ಹೀಗೂ ಮಾಡಬಹುದು ಕೋಲ್ಡ್ ಕಾಫಿ !
Team Udayavani, Oct 6, 2018, 2:48 PM IST
ಕಾಫಿ ಎಂದರೆ ಯಾರಿಗೆ ತಾನೇ ಪ್ರಿಯವಲ್ಲ. ಒಂದು ಕಪ್ ಕುಡಿ ದರೆ ಮತ್ತೂಂದು ಕಪ್ ಬೇಕೆನಿಸುವಷ್ಟು ಸ್ವಾದ ಹೊಂದಿರುವ ಕಾಫಿಯೂ ಈಗ ಕೋಲ್ಡ್ ಕಾಫಿಯಾಗಿ, ವಿವಿಧ ಫ್ಲೇವರ್ ಗಳಲ್ಲಿ ಲಭ್ಯವಿವೆ. ಹೊಟೇಲ್, ಕಾಫಿ ಡೇಯಲ್ಲಿ ಮಾತ್ರ ಸಿಗುವ ವಿವಿಧ ಫ್ಲೇವರ್‌ನ ಕೋಲ್ಡ್ ಕಾಫಿಯನ್ನು ಮಾಡುವುದು ಸುಲಭ. ಇದನ್ನು ಮಾಡುವ ಕಲೆ ರೂಪಿಸಿಕೊಂಡರೆ ಮನೆಗೆ ಅತಿಥಿಗಳು ಬಂದಾಗ, ನಿಮಗೂ ಕುಡಿಯಬೇಕೆಂದಿನಿಸಿದಾಗ ಮಾಡಿ ಸವಿಯಬಹುದು.
ಬಿಸಿಲಿನಿಂದ ದಣಿದು ಮನೆಗೆ ಬಂದಾಗ, ತಂಪುತಂಪಾದ ಪಾನೀಯ ಕುಡಿಯಬೇಕೆಂದೆನಿಸಿದಾಗ ಮನೆ ಮಂದಿಗೆ, ಅತಿಥಿಗಳಿಗೆ ಕೋಲ್ಡ್ ಕಾಫಿ ಮಾಡಿಕೊಟ್ಟರೆ ಎಲ್ಲರೂ ಫುಲ್ ಖುಷ್ ಆಗುವುದು ಮಾತ್ರ ಸುಳ್ಳಲ್ಲ.
ಕೋಲ್ಡ್ ಕಾಫಿಯಲ್ಲಿ ನಾನಾ ಫ್ಲೇವರ್ ಗಳಿದ್ದರೂ ಎಲ್ಲದರ ಟೇಸ್ಟ್ ಸೂಪರ್ ಆಗಿಯೇ ಇರುತ್ತದೆ. ಮಕ್ಕಳಂತೂ ಇದನ್ನು ಖುಷಿಯಿಂದ ಸವಿಯುತ್ತಾರೆ. ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಕೋಲ್ಡ್ ಕಾಫಿಯಿಂದ ಸಮಯದ ಉಳಿತಾಯನೂ ಆಗುತ್ತೆ. ಎಷ್ಟೇ ತುರ್ತು ಸಂದರ್ಭವಿದ್ದರೂ ಮಾಡಿ ಕುಡಿಯಬಹುದು.
ಮೊದಲಿಗೆ ಇನ್ ಸ್ಟೆಂಟ್ ಕಾಫಿ ಪೌಡರ್‌ನಿಂದ ಅಥವಾ ಸ್ಟ್ರಾಂಗ್ ಕಾಫಿ ಡಿಕಾಕ್ಷನ್ ಮಾಡಿಟ್ಟುಕೊಳ್ಳಿ. ಜತೆಗೆ ಕಾಫಿಗೆ ಬೇಕಾದಷ್ಟು ಸಕ್ಕರೆ ಅಥವಾ ಸಕ್ಕರೆ ಪೌಡರ್ ಬೆರೆಸಿ, ಕುದಿಸಿ ತಣಿಯಲು ಬಿಡಿ. ಹಾಲನ್ನು ಕಾಯಿಸಿ ಫ್ರಿಜ್ ನಲ್ಲಿಟ್ಟಿರಿ. ಬೇಕಾದಾಗ, ಬೇಕಾದಷ್ಟು ಕಾಫಿ ಡಿಕಾಕ್ಷನ್ ಗೆ ತಂಪಾದ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಲು ಹೆಚ್ಚು ಕೋಲ್ಡ್ ಇಲ್ಲದೇ ಇದ್ದರೆ ಐಸ್ ಕ್ಯೂಬ್ ಗಳನ್ನೂ ಸೇರಿಸಬಹುದು.
ಹೀಗೆ ಸಿದ್ಧಪಡಿಸಿದ ಕೋಲ್ಡ್ ಕಾಫಿಯನ್ನು ಗ್ಲಾಸ್ ನಲ್ಲಿ ಹಾಕಿ ಸರ್ವ್ ಮಾಡಬಹುದು. ಗಾಜಿನ ಲೋಟದಲ್ಲಿ ಇದನ್ನು ಸರ್ವ್ ಮಾಡುವುದರಿಂದ ನೋಡುವಾಗಲೇ ಇದು ಹೆಚ್ಚು ಖುಷಿ ಕೊಡುತ್ತದೆ.
ಕೋಲ್ಡ್ ಕಾಫಿಗೆ ಫ್ಲೇವರ್ ಬೇಕಿ ದ್ದರೆ ಕರಗಿಸಿದ ಚಾಕೊಲೆಟ್ ಅನ್ನು ಗಾಜಿನ ಲೋಟದೊಳಗೆ ಸುತ್ತಲೂ ಸವರಿ. ಬಳಿಕ ಅದಕ್ಕೆ ಕೋಲ್ಡ್ ಕಾಫಿ ಹಾಕಬೇಕು. ಈಗ ಇದರ ಮೇಲೆ ನೊರೆ ನಿಂತಿರುತ್ತದೆ. ಅನಂತರ ಫ್ಲೇವರ್ ಬೇಕಿದ್ದರೆ ಚಾಕೋಲೇಟ್, ಓರಿಯೋ ಬಿಸ್ಕೆಟ್ ಪೌಡರ್, ಡ್ರೈಫ್ರು ಟ್ಸ್‌ನ ಪೌಡರ್ ಗಳನ್ನು ಹಾಕಿ ಕೊಂಡರೆ ಕೋಲ್ಡ್ ಕಾಫಿಯ ಸ್ವಾದ ಮತ್ತಷ್ಟು ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ ನಿಮಗಿಷ್ಟವಾದ ಐಸ್ ಕ್ರೀಮ್ ಹಾಕಿಕೊಂಡು ಕೂಡ ಕಾಫಿ ಕುಡಿಯಬಹುದು. ವಿವಿಧ ಬಣ್ಣದ ಕ್ರೀಮ್ ಗಳಿಂದ ಕಾಫಿಯ ಮೇಲೆ ಅಲಂಕರಿಸಿದರೆ ಕಾಫಿಯ ಸೌಂದರ್ಯದೊಂದಿಗೆ ಸ್ವಾದವೂ ಹೆಚ್ಚುತ್ತದೆ.
ಇಷ್ಟೇ ಅಲ್ಲದೇ ಡ್ರೈಫ್ರುಟ್ಸ್‌ನ ತುಣುಕು, ಬ್ರೆಡ್ ಸ್ಲೈಸ್ ಗಳನ್ನೂ ಈ ಕಾಫಿಯೊಳಗೆ ಸೇರಿಸಬಹುದು. ಒಟ್ಟಿನಲ್ಲಿ ಕಾಫಿಯ ಸ್ವಾದ ಹೆಚ್ಚಲು ಹೊಸ ಹೊಸ ಫ್ಲೇವರ್ ಗಳನ್ನು ಮನೆಯಲ್ಲೇ ಟ್ರೈ ಮಾಡಿ ನೋಡಬಹುದು. ವಿಭಿನ್ನ ಮತ್ತು ವಿಶೇಷ ಸ್ವಾದ ಹೊಂದಿರುವ ಈ ಕೋಲ್ಡ್ ಕಾಫಿ ಮನೆ ಮಂದಿಯ, ಅತಿಥಿಗಳ ಮನಗೆಲ್ಲುವುದು ಗ್ಯಾರಂಟಿ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.