ದಸರಾ ಪ್ರಯುಕ್ತ ವಿಶೇಷ ರೈಲು ಸಂಚಾರ
Team Udayavani, Oct 7, 2018, 6:35 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ದಸರಾ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್ (06557) ರೈಲು ಅ.9ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ. ಅದೇ ರೀತಿ ಅ.10ರಿಂದ 22ರ ವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್ ರೈಲು ಸಂಚರಿಸಲಿದೆ.
ಶಿವಮೊಗ್ಗ ಟೌನ್-ಶ್ರವಣಬೆಳಗೊಳ ವಾರದಲ್ಲಿ ಮೂರು ದಿನ ಸಂಚಾರದ ವಿಶೇಷ ಎಕ್ಸ್‌ಪ್ರೆಸ್ (06223) ರೈಲು ಅ.9ರಿಂದ 25ರವರೆಗೆ ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗ್ಗೆ 6:25ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ
11:25ಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ.
ಅ.9ರಿಂದ25ರವರೆಗೆಶ್ರವಣಬೆಳಗೊಳ-ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ (06224) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಮಧ್ಯಾಹ್ನ 1:35ಕ್ಕೆ ಶ್ರವಣಬೆಳಗೊಳದಿಂದ ಪ್ರಯಾಣ ಬೆಳೆಸಿ ಸಂಜೆ 7:10ಕ್ಕೆ ಶಿವಮೊಗ್ಗ ಟೌನ್ ಸೇರಲಿದೆ.
ಹಾಲ್ಟ್ ನಿಲ್ದಾಣಗಳ ಸೇವೆ ಸ್ಥಗಿತ: ನೈಋತ್ಯ ರೈಲ್ವೆ ಕೆಲವು ಹಾಲ್ಟ್ ನಿಲ್ದಾಣಗಳನ್ನು 3 ತಿಂಗಳ ಅವಧಿಗೆ ಬಂದ್ ಮಾಡಿದೆ. ಆದಿಚುಂಚನಗಿರಿ, ಸಿದ್ದಾಪುರ, ಪಾಲಹಳ್ಳಿ, ದೊಡ್ಡನಟ್ಟ, ಗಣ್ಣಘಟ್ಟ, ಗೊಟ್ಟಿಹಳ್ಳಿ, ಗಿಡ್ನಹಳ್ಳಿ ಹಾಲ್ಟ್ ನಿಲ್ದಾಣಗಳನ್ನು ಅ.7ರಿಂದ ಮೂರು ತಿಂಗಳ ಅವಧಿಗೆ ಬಂದ್ ಮಾಡಲಾಗುವುದು.
ಯಶವಂತಪುರ-ಮೈಸೂರು ಪ್ಯಾಸೆಂಜರ್(56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ; ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.