM IST

vij-2.jpg

ವಿಜಯಪುರ: ಬುದ್ಧಿಮಾಂದ್ಯ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜು ಪವಾರ, ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಭಾಗ-2 ತಾಂಡಾದಲ್ಲಿ ಬುದ್ಧಿಮಾಂದ್ಯ ವಿಕಲಚೇತನ ಅಪ್ರಾಪೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿಲಾಗಿದೆ. ಅನಾಮಧೇಯವಾಗಿ ತೊಗರಿ ಜಮೀನಿನಲ್ಲಿ ಸಿಕ್ಕ ಶವವನ್ನು ಪತ್ತೆ ಹಚ್ಚಲಾಗಿದೆ.

ನಿಡಗುಂದಿ ಠಾಣೆ ಪೊಲೀಸರು ಭವಿಷ್ಯದಲ್ಲಿ ಇಂಥ ಕೃತ್ಯಗಳು ಜರುಗದಂತೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು ಎಂದು ಆಗ್ರಹಿಸಿದರು.

ನೀಲಕಂಠ ಚವ್ಹಾಣ, ಸಂತೋಷ ಚವ್ಹಾಣ, ಗೋಪಿಚಂದ ಚವ್ಹಾಣ, ಅನಿಲ ಚವ್ಹಾಣ, ವಿಕಾಸ ಪವಾರ, ತಾರಾಸಿಂಗ್‌ ರಾಠೊಡ, ಸಂಜೀವ ಚವ್ಹಾಣ, ಶ್ರೀಕಾಂತ ಚವ್ಹಾಣ, ರಾಜು ರಾಠೊಡ, ಸಂಜೀವ ಚವ್ಹಾಣ, ವಿನೋದ ಚವ್ಹಾಣ, ವಿಕಾಸ ಚವ್ಹಾಣ, ಕುಮಾರ ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು. 

ಮುದ್ದೇಬಿಹಾಳ: ಚಿಮ್ಮಲಗಿ ತಾಂಡಾದ ಮಂದಬುದ್ಧಿಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿ ಅಂಗವಿಕಲರು ಶುಕ್ರವಾರ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಮರುದಿನ ಸಂಜೆ ಹೊಲವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಬಾಲಕಿ ಶವ ಮುಂದಿಟ್ಟುಕೊಂಡು ಅಹೋರಾತ್ರಿ ಹೋರಾಟ ನಡೆಸಿದ್ದರು. ಆರೋಪಿಗಳ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನು ಪೊಲೀಸರು, ಸರ್ಕಾರಿ ಅಧಿಕಾರಿಗಳು ನೀಡಿದ್ದರಿಂದ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ಒದಗಿಸಿಕೊಡಲಾಗಿತ್ತು. ಘಟನೆ ನಡೆದು 3 ದಿನಗಳಾದರೂ ಇದುವರೆಗೂ ಆರೋಪಿಗಳ ಬಂಧನ ಆಗದಿರುವುದು ಅನುಮಾನ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪೊಲಿಸ್‌ ಇಲಾಖೆ ಕೂಡಲೇ ಹೆಚ್ಚು ಸಕ್ರಿಯವಾಗಿ ತನಿಖೆ ನಡೆಸುವ ಮೂಲಕ ಆರೋಪಿಗಳು ಯಾರೇ ಆಗಿರಲಿ, ಎಷ್ಟೇ ಪ್ರಭಾವಶಾಲಿಯಾಗಿರಲಿ ಅವರೆಲ್ಲರನ್ನೂ ಬಂಧಿಸಿ ಗಲ್ಲು ಶಿಕ್ಷೆ ದೊರಕುವಂತೆ ನೋಡಿಕೊಂಡು ಹತ್ಯಾಚಾರಿಗಳಿಗೆ ಪಾಠ
ಕಲಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿಅಂಗವಿಕಲರು ಒಂದಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುದ್ದೇಬಿಹಾಳ ತಾಲೂಕು ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳ ಒಕ್ಕೂಟ, ಅಂಗವಿಕಲರ ಪಾಲಕರ ಒಕ್ಕೂಟ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್‌.ಕೆ. ಘಾಟಿ, ಪಿ.ಪಿ. ಚಲವಾದಿ, ಈರಯ್ಯ ಹಿರೇಮಠ ಹಿರೇಮುರಾಳ, ಸಂಗಣ್ಣ ಹುಣಶ್ಯಾಳ, ಪ್ರಭುಗೌಡ ಚಿಂಚೋಳಿ, ರುದ್ರಗೌಡ ಗೌಡರ, ಶಶಿಕಾಂತ ಯಾಳಗಿ, ರಾಜು ರಾಠೊಡ, ಎಸ್‌.ಸಿ. ಮೇಟಿ, ಯಲ್ಲಪ್ಪ ಮಾದರ, ರೇಣುಕಾ ಕೋಳೂರ, ಸಂಗಮ್ಮ ಜಂಬಗಿ, ಸಂಗಣ್ಣ ಮದರಿ, ನಿಂಗಪ್ಪ ಹೊಕ್ರಾಣಿ, ಅಲ್ತಾಫ್‌ ಮೂಲಿಮನಿ, ಅಡಿವೆಪ್ಪ ಕೊಡಗಾನೂರ, ಈರಮ್ಮ ಮಡಿವಾಳರ, ಸಂಗಮ್ಮ ಕಂಚಲಕಾಯಿ, ಚನ್ನವೀರ ಮಮ್ಮದಕೋಟಿ, ಬಾಲಪ್ಪ ಬಿಸಲದಿನ್ನಿ ಇದ್ದರು.

ಇಂಡಿ: ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ಎಲ್‌ಟಿ ಗ್ರಾಮದಲ್ಲಿ ಬುದ್ಧಿಮಾಂಧ್ಯಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿ ಧಿಸಲು ಆಗ್ರಹಿಸಿ ತಾಲೂಕಿನ ಅಂಗವಿಕರು ಹಾಗೂ ಪಾಲಕರ
ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಕರ್ನಾಟಕ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಎಸ್‌.ಎಂ. ಮಕಾಂದಾರ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಹಾಗೂ ಕೊಲೆ ಕೃತ್ಯಗಳು ನಡೆಯುತ್ತಿರುವುದು ಖೇದಕರ ಸಂಗತಿ. ಈ ಕಾರ್ಯ ಮಾಡಿದ ಆರೋಪಿಗಳಿಗೆ ಗಲ್ಲಿಗೇರಿಸಬೇಕು. ಆರೋಪಿಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಿವಲಿಂಗಪ್ಪ ನಾಯ್ಕೊಡಿ , ಸೋಮಯ್ಯ ಮೋಮಿನ, ನೀಲಮ್ಮ ಶಿವಶರಣ, ಪಾಂಡು ರಾಠೊಡ, ಭರಮಣ್ಣ ಪೂಜಾರಿ, ಸಂತೋಷ ಚೌಹಾಣ, ಹಸೀನಾ ಬಿರಾದಾರ, ಮುಸ್ತಾಕ ಮೋಮಿನ, ಆನಂದ ತೋಡಕರ,
ರಮೇಶ ರಾಠೊಡ, ಬೀರಪ್ಪ ಡಂಬಳ,ಅಶೋಕ ರಾಠೊಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಟಾಪ್ ನ್ಯೂಸ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.