ಕಿಟಕಿ ಮೂಲಕ ಹಣದ ಬ್ಯಾಗ್ ಎಸೆದ ಅಧಿಕಾರಿ!
Team Udayavani, Oct 6, 2018, 12:29 PM IST
ಬೆಂಗಳೂರು: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಸ್ವಾಮಿ ಅವರ ನಿವಾಸಗಳ ಮೇಲೆ ಶುಕ್ರವಾರ ಎಸಿಬಿ ದಾಳಿ ನಡೆಸಿದ ವೇಳೆಯಲ್ಲಿ ಹಣದ ಬ್ಯಾಗ್ ಹಾಗೂ ಆಸ್ತಿ ದಾಖಲೆ ಕಿಟಕಿಯಿಂದ ಹೊರಗೆ ಎಸೆಯುವ ಪ್ರಯತ್ನವೂ ನಡೆಯಿತು. ಆದರೆ, ಎಸಿಬಿ ಅಧಿಕಾರಿಗಳು ಅದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು.
ಬೆಳಗ್ಗೆ 6 ಗಂಟೆ ಸುಮಾರಿಗೆ 15 ಮಂದಿ ಎಸಿಬಿ ಅಧಿಕಾರಿಗಳು ಮನೆಯ ಬಾಗಿಲು ಬಡಿಯುತ್ತಿದ್ದಂತೆ ಎಚ್ಚೆತ್ತ ಸ್ವಾಮಿ ಸುಮಾರು 45 ನಿಮಿಷಗಳ ಕಾಲ ಬಾಗಿಲು ತೆರೆದಿರಲಿಲ್ಲ. ಈ ವೇಳೆ ತಮ್ಮ ಫ್ಲ್ಯಾಟ್ ಮೇಲ್ಭಾಗದಲ್ಲಿರುವ ಸಹೋದರಿಗೆ ಕರೆ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮತ್ತು ನಗದು ಹಣವನ್ನು ಕೆಳಗಡೆ ಎಸೆಯುವಂತೆ ಸೂಚಿಸಿದ್ದು, ನಾನು ಕೂಡ ಬ್ಯಾಗ್ ಎಸೆಯುತ್ತೇನೆ.
ಅದನ್ನು ಆಟೋ ಚಾಲಕನೊಬ್ಬ ಕೊಂಡೊಯ್ದು ರಹಸ್ಯ ಸ್ಥಳದಲ್ಲಿ ಇಡುತ್ತಾನೆ ಎಂದಿದ್ದರು. ಅದರಂತೆ ಇಬ್ಬರು ಬ್ಯಾಗ್‌ಗಳನ್ನು ಎಸೆದಿದ್ದಾರೆ. ಆದರೆ, ಎರಡು ಬ್ಯಾಗ್‌ಗಳ ಪೈಕಿ ಸ್ವಾಮಿ ಎಸೆದ ಬ್ಯಾಗ್ ಅಪಾರ್ಟ್‌ಮೆಂಟ್‌ನಲ್ಲಿರುವ ಅಳವಡಿಸಿರುವ ಪೈಪ್‌ಗ್ಳ ಮೇಲೆ ಬಿದ್ದಿದ್ದೆ.
ಮತ್ತೂಂದು ಕೆಳಗಡೆ ಬಿದ್ದಿದ್ದೆ. ಇದನ್ನು ಕೊಂಡೊಯ್ಯುಲು ಬಂದ ಆಟೋ ಚಾಲಕನನ್ನು ಕೂಡಲೇ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬ್ಯಾಗ್‌ಗಳಲ್ಲಿ ಹಣ, ಚಿನ್ನಾಭರಣ ಮಾತ್ರವಲ್ಲದೆ, ಬಿಬಿಎಂಪಿಗೆ ಸಂಬಂಧಿಸಿದ ಕಡತಗಳು ಹಾಗೂ ಕೆಲ ಕೆಐಎಡಿಬಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
ಬಾತ್‌ರೂಂನಲ್ಲಿತ್ತು ವಿದೇಶಿ ಕರೆನ್ಸಿ?: ಸ್ವಾಮಿ ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ಭಾರತೀಯ ನೋಟುಗಳು ಮಾತ್ರವಲ್ಲದೆ, ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. ಬಾತ್‌ರೂಂನಲ್ಲಿ ರಹಸ್ಯವಾಗಿ ವಿದೇಶಿ ಕರೆನ್ಸಿಗಳು ಹಾಗೂ ನಿಷೇಧಿತ 500 ಮತ್ತು 1000 ಸಾವಿರ ಮುಖಬೆಲೆಯ ನೋಟುಗಳು, ಹಳೇ ಕಾಲದ ನಾಣ್ಯಗಳು ಮತ್ತು ಹತ್ತಾರು ಬಾರಿ ವಿದೇಶಕ್ಕೆ ತೆರಳಿದ್ದ ದಾಖಲೆಗಳು ಕೂಡ ಸಿಕ್ಕಿವೆ ಎನ್ನಲಾಗಿದೆ.
15ಕ್ಕೂ ಹೆಚ್ಚು ಪ್ರಕರಣಗಳು: ಎಸಿಬಿ ಕೇಂದ್ರ ಕಚೇರಿಯ ಕೂಗಳತೆ ದೂರದಲ್ಲಿರುವ ಕೆಐಎಡಿಬಿ ಕಚೇರಿಯಲ್ಲಿ ಟಿ.ಆರ್.ಸ್ವಾಮಿ ನಡೆಸುತ್ತಿದ್ದ ಭಾರಿ ಭ್ರಷ್ಟಾಚಾರದ ಬಗ್ಗೆ ಭ್ರಷ್ಟಚಾರ ನಿಗ್ರಹ ದಳಕ್ಕೆ ಸುಮಾರು 15ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಆರೋಪಿತ ಅಧಿಕಾರಿಯ ವಿರುದ್ಧ ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿದೆ. ಸ್ವಾಮಿ ವಿರುದ್ಧ 2014ರಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿಯೂ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ.
ಐಟಿ, ಇಡಿಗೆ ಮಾಹಿತಿ: ಸ್ವಾಮಿ ಮತ್ತು ಗೌಡಯ್ಯ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣ ಹಾಗೂ ದಾಖಲೆಗಳ ಬಗ್ಗೆ ಲೆಕ್ಕಪರಿಶೋಧಕರಿಂದ ಪರಿಶೀಲಿಸಲಾಗುವುದು. ಒಂದು ವೇಳೆ ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಮಾಹಿತಿ ಪತ್ತೆಯಾದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.