ಶೌಚಾಲಯ ಬಳಕೆ ಮುಖ್ಯ
Team Udayavani, Oct 6, 2018, 12:28 PM IST
ಬೆಂಗಳೂರು: ಕಟ್ಟಿಸಿದ ಶೌಚಾಲಯಗಳನ್ನು ಜನರು ಬಳಕೆ ಮಾಡಿದಾಗ ಮಾತ್ರ ಸರ್ಕಾರದ “ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ ಎಂಬ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಯೂನಿಸೆಫ್ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯು ಶುಕ್ರವಾರ ಹಮ್ಮಿಕೊಂಡಿದ್ದ “ಬಯಲು ಬಹಿರ್ದೆಸೆ ಮುಕ್ತ-ಸುಸ್ಥಿರತೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಬಯಲು ಬಹಿìದೆಸೆ ಮುಕ್ತ ಗುರಿಯನ್ನು ಸಾಧಿಸಲಿದೆ.
ನಮ್ಮ ಗುರಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಾಣ ಆಗಲಿವೆ. ಕೇವಲ ಶೌಚಾಲಯಗಳ ನಿರ್ಮಾಣ ಮಾಡಿದ್ದರಷ್ಟೇ ಗುರಿ ಸಾಧಿಸಿದಂತಾಗುವುದಿಲ್ಲ ಎಂದು ತಿಳಿಸಿದರು.
ಕಟ್ಟಿಸಿದ ಶೌಚಾಲಯಗಳನ್ನು ಬಳಸುವುದು ಮುಖ್ಯ. ಜನರು ಶೌಚಾಲಯಗಳ ಬಳಕೆ ಆರಂಭಿಸಿದಾಗ ಮಾತ್ರ ಯೋಜನೆ ಸಾರ್ಥಕ ಮತ್ತು ಸಾಕಾರಗೊಳ್ಳುತ್ತದೆ. ಈ ದಿಸೆಯಲ್ಲಿ ಜನರ ಆಲೋಚನೆ ಮತ್ತು ಜೀವನ ಶೈಲಿ ಬದಲಾವಣೆ ಆಗಬೇಕಾಗಿದೆ. ಇದಕ್ಕಾಗಿ ಜಾಗೃತಿ ಆಂದೋಲನವನ್ನು ಆಯೋಜನೆ ಅಗತ್ಯ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಸ್ವತ್ಛತೆಯನ್ನು ಸುಸ್ಥಿರವಾಗಿ ಕಾಪಾಡಲು ಸಂಘಟಿತ ಪ್ರಯತ್ನ ಮುಖ್ಯ. ಇದಕ್ಕಾಗಿ ಹಳ್ಳಿಗಳಲ್ಲಿ ಮೊಬೈಲ್ ಬಳಕೆದಾರರ ಒಂದು ವ್ಯವಸ್ಥಿತ ನೆಟ್‌ವರ್ಕ್ ರೂಪಿಸಬೇಕಾಗಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ.
ರಾಜ್ಯದ ಎಲ್ಲ ಗ್ರಾಪಂ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿರುವ ಮೊಬೈಲ್ ಬಳಕೆದಾರರು ಈ ಸ್ವತ್ಛತೆಯ ಅಭಿಯಾನದಲ್ಲಿ ಮೊಬೈಲ್ ಮಾಹಿತಿ ಮೂಲಕ ಪಾಲ್ಗೊಂಡರೆ ದೊಡ್ಡ ಪ್ರಮಾಣದಲ್ಲಿ ನಾವು ಜನರನ್ನು ತಲುಪಬಹುದಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಯೂನಿಸೆಫ್ ಪ್ರತಿನಿಧಿ ಮಿಟಲ್ ರೂಸಾಡಿಯಾ, ಕರ್ನಾಟಕ ಸರ್ಕಾರದ ಬಯಲು ಬಹಿರ್ದೆಸೆ ಮುಕ್ತ ಕಾರ್ಯಕ್ರಮಕ್ಕೆ ಯೂನಿಸೆಫ್ ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಶೌಚಾಲಯಗಳ ನಿರ್ಮಾಣದ ಜೊತೆಗೆ ಅವುಗಳ ನಿರ್ವಹಣೆಗೂ ಸಹ ಗಮನಹರಿಸಬೇಕು ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಲ್.ಕೆ. ಅತೀಕ್, ಯೂನಿಸೆಫ್ನ ಪ್ರತಿನಿಧಿ ಸುಜೊಯ್ ಮುಜುಂದಾರ್, ಇಲಾಖೆಯ ಆಯುಕ್ತ ಡಾ.ಆರ್. ವಿಶಾಲ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.