ಪುತ್ತೂರು: ನಿವೇಶನ ಕೊರತೆ ನೀಗಿಸಲು ಫ್ಲ್ಯಾಟ್‌ ಯೋಜನೆ 


Team Udayavani, Oct 7, 2018, 11:30 AM IST

7-october-6.gif

ಪುತ್ತೂರು: ಜಿಲ್ಲೆಯಲ್ಲಿ ಜಾಗದ ಕೊರತೆ ಇದೆ. ಆದರೆ ಇನ್ನೊಂದು ಕಡೆಯಲ್ಲಿ ನಿವೇಶನ ರಹಿತರ ಅರ್ಜಿಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಫ್ಲ್ಯಾಟ್‌ ನಿರ್ಮಿಸುವ ಯೋಜನೆ ಇದೆ. ವಾರದೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳ ಮಾಹಿತಿ ಸಂಗ್ರಹಿಸಿ, ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು.

ಜಿಲ್ಲೆಯಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಶನಿವಾರ ಹಮ್ಮಿಕೊಂಡ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರೀಲ್‌ ಸಮೀಪದ ಮಹಿಳೆಯೊಬ್ಬರು ದೂರು ನೀಡಿದ್ದು, ಅರ್ಜಿ ನೀಡಿ 4 ವರ್ಷಗಳಾಗಿವೆ. ಆದರೂ ಇದುವರೆಗೆ ನಿವೇಶನ ಸಿಕ್ಕಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ವಸತಿ ಯೋಜನೆ ಜಾರಿಗೆ ತರುವ ಆಲೋಚನೆ ಇದೆ. ಇದಕ್ಕಾಗಿ ಜಿ ಪ್ಲಸ್‌ 2, ಜಿ ಪ್ಲಸ್‌ 4 (ಸಣ್ಣ ಅಪಾರ್ಟ್‌ಮೆಂಟ್‌ ಮಾದರಿ) ನಿವೇಶನ ನಿರ್ಮಿಸಲಾಗುವುದು. ಹೀಗೆ ಮಾಡಿದರೆ ಒಮ್ಮೆಗೇ ಹಲವು ನಿವೇಶನಗಳನ್ನು ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಹೊಸದಾದ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇದನ್ನು ಜಿಲ್ಲೆಯ ಪ್ರತಿ ತಾಲೂಕಿಗೂ ಅನ್ವಯಿಸಲಾಗುವುದು. ನಗರಸಭೆ ಸಹಿತ ಗ್ರಾಮಾಂತರದಲ್ಲೂ ಸರಕಾರಿ ಜಾಗಗಳನ್ನು ಗುರುತಿಸಬೇಕು. ವಾರದೊಳಗೆ ಇದರ ವಿವರ ನೀಡಬೇಕು. ಸಮೀಪ ಖಾಸಗಿ ಜಮೀನು ಇದ್ದರೂ ಅವರ ಮನವೊಲಿಸಲು ಪ್ರಯತ್ನಿಸಿ. ಈ ಜಾಗದಲ್ಲಿ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಲಾಗುವುದು ಎಂದರು.

ಅಕ್ರಮ ತೆರವಿಗೂ ಒತ್ತಡ!
ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಗೂಡಂಗಡಿ ನಡೆಸಲಾಗುತ್ತಿದೆ ಎಂಬ ದೂರು ಬಂದಿತ್ತು. ಈ ಬಗ್ಗೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರಲ್ಲಿ ಪ್ರಶ್ನಿಸಿದಾಗ, ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಆದರೆ ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಒತ್ತಡವೂ ಬರುತ್ತಿದೆ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಕ್ರಮ ಎಂದರೆ ತೆರವು ಮಾಡಲೇಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಗುರುತಿಸಿ, ಅಲ್ಲಿಗೆ ಕಳುಹಿಸಿಕೊಡಿ ಎಂದರು.

ಸಿಬಂದಿ ಕೊರತೆ
ಕೊಳ್ತಿಗೆ ಗ್ರಾ.ಪಂ.ನಲ್ಲಿ ಸಿಬಂದಿ ಕೊರತೆ ಇದೆ. ಎರಡು ವರ್ಷಗಳಿಂದ ಕೆಲಸ ಬಾಕಿ ಇದೆ. ಹುದ್ದೆ ಭರ್ತಿ ಮಾಡಿ ಎಂದು ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಕರೆದು ವಿಚಾರಿಸಿದಾಗ, ಸಿಬಂದಿ ನೇಮಕಾತಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ಈ ಬಗ್ಗೆ ಮಾತನಾಡಿದ ಉದಯ ಭಟ್‌, ಅನುಕಂಪದ ಆಧಾರದಲ್ಲಿ ವ್ಯಕ್ತಿಯೊಬ್ಬರಿಗೆ ಈ ಹುದ್ದೆಯನ್ನು ನೀಡಬೇಕಾಗಿತ್ತು. ಆದರೆ ಗ್ರಾ.ಪಂ. ಆಡಳಿತ ಬೇರೊಬ್ಬರ ನೇಮಕಾತಿ ಮಾಡಲು ಮುಂದಾಗಿತ್ತು. ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ಜಿ.ಪಂ. ಸಿಇಒ ಸೆಲ್ವಮಣಿ ಆರ್‌. ಮಾತನಾಡಿ, ತಡೆಯಾಜ್ಞೆ ತರಲಾಗಿದೆ ಎಂದು ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಇದನ್ನು ಜಿ.ಪಂ. ಗಮನಕ್ಕೆ ತಂದು, ವಕೀಲರ ಮೂಲಕ ಫೈಟ್‌ ಮಾಡಬೇಕಿತ್ತು. ತಕ್ಷಣ ತಡೆಯಾಜ್ಞೆ ತೆರವು ಮಾಡಿ, ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಕುಡಿಯುವ ನೀರು ಕಟ್‌
ಮೋನಪ್ಪ ಮಾತನಾಡಿ, ಕುಡಿಯುವ ನೀರಿನ ಸಂಪರ್ಕವನ್ನು ಕೊಳ್ತಿಗೆ ಗ್ರಾ.ಪಂ. ಕಡಿತ ಮಾಡಿದೆ. ಈ ಬಗ್ಗೆ ಠಾಣೆಗೆ, ಗ್ರಾ.ಪಂ.ಗೆ ದೂರು ನೀಡಿದ್ದೇನೆ ಎಂದರು. ಪ್ರತಿಕ್ರಿಯಿಸಿದ ಶಾಸಕ ಸಂಜೀವ ಮಠಂದೂರು, ಕುಡಿಯುವ ನೀರಿಗಾಗಿ ಓರ್ವ ಜನಸಾಮಾನ್ಯ ಜಿಲ್ಲಾಧಿಕಾರಿವರೆಗೆ ಬಂದಿದ್ದಾರೆ ಎಂದರೆ ಪಿಡಿಒಗಳು ಏನು ಮಾಡುತ್ತಿದ್ದಾರೆ? ಇದು ತೀರಾ ಗಂಭೀರ ವಿಚಾರ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾನೂನು ಹೋರಾಟ ಮಾಡುತ್ತಿದ್ದಾರೆ, ಅದು ಪ್ರತ್ಯೇಕವಾಗಿ ಇರಲಿ. ಆದರೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಕಡಿತ ಮಾಡಬಾರದು. ತತ್‌ಕ್ಷಣವೇ ಸಂಪರ್ಕ ನೀಡಿ ಎಂದು ಆದೇಶಿಸಿದರು.

ಜನಪ್ರತಿನಿಧಿಗಳ ಸೀಟೇ ಬೇಕು!
ಸುಗಮವಾಗಿ ಸಭೆ ನಡೆಸುವ ಹಿನ್ನೆಲೆಯಲ್ಲಿ ಜನಪ್ರತಿಧಿಗಳಿಗೆ, ಸಾರ್ವಜನಿಕರಿಗೆ, ಮನವಿದಾರರಿಗೆ, ಅಧಿಕಾರಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಂಬೇಡ್ಕರ್‌ ತತ್ವ ರಕ್ಷಣ ವೇದಿಕೆಯ ಪ್ರಮುಖರು ಜನಪ್ರತಿನಿಧಿಗಳ ಸಾಲಿನಲ್ಲೇ ಕುಳಿತು, ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದರು. ಗ್ರಾಮಕರಣಿಕರು, ಕಂದಾಯ ನಿರೀ ಕ್ಷಕರು, ಉಪತಹಶೀಲ್ದಾರ್‌, ಸಹಾಯಕ ಆಯುಕ್ತರು ಬಳಿ ಬಂದು ತಮಗೆ ಕಾಯ್ದಿರಿಸಿದ ಆಸನದಲ್ಲಿ ಕುಳಿತು ಕೊಳ್ಳುವಂತೆ ಮನವಿ ಮಾಡಿಕೊಂಡರು. ಬಳಿಕ ಬಂದ ಜನಪ್ರತಿನಿಧಿಗಳು ಮನವಿದಾರರ ಆಸನದಲ್ಲಿ ಕುಳಿತುಕೊಳ್ಳಬೇಕಾಯಿತು.

ಡಂಪಿಂಗ್‌ ಯಾರ್ಡ್‌
ರಾಮಚಂದ್ರ ನೆಕ್ಕಿಲು ವಿಷಯ ಪ್ರಸ್ತಾವಿಸಿ, ಡಂಪಿಂಗ್‌ ಯಾರ್ಡ್‌ ಸಮಸ್ಯೆ ಅತಿರೇಕಕ್ಕೆ ಹೋಗಿದೆ ಎಂದರು. ಪ್ರತಿಕ್ರಿಯಿಸಿದ ಪೌರಾಯುಕ್ತೆ ರೂಪಾ ಶೆಟ್ಟಿ, ಡಂಪಿಂಗ್‌ ಯಾರ್ಡ್‌ ಸ್ಥಳಾಂತರಕ್ಕೆ ಜಾಗದ ಕೊರತೆ ಇದೆ. ಡಂಪಿಂಗ್‌ ಯಾರ್ಡ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ. ಇದರ ಅಭಿವೃದ್ಧಿಗಾಗಿ 4.5 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. 3 ದಶಕಗಳ ಹಿಂದೆ ಈ ಡಂಪಿಂಗ್‌ ಯಾರ್ಡ್‌ ನಿರ್ಮಿಸಲಾಗಿದೆ. ಆಗ ಅಲ್ಲಿ ಯಾವುದೇ ಮನೆಗಳು ಇರಲಿಲ್ಲ. ಇದೀಗ ಸುತ್ತಮುತ್ತ ಇರುವ ಮನೆಗಳಿಗೆ ಹಕ್ಕುಪತ್ರವೇ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಭಿಕರೊಬ್ಬರು, ಕಚೇರಿಯೊಳಗೆ ಕುಳಿತ ಅಧಿಕಾರಿಗಳಿಗೆ ಕೊಳೆತ ವಾಸನೆ ಹೇಗೆ ಬರಲು ಸಾಧ್ಯ? ಸುತ್ತಲಿನ ಮನೆಯವರಿಗೆ ಮಾತ್ರ ಈ ವಾಸನೆ ಬಡಿಯುತ್ತಿದೆ ಎಂದರು. ಮುಂದುವರಿಸಿದ ರಾಮಚಂದ್ರ ನೆಕ್ಕಿಲು, ಡಂಪಿಂಗ್‌ ಯಾರ್ಡ್‌ ಸುತ್ತಮುತ್ತ 1500 ಜನ ವಾಸವಾಗಿದ್ದಾರೆ. ಪ್ಲಾಸ್ಟಿಕ್‌ ಕ್ಯಾನ್ಸರ್‌ಕಾರಕ ಎನ್ನುವ ನಾವು, ಅದೇ ಪ್ಲಾಸ್ಟಿಕನ್ನು ರಾಶಿ ಹಾಕಲಾಗುತ್ತಿದ್ದೇವೆ. ಸರಿಯಾಗಿ ವಿಲೇ ಆಗುತ್ತಿಲ್ಲ. ಮನೆ ಇಲ್ಲ ಎನ್ನುವುದು ಸುಳ್ಳು ಎಂದ ಅವರು, ಪೌರಾಯುಕ್ತರ ಹೇಳಿಕೆಯನ್ನು ಖಂಡಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಸಮಸ್ಯೆ ಇರುವುದು ನಿಜ. ಆದರೆ ಇದಕ್ಕೊಂದು ಪರಿಹಾರವನ್ನು ಸಾರ್ವಜನಿಕರೇ ನೀಡಿ ಎಂದರು. ಮಾತನಾಡಿದ ಇಸಾಕ್‌ ಸಾಲ್ಮರ, ಈ ಡಂಪಿಂಗ್‌ ಯಾರ್ಡನ್ನು ಕಠಾರಕ್ಕೆ ಶಿಫ್ಟ್‌ ಮಾಡಬಹುದು ಎಂದರು. ನಗರಸಭೆಯ ತ್ಯಾಜ್ಯವನ್ನು ಗ್ರಾಮಾಂತರಕ್ಕೆ ಶಿಫ್ಟ್‌ ಮಾಡುವುದು ಬೇಡ ಎಂದು ಆರ್‌.ಸಿ. ನಾರಾಯಣ್‌ ಹೇಳಿದರು. ಈ ವಿಚಾರ ಚರ್ಚೆಗೆ ಗ್ರಾಸವಾಯಿತು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಪರಿಹಾರ ನೀಡಲು ಕೇಳಿದ್ದೇನಷ್ಟೇ. ಈ ರೀತಿಯ ವ್ಯರ್ಥ ಚರ್ಚೆ ಸರಿಯಲ್ಲ. ಈ ವಿಚಾರದ ಬಗ್ಗೆ ಇನ್ನೊಮ್ಮೆ ಮಾತಾನಾಡುವ ಎಂದರು. 

ತುಳು ಒಂತೆ ಬರ್ಪುಂಡು! 
ಕುಡಿಯುವ ನೀರಿನ ವಿಷಯದಲ್ಲಿ ದೂರುದಾರರು ತುಳುವಿನಲ್ಲಿ ವಿಷಯ ಮಂಡಿಸಿದರು. ವೇದಿಕೆಯಲ್ಲಿದ್ದ ಎಲ್ಲ ಅಧಿಕಾರಿಗಳು ಮುಖ- ಮುಖ ನೋಡಿಕೊಂಡರೇ ಹೊರತು ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಆಗ ಸಭೆಯಲ್ಲಿ, ಜಿಲ್ಲಾಧಿಕಾರಿಗೆ ತುಳು ಬರುವುದಿಲ್ಲ ಎಂದು 
ಧ್ವನಿಯೊಂದು ಕೇಳಿಬಂದಿತು. ತಕ್ಷಣ ಉತ್ತರಿಸಿದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ‘ಒಂತೆ ಬರ್ಪುಂಡು ತುಳು’ ಎಂದರು. ಜಿಲ್ಲಾಧಿಕಾರಿ ಅವರ ಪ್ರತಿಕ್ರಿಯೆಗೆ ಸಭಿಕರು ಚಪ್ಪಾಳೆ ತಟ್ಟಿದರು.

ಟಾಪ್ ನ್ಯೂಸ್

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.