ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ
Team Udayavani, Oct 7, 2018, 11:43 AM IST
ಹಳೆಯಂಗಡಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು- ಪಾವಂಜೆ ಸಂಪರ್ಕಿಸುವ ರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಇತ್ತೀಚೆಗೆ ಕಾಂಕ್ರೀಟ್ ಹಾಕಲಾಗಿದ್ದು, ರಸ್ತೆ ವ್ಯವಸ್ಥಿತವಾಗಿದ್ದರೂ ಪಕ್ಕದಲ್ಲೇ ನಂದಿನಿ ನದಿ ಹರಿಯುತ್ತಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆ ಸಂಚಾರ ಸುಗಮವಾದ ಬಳಿಕ ವಾಹನಗಳ ವೇಗವೂ ಹೆಚ್ಚಾಗಿದೆ. ಆದರೆ ನಂದಿನಿ ನದಿಯ ಬದಿ ಸುರಕ್ಷೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ತಾತ್ಕಾಲಿಕವಾಗಿಯಾದರೂ ಇಲ್ಲಿ ಎಚ್ಚರಿಕೆ ಫಲಕವಾಗಿ ನದಿ ಬದಿಯಲ್ಲಿ ತಡೆಗೋಡೆಯಂತಹ ಸಣ್ಣ ಸಣ್ಣ ಕಂಬಗಳನ್ನು ಅಳವಡಿಸಿದರೆ ಒಂದಷ್ಟು ಆತಂಕ ದೂರವಾಗಬಹುದು ಎನ್ನುತ್ತಾರೆ ಸ್ಥಳೀಯರು.
ಈ ರಸ್ತೆಯಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್ ವತಿಯಿಂದ ದಾರಿ ದೀಪದ ವ್ಯವಸ್ಥೆ ಮಾಡಲಾಗಿದೆ. ನದಿಯ ಬದಿ ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಸಹಿತ ನೇರವಾಗಿ ನದಿಗೆ ಬೀಳುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವೇಗ ನಿಯಂತ್ರಣಕ್ಕೆ ಹಂಪ್ ಅಳವಡಿಸಲಿ
ನದಿ ಪಕ್ಕದಲ್ಲಿ ರಸ್ತೆಯನ್ನು ನಿರ್ಮಿಸುವಾಗಲೇ ಯೋಜನೆಯಲ್ಲಿ ಅಳವಡಿಸಿಕೊಂಡು ಸಂಚಾರಿಗಳ ಸುರಕ್ಷೆಗೆ ಕ್ರಮಗೊಂಡಿದ್ದಲ್ಲಿ ಸಹಕಾರಿಯಾಗುತ್ತಿತ್ತು. ಸುವ್ಯವಸ್ಥಿತವಾದ ರಸ್ತೆ ಮೇಲೆ ವಾಹನಗಳು ವೇಗವಾಗಿ ಸಾಗದೇ ಇರಲು ಹಂಪ್‌ಗಳನ್ನಾದರೂ ಕನಿಷ್ಠ ಅಳವಡಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಂತ ಹಂತವಾಗಿ ಕ್ರಮ
ಮೊದಲ ಹಂತವಾಗಿ ರಸ್ತೆಗೆ ಕಾಂಕ್ರೀಟ್ ಹಾಕಗಿದೆ. ಅನಂತರ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಹೆಚ್ಚುವರಿ ಅನುದಾನವನ್ನು ಶಾಸಕರ ಹಾಗೂ ಸಂಸದರ ನಿಧಿಯಿಂದಲೇ ಪಡೆಯಬೇಕಾಗಿದೆ. ಆದ್ದರಿಂದ ಇಲ್ಲಿನ ಸಮಸ್ಯೆಗಳನ್ನು ಅವರಲ್ಲಿ ಮನವರಿಕೆ ಮಾಡಲಾಗುವುದು.
– ಜೀವನ್‌ಪ್ರಕಾಶ್
ಕಾಮೆರೊಟ್ಟು, ಸದಸ್ಯರು, ತಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.