ನಿಂತಿಕಲ್ಲು ಜಂಕ್ಷನ್: ಬಸ್ ನಿಲ್ದಾಣ, ಶೌಚಾಲಯ ಒದಗಿಸಿ
Team Udayavani, Oct 7, 2018, 11:56 AM IST
ಬೆಳ್ಳಾರೆ : ಈ ಭಾಗದ ಅನೇಕ ಊರುಗಳಿಗೆ ಸಂಪರ್ಕದ ಕೊಂಡಿಯಾದ ನಿಂತಿಕಲ್ಲು ಜಂಕ್ಷನ್ ಮೇಲ್ನೋಟಕ್ಕೆ ಎಲ್ಲ ಸುಸಜ್ಜಿತಗೊಂಡ ವ್ಯವಸ್ಥೆಗಳಿದ್ದಂತೆ ಕಂಡರೂ, ಬಗೆಹರಿಯದ ಸಮಸ್ಯೆಗಳು ಸಾಕಷ್ಟಿವೆ. ಇಲ್ಲಿ ಮೂಲಸೌಕರ್ಯಗಳ ಕೊರತೆ ಇಲ್ಲಿ ಎದ್ದು ಕಾಣುತ್ತಲಿದೆ.
ನಿಂತಿಕಲ್ಲು ಪುತ್ತೂರು-ಸುಳ್ಯವನ್ನು ಸಂಪರ್ಕಿಸುವ ಗಡಿಭಾಗವಾಗಿದ್ದು, ಕಾಣಿಯೂರು- ಪುತ್ತೂರು, ಬೆಳ್ಳಾರೆ- ಪುತ್ತೂರನ್ನು ಸಂಪರ್ಕಿಸುವ ಮುಖ್ಯ ಜಂಕ್ಷನ್ ಇದಾಗಿದೆ. ಪುತ್ತೂರು ನಗರದಿಂದ ಕಾಣಿಯೂರು ಹಾಗೂ ಬೆಳ್ಳಾರೆ ಮಾರ್ಗದ ಮಧ್ಯೆ ಈ ಜಂಕ್ಷನ್ ಇದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನೂ ಸಂಪರ್ಕಿಸುವ ರಸ್ತೆ ಇದಾಗಿದೆ. ಪಂಜ – ಕೊಡಿಂಬಳವಾಗಿ ಧರ್ಮಸ್ಥಳಕ್ಕೂ ಸಂಪರ್ಕ ಸಾಧಿಸಲು ಈ ರಸ್ತೆ ಸಹಾಯವಾಗಿದೆ. ಹೀಗೆ ಹಲವು ಪ್ರದೇಶಗಳಿಗೆ ಕೊಂಡಿಯಾಗಿರುವ ನಿಂತಿಕಲ್ಲಿನಲ್ಲಿ ಸಮರ್ಪಕವಾದ ಮೂಲ ಸೌಕರ್ಯಗಳೇ ಇಲ್ಲ.
ಬಸ್ ನಿಲ್ದಾಣದ ಕೊರತೆ
ಬಹಳ ವರ್ಷಗಳಿಂದಲೂ ಇಲ್ಲಿಗೆ ಸುಸಜ್ಜಿತವಾದ ಬಸ್ ನಿಲ್ದಾಣಕ್ಕೆ ಸಾರ್ವಜನಿಕರ ಬೇಡಿಕೆ ಇತ್ತು. ಬೇಡಿಕೆಗೆ ಅನುಸಾರವಾಗಿ ಬಸ್ ನಿಲ್ದಾಣವನ್ನು ನಿರ್ಮಸಲಾಗಿದ್ದರೂ ಉಪಯೋಗಕ್ಕೆ ಬಾರದೇ ಬಿಕೋ ಎನ್ನುತ್ತಿದೆ. ಈ ನಿಲ್ದಾಣದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.
ಶೌಚಾಲಯ ಇದ್ದರೂ ಉಪಯೋಗಕ್ಕಿಲ್ಲ!
ಇಲ್ಲಿನ ಸಾರ್ವಜನಿಕ ಶೌಚಾಲಯದ ಸ್ಥಿತಿ ಶೋಚನೀಯ. ಗ್ರಾ.ಪಂ. ವ್ಯಾಪ್ತಿಗೆ ಬರುವ ಈ ಶೌಚಾಲಯವು ನಾಮಕಾವಾಸ್ತೆಗೆ ಮಾತ್ರ. ಒಂದೇ ಕಟ್ಟಡದಲ್ಲಿ ಐದು ಶೌಚಾಲಯವಿದ್ದರೂ, ಅದರಲ್ಲಿ ನಾಲ್ಕು ಶೌಚಾಲಯವು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಸದಾ ಬೀಗ ಜಡಿದಿರುತ್ತದೆ. ಉಳಿದಿರುವ ಒಂದು ಶೌಚಾಲಯವೂ ಬಹಳ ದುರ್ವಾಸನೆಯಿಂದ ಕೂಡಿದೆ. ಮೇಲ್ನೋಟಕ್ಕೆ ಶುಚಿತ್ವವಿದ್ದಂತೆ ಕಂಡರೂ, ಒಳಗಡೆ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಈ ಅವ್ಯವಸ್ಥೆಗಳಿಂದಾಗಿ ಮುಖ್ಯವಾಗಿ ಮಹಿಳೆಯರಿಗೆ ಭಾರೀ ತೊಂದರೆಯಾಗುತ್ತಿದೆ.
ಇಲ್ಲಿ ರಿಕ್ಷಾ ಚಾಲಕರಿಗೆ ಉತ್ತಮ ನಿಲ್ದಾಣವಿಲ್ಲ. ಮೇಲ್ಛಾವಣಿಯಿಲ್ಲದೆ ಮಳೆ ಹೊಡೆತ ಹಾಗೂ ಬಿಸಿಲಿನ ತಾಪಮಾನವನ್ನು ಸಹಿಸಿಕೊಂಡೇ ಕರ್ತವ್ಯ ನಿರ್ವಹಿಸಬೇಕು. ಚಾಲಕರ ಸಂಘದ ಸದಸ್ಯರೆಲ್ಲರೂ ಕೂಡಿ ತಮ್ಮ ಸ್ವಂತ ವೆಚ್ಚದಿಂದ ತಾತ್ಕಾಲಿಕವಾಗಿ ಶೇಡ್‌ನೆಟ್ ಒಂದನ್ನು ಕಂಬಗಳ ಮೇಲೆ ಕಟ್ಟಿ ತಾವೇ ರಿಕ್ಷಾ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿನ ಅವ್ಯವಸ್ಥೆಗಳನ್ನು ಎಣ್ಮೂರು ಗ್ರಾ.ಪಂ. ಸರಿಪಡಿಸಬೇಕಾಗಿದೆ. ಆದರೆ ಅವರು ಕಾಳಜಿ ತೋರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಶೀಘ್ರವಾಗಿ ಬಗೆಹರಿಸುತ್ತೇವೆ
ಶೌಚಾಲಯದ ಕುರಿತು ದೂರುಗಳು ಬಂದಿದ್ದು,ಶೀಘ್ರವಾಗಿ ಬಗೆಹರಿಸಿಕೊಡುತ್ತೇವೆ. ನೂತನವಾದ ಬಸ್ ನಿಲ್ದಾಣವನ್ನು ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸಾರ್ವಜನಿಕ ಕುಡಿಯುವ ನೀರೀನ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲಾಗುತ್ತದೆ.
– ಜಾನಕಿ
ಎಣ್ಮೂರು ಗ್ರಾ.ಪಂ. ಅಧ್ಯಕ್ಷೆ
ನಿರ್ಲಕ್ಷ್ಯ ಎದ್ದು ಕಾಣುತ್ತಿದೆ
ಎಣ್ಮೂರಿನ ಗ್ರಾ.ಪಂ. ಕೇವಲ ಬಾಯಲ್ಲಿ ಮಾತ್ರ ಅಭಿವೃದ್ಧಿ ಎನ್ನುತ್ತಿದೆ. ಆದರೆ ಕೆಲಸಗಳು ಮಾತ್ರ ಎಲ್ಲಿಯೂ ಗೋಚರವಾಗುವುದಿಲ್ಲ. ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅನೇಕ ವರ್ಷಗಳಿಂದ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಬೇಡಿಕಯಿದ್ದು, ಜತೆಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಿ ಇಲ್ಲ. ನಮಗೆ ಸರಿಯಾದ ರಿಕ್ಷಾ ನಿಲುಗಡೆಗೆ ವ್ಯವಸ್ಥೆಗೆ ಮನವಿ ಅನೇಕ ಬಾರಿ ಮಾಡಿಯಾಗಿದೆ. ಸಾರ್ವಜನಿಕ ಶೌಚಾಲಯವೂ ಸರಿಯಾಗಿಲ್ಲ.
– ಅಬ್ದುಲ್ ರಝಾಕ್, ರಿಕ್ಷಾ ಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.