ಸಾದಾತ್ ದರ್ಗಾದಲ್ಲಿ ಅರೇಬಿಕ್ ಶಾಸನ ಪತ್ತೆ
Team Udayavani, Oct 6, 2018, 12:33 PM IST
ವಿಜಯಪುರ: ಶಾಸನ ಸಂಶೋಧನೆ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸಂಶೋಧಕ ಹಾಗೂ ಸಿಕ್ಯಾಬ್ ಪಪೂ ಕಾಲೇಜಿನ ಉಪನ್ಯಾಸಕ ಡಾ|ಎ.ಎಲ್. ನಾಗೂರ ಸಾದಾತ್ ಮಸೀದಿ ದರ್ಗಾ ಸ್ಥಳದಲ್ಲಿ ಅಪ್ರಕಟಿತ ಅರೇಬಿಕ್ ಶಾಸನವು ಪತ್ತೆ ಮಾಡಿ ಅಧ್ಯಯನ ಮಾಡಿದ್ದಾರೆ. ಸದರಿ ಶಾಸನ ಅರೇಬಿಯಾ ದೇಶದ ತುರೇಮಿ ಪಟ್ಟಣ ಸಮೀಪದ ಹಜರ್ ಮೌತ್‌ನಿಂದ ವಿಜಯಪುರ ನಗರಕ್ಕೆ ಆಗಮಿಸಿದ ಖಾದ್ರಿಯಾ ಶಾಖೆಯ ಸೂಫೀ ಸಂತರಾದ ಸೈಯದ್ ಶಾಹ ಜಾಫರ ಸಕಾಫ್ ಇವರ ನಿಧನದ ಕುರಿತ ಮಾಹಿತಿ ನೀಡುತ್ತದೆ. ಮಹ್ಮದ ಆದಿಲಶಾಹನ ಕಾಲಕ್ಕೆ ಸೇರಿದ ಈ ಶಾಸನದಲ್ಲಿ ಒಟ್ಟು 10 ಪಂಕ್ತಿಗಳನು ಹೊಂದಿದ್ದು, 8ನೇ ಪಂಕ್ತಿ ಮಾತ್ರ ಪರ್ಶಿಯನ್ ಭಾಷೆಯಲ್ಲಿದೆ. ಅಲ್ಲಾಹನು ಪರಮದಯಾಳು; ಆತನೊಬ್ಬನೆ ಮೊಹಮ್ಮದರು (ಸ) ಆತನ ಪ್ರವಾದಿಗಳು.
ಅಲ್ಲಾಹನ ಸಂತರ ಮೇಲೆ ಯಾವುದೇ ಭಯ ದುಖಗಳು ಉಂಟಾಗವು, ಇದು ನಿಸ್ಸಂಶಯ. ಅವರ ಸಮಾ ಪವಿತ್ರವಾದುದು. ಗುರುವಿನ ಗುರುವಾದ ಸಾದಾತರ ಮುಖ್ಯಸ್ಥರಾದ ಸೈಯದ ಶಾಹ ಜಾಫರ್ ಸಕಾಫ್ ಅವರಿಗೆ ಗೌರವಾರ್ಪಣೆ. ಅರೇಬಿಯಾದ ತುರೇಮಿ ಪ್ರದೇಶದಿಂದ ಬಂದು ವಿಜಯಪುರದಲ್ಲಿ ನೆಲೆಸಿದ್ದಾರೆ. ಸೈಯದ್ ಅಬ್ದುಲ್ಲಾ ಅವರ ಪುತ್ರರಿವರು. ತುರೇಮಿ ಪಟ್ಟಣದ ಹಜರ್ ಮೌತ್‌ನವರು. ಪ್ರವಾದಿ ಮೊಹಮ್ಮದರ (ಸ) ನಂತರದ 28ನೆ ತಲೆಮಾರಿಗೆ ಸೇರಿದವರು. ಸೈಯದ್ ಶಾಹ ಜಾ´‚ರ್ ಸಕಾ´‚ರವರು 20, ಜಿಲಾVದಾ 1057ರಲ್ಲಿ(ಹಿ.ಶ) ಸ್ವರ್ಗಸ್ಥರಾದರು ಎಂದು ಶಾಸನದ ವಿವರಿಸುತ್ತದೆ ಎಂದು ಡಾ| ನಾಗೂರ ಹೇಳಿದ್ದಾರೆ. ಸಂತ ಸಯ್ಯದ ಶಾಹ ಜಾ´‚ರ್ ಸಕಾ´‚ರವರು ವಿಜಯಪುರದಲ್ಲಿ ನೆಲೆಸಿದ್ದಕ್ಕೆ ಸಾಕ್ಷಿಯಾಗಿ ಸೂಫೀ ‚ ಮಠ (ಖಾನಖಾ) ಒಂದು ಅಲಿಕ್ ರೋಜಾ ಪ್ರದೇಶದಲ್ಲಿ ಇದೆ. ಈ ಶಾಸನದ ಶೋಧ ಕಾರ್ಯದಲ್ಲಿ ಸಾದಾತ್ ದರ್ಗಾದ ಸಜ್ಜಾದೆ ನಶೀನ್ ಮತ್ತು ಖಾನದಾನಿ ಮುತವಲ್ಲಿಗಳಾದ ಸೈಯದ್ ಆಮೀರ ಸಕಾ´‚… ಸಾದಾತ್ ಮತ್ತು ಅವರ ವಂಶಸ್ಥ ಅರೇಬಿಕ್ ಪಂಡಿತ ಸೈಯದ್ ಮುರ್ತುಜಾ ಖಾದ್ರಿ ಸಕಾಫ್ ಸಾದಾತ್ ಅವರು ನೆರವನ್ನು ನೀಡಿದ್ದಾರೆ ಎಂದು ಶಾಸನ ಮಾಹಿತಿ ನೀಡುತ್ತದೆ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.